25 ಬಾರಿ ಇರಿದು ಯುವಕನ ಬರ್ಬರ ಹತ್ಯೆ; ಅರ್ಧರಾತ್ರಿ ಮೃತದೇಹವನ್ನು ದಾರಿಯುದ್ಧಕ್ಕೂ ಎಳೆದಾಡಿದ್ರು

delhi

ನವದೆಹಲಿ: ಚಾಕುವಿನಿಂದ 25 ಬಾರಿ ಇರಿದು ಅಪ್ರಾಪ್ತರಿಂದ ಯುವಕನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಜೀವ ಹೋಗುವವರೆಗೂ ದೇಹವನ್ನು ದಾರಿಯುದ್ಧಕ್ಕೂ ಎಳೆದಾಡಿರುವ ಘಟನೆ ನಡೆದಿದೆ. ಮೃತರನ್ನು ಗೌರವ್(22) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಶ್ರೀರಾಮ ವನವಾಸದಲ್ಲಿ ಮಾಂಸ ಸೇವಿಸಿದ್ದ; ಒಟಿಟಿ ಫ್ಲಾಟ್​ಫಾರ್ಮ್​ ಬಹಿಷ್ಕರಿಸುವಂತೆ ಆಗ್ರಹ

ಮೂವರು ಅಪ್ರಾಪ್ತ ಬಾಲಕರು ಸೇರಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿ ಬಾದರ್‌ಪುರ ಪ್ರದೇಶದಲ್ಲಿ ನಡೆದಿದೆ. ಚಾಕುವಿನಿಂದ 25 ಸಲ ಇರಿದ ಬಳಿಕವೂ ಉಸಿರು ನಿಲ್ಲುವವರೆಗೂ ಯುವಕನಿಗೆ ಥಳಿಸಿ ರಸ್ತೆಯ ತುಂಬ ಎಳೆದಾಡಿದ್ದಾರೆ. ಈ ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಷಯ ತಿಳಿದು ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರನ್ನು ಕಂಡ ಆರೋಪಿಗಳು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. ಐವರು ಆರೋಪಿಗಳನ್ನು ಹೆಡಮುರಿ ಕಟ್ಟಿ ವಶಕ್ಕೆ ಪಡೆದಿದ್ದಾರೆ.

ಅರ್ಮಾನ್ ಅಲಿಯಾಸ್ ಕುರು ತನ್ನ ಮೂವರು ಅಪ್ರಾಪ್ತ ಸ್ನೇಹಿತರೊಂದಿಗೆ ಗೌರವ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಶವವನ್ನು ಸುಮಾರು 60-70 ಮೀಟರ್ ವರೆಗೆ ಎಳೆದೊಯ್ದಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಓಡಲು ಆರಂಭಿಸಿದಾಗ ಒಬ್ಬ ಸಿಕ್ಕಿಬಿದ್ದಿದ್ದಾನೆ.

ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಗೌರವ್ ಮತ್ತು ಮೂವರು ಆರೋಪಿಗಳು ಪರಸ್ಪರ ಪರಿಚಯವಿದ್ದರು. ರಾತ್ರಿ ಈ ಮೂವರು ಆರೋಪಿಗಳು ಗೌರವ್ ಅವರೊಂದಿಗೆ ವಿಷಯಕ್ಕೆ ಜಗಳವಾಡಿದ್ದಾರೆ. ಅರ್ಮಾನ್ ಮತ್ತು ಇತರ ಇಬ್ಬರು ಅಪ್ರಾಪ್ತ ಸಹಚರರು ಗೌರವ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಅಪರಾಧ ಎಸಗಿದ ಬಳಿಕ ಮೂವರು ಆರೋಪಿಗಳು ಗೌರವ್‌ನ ಮೃತದೇಹವನ್ನು ಎಳೆದುಕೊಂಡು ಹೋಗುತ್ತಿದ್ದಾಗ ರಾತ್ರಿ ಗಸ್ತು ತಿರುಗುತ್ತಿದ್ದ ಕಾನ್ಸ್‌ಟೇಬಲ್ ನಟವರ್ ಸಿಂಗ್ ಅದನ್ನು ನೋಡಿದ್ದಾರೆ. ಈ ವೇಳೆ ಕಾನ್ಸ್‌ಟೇಬಲ್ ನಟವರ್ ಸಿಂಗ್‌ಗೆ ಹೊಡೆದು ಗಾಯಗೊಳಿಸಿದ್ದಾರೆ.

ಇದಾದ ನಂತರ ಬಾದರ್‌ಪುರ ಠಾಣೆ ಪ್ರಭಾರಿ ಈಶ್ವರ್ ಸಿಂಗ್, ಹವಾಲ್ದಾರ್ ರಾಜಾರಾಮ್, ಲಕ್ಷ್ಮೀ ನಾರಾಯಣ್, ಕಾನ್‌ಸ್ಟೆಬಲ್ ಪವನ್ ಮತ್ತು ರಾಜೀವ್ ಈ ಮೂವರನ್ನು ಬಹಳ ದೂರ ಹಿಂಬಾಲಿಸಿ ಎಲ್ಲರನ್ನೂ ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Merry Christmas : ‘ರಾತ್ ಅಕೇಲಿ ಥಿ…’ ಹಾಡಿನಲ್ಲಿ ಕತ್ರಿನಾ ಕೈಫ್-ವಿಜಯ್ ಸೇತುಪತಿ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫುಲ್‌ ಫಿದಾ!

Share This Article

ಮನೆಯಲ್ಲೇ ಮಾಡಿ ಟೇಸ್ಟಿ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ಸಿಂಪಲ್​ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪ್ಪಿನಕಾಯಿ ಇಲ್ಲದೆ ಊಟ ಸಂಪೂರ್ಣ ಎನ್ನಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ…

ಪ್ರತಿದಿನ 1 ದಾಳಿಂಬೆ ಸೇವನೆಯಿಂದಾಗುವ ಪ್ರಯೋಜನಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ದಾಳಿಂಬೆ ಪೋಷಕಾಂಶಗಳಿಂದ ತುಂಬಿದೆ ಎಂಬುದು ಮುಚ್ಚಿಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಪ್ರತಿಯೊಬ್ಬರೂ ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು…

ಧೂಮಪಾನ ಬಿಡಲು ಮನಸ್ಸಿದ್ದರೂ ಸಾಧ್ಯವಾಗುತ್ತಿಲ್ಲವೇ?; ನಿಮಗಾಗಿಯೇ ಈ ಟ್ರಿಕ್ಸ್​ | Health Tips

ಪ್ರತ್ಯಕ್ಷವಾಗೋ ಅಥವಾ ಪರೋಕ್ಷವಾಗೋ ನಾವೆಲ್ಲರೂ ನಿಷ್ಕ್ರಿಯ ಧೂಮಪಾನಿಗಳು. ಏಕೆಂದರೆ ನಮ್ಮ ಸುತ್ತಲೂ ಯಾವಾಗಲೂ ಯಾರಾದರೂ ಸಿಗರೇಟ್…