ಚಳಿಗಾಲದಲ್ಲೇ ಫೋನ್​ ಚಾರ್ಜ್ ಬೇಗ ಖಾಲಿ! ನೀವಿದ್ದನ್ನು ಗಮನಿಸಿದ್ದೀರಾ? ಇದರ ಹಿಂದಿರುವ ಕಾರಣ...

ಫೋನ್​ ಚಾರ್ಚಿಂಗ್​ ಚಿತ್ರ
ಫೋನ್​ ಚಾರ್ಚಿಂಗ್​ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಚಳಿಗಾಲದಲ್ಲಿ ಫೋನ್ ಚಾರ್ಚ್​​ ಇನ್ನೂ ಬೇಗ ಖಾಲಿ
  • ಲಿಥಿಯಂ ಐಯನ್​ ಬ್ಯಾಟರಿ ಮೇಲೆ ಪರಿಣಾಮ
  • ಇದರ ಹಿಂದಿರುವ ಅಸಲಿ ಕಾರಣವೇನು ಗೊತ್ತೇ?
Phone Battery: ಸಾಮಾನ್ಯವಾಗಿ ಅದರಲ್ಲೂ ಡಿಜಿಟಲ್​ ಯುಗದ ಮುಖವಾಣಿ ಆಗಿರುವ ಸ್ಮಾರ್ಟ್​ಫೋನ್​ಗಳ ಬಳಕೆ ಪ್ರಸ್ತುತ ಅಧಿಕವೇ.​ ಹೀಗಿರುವಾಗ, ಬಹುಬೇಗ ಫೋನ್​ನಲ್ಲಿ ಬ್ಯಾಟರಿ ಇಳಿಕೆ ಎಂಬ ಹಲವರ ಗೋಳಾಟ ಕೂಡ ಅಧಿಕವೇ. ಬಳಕೆಯ ಮೇಲೆ ಆಯಾ ಮೊಬೈಲ್​ಗಳ ಚಾರ್ಚ್​ ಕಡಿಮೆಯಾಗುತ್ತದೆ. ಇದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಚಳಿಗಾಲದಲ್ಲಿ ಮೈಕೊರೆಯುವ ಚಳಿ, ನಮ್ಮ ಸ್ಮಾರ್ಟ್​ಪೋನ್​ ಬ್ಯಾಟರಿಗಳ ಇಳಿಕೆಗೂ ಕಾರಣವಾಗುತ್ತೆ ಎಂಬ ಸಂಗತಿ ಎಂದಾದರೂ ನಿಮಗೆ ತಿಳಿದಿತ್ತೇ? ಇದು ನಿಜಕ್ಕೂ ಹುಬ್ಬೇರಿಸುವ ವಿಷಯವೇ ಬಿಡಿ.
ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಚಳಿ ವಿಪರೀತವಾಗಿರುತ್ತದೆ. ಆದಾಗ್ಯೂ, ಚಳಿಗಾಲದಲ್ಲಿ ನಮ್ಮ ಮೊಬೈಲ್ ಫೋನ್‌ನಲ್ಲಿ ಬ್ಯಾಟರಿ ಚಾರ್ಜ್ ಎಂದಿನಕ್ಕಿಂತ ಬೇಗ ಖಾಲಿಯಾಗುತ್ತದೆ. ಶೇ.100ರಷ್ಟು ಇದ್ದ ಬ್ಯಾಟರಿ, ಸಾಮಾನ್ಯಕ್ಕಿಂತ ವೇಗವಾಗಿ ಇಳಿಕೆ ಕಾಣುತ್ತಿರುತ್ತದೆ. ಅಷ್ಟಕ್ಕೂ ಇದರ ಹಿಂದಿರುವ ಕಾರಣ ಭೌತಶಾಸ್ತ್ರ (ಫಿಸಿಕ್ಸ್​). ನಮ್ಮ ಮೊಬೈಲ್​ಗಳಲ್ಲಿ ಅಳವಡಿಸಲಾದ "ಲಿಥಿಯಂ ಐಯಾನ್" ಬ್ಯಾಟರಿಗಳು, ಸಣ್ಣ ಗಾತ್ರದಲ್ಲಿದ್ದರೂ ಹೆಚ್ಚಿನ ಶಕ್ತಿಯನ್ನು ಬಳಕೆ ಮಾಡಿಕೊಳ್ಳುತ್ತವೆ. ಚಳಿಗಾಲದಲ್ಲಿ ಇದರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಲಿಥಿಯಂ ಐಯಾನ್​ ಬ್ಯಾಟರಿಗಳು ಕ್ಯಾಥೋಡ್‌ನಿಂದ ಆನೋಡ್‌ಗೆ ಮತ್ತು ಆನೋಡ್‌ನಿಂದ ಕ್ಯಾಥೋಡ್‌ಗೆ ಚಲಿಸುತ್ತವೆ. ಈ ಐಯನ್​ಗಳು ದ್ರವ ಎಲೆಕ್ಟ್ರೋಲೈಟ್ ಮೂಲಕ ಮುಂದುವರಿಯುತ್ತವೆ. ಚಳಿಗಾಲದಲ್ಲಿ ತಾಪಮಾನ ಕುಸಿದಾಗ, ಎಲೆಕ್ಟ್ರೋಲೈಟ್ ಊದುತ್ತದೆ. ಹೀಗಾಗಿ ಪ್ರತಿರೋಧ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಐಯನ್​ನ ಚಲನೆ ಮಂದಗತಿಯಲ್ಲಿ ಸಾಗುತ್ತದೆ. ಇದರರ್ಥ ಬ್ಯಾಟರಿಯು ವಿದ್ಯುತ್ ಪೂರೈಸಲು ಹೆಚ್ಚು ಶ್ರಮಿಸಬೇಕು. ಆದ್ದರಿಂದ, ಚಾರ್ಜ್ ವೇಗವಾಗಿ ಖಾಲಿಯಾಗುತ್ತೆ. ಶೂನ್ಯ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಚಾರ್ಜಿಂಗ್ ಶೇ.70ರಷ್ಟು ವೇಗವಾಗಿ ಕಡಿಮೆಯಾಗುತ್ತದೆ ಎಂದು ಎಲೆಕ್ಟ್ರೋಕೆಮಿಕಲ್ ಸೊಸೈಟಿಯ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆ ತಿಳಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net