ಪುಟಿನ್​ಗೆ ಉಣಬಡಿಸಿದ ಆಹಾರಗಳ ಪೈಕಿ ದುಬಾರಿ ಐಟಂ ಇದು; 1 ಕೆಜಿ ಬೆಲೆ ಎಷ್ಟು? ತಿಳಿದ್ರೆ ಹುಬ್ಬೇರೋದು ಖಚಿತ

ರಷ್ಯಾ ಅಧ್ಯಕ್ಷ ಪುಟಿನ್​ ಸವಿದ ವಿಶೇಷ ಖಾದ್ಯವಿದು
ರಷ್ಯಾ ಅಧ್ಯಕ್ಷ ಪುಟಿನ್​ ಸವಿದ ವಿಶೇಷ ಖಾದ್ಯವಿದು
Published on

ಪ್ರಮುಖ ಮುಖ್ಯಾಂಶಗಳು

  • 2 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದ ರಷ್ಯಾ ಅಧ್ಯಕ್ಷ
  • ಪುಟಿನ್​ಗೆ ಉಣಬಡಿಸಿದ ಮೆನುವಿನಲ್ಲಿದ್ದ ದುಬಾರಿ ಐಟಂ ಇದು
  • ಇದರ ಒಂದು ಕೆಜಿ ಬೆಲೆಯೇ 40ರಿಂದ 50 ಸಾವಿರ ರೂ.
ನವದೆಹಲಿ: ಇತ್ತೀಚೆಗಷ್ಟೇ ಭಾರತಕ್ಕೆ ಬಂದಿಳಿದಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್, ಭಾರತ-ರಷ್ಯಾ ಶೃಂಗಸಭೆಯ ಭಾಗವಾಗಿ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ರಕ್ಷಣಾ, ಇಂಧನ ಮತ್ತು ವ್ಯಾಪಾರ ಕ್ಷೇತ್ರಗಳ ಹಲವಾರು ಒಪ್ಪಂದಗಳ ಕುರಿತು ಎರಡು ದೇಶಗಳ ನಾಯಕರು ಮಾತುಕತೆ ನಡೆಸಿ, ಸಹಿ ಹಾಕಿದರು. ಇದರೊಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭೂರಿ ಭೋಜನ ಸವಿದ ಪುಟಿನ್​ಗೆ ಹಲವಾರು ವಿವಿಧ ಖಾದ್ಯವನ್ನು ಔತಣಕೂಟದಲ್ಲಿ ಉಣಬಡಿಸಲಾಯಿತು. ಇದರಲ್ಲಿ ಒಂದು ಐಟಂ ಬೆಲೆ ಮಾತ್ರ ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ.  
ಎರಡು ದಿನಗಳ ಭಾರತದ ಪ್ರವಾಸ ಮುಗಿಸಿ ತಮ್ಮ ರಾಷ್ಟ್ರಕ್ಕೆ ಮರಳಿರುವ ರಷ್ಯಾ ಅಧ್ಯಕ್ಷರಿಗೆ ದೆಹಲಿಯಲ್ಲಿ ಹಲವು ವಿಶೇಷ ವ್ಯವಸ್ಥೆಗಳನ್ನು ಮಾಡಲಾಯಿತು. ಪುಟಿನ್​ ಭೇಟಿಯ ಸಮಯದಲ್ಲಿ, ಶುಕ್ರವಾರ (ಡಿ.05) ರಾತ್ರಿ ರಾಷ್ಟ್ರಪತಿ ಭವನದಲ್ಲಿ ರಷ್ಯಾದ ಅಧ್ಯಕ್ಷರಿಗೆ ಅದ್ದೂರಿ ಸಸ್ಯಾಹಾರಿ ಭೋಜನವನ್ನು ಆಯೋಜಿಸಲಾಯಿತು. ಈ ಭೋಜನಕೂಟದಲ್ಲಿ ಅವರಿಗೆ ವಿವಿಧ ರೀತಿಯ ಭಾರತೀಯ ಭಕ್ಷ್ಯಗಳನ್ನು ಬಡಿಸಲಾಯಿತು. 

ಮೆನುವಿನಲ್ಲಿ ಏನೆಲ್ಲ ಇತ್ತು?

ಪುಟಿನ್​ ಅವರಿಗೆಂದೇ ಮಾಡಿಸಲಾದ ಊಟದ ಮೆನುವಿನಲ್ಲಿ ಝೋಲ್ ಮೊಮೊ, ಗುಸ್ಸಿ ಡೂನ್ ಚೆಟಿನ್​ನಿಂದ ಹಿಡಿದು ತಂದೂರಿ ಭರ್ವಾನ್ ಆಲೂ, ಜಫ್ರಾನಿ ಪನೀರ್ ರೋಲ್, ಪಾಲಕ್ ಮೇಥಿ ಮಟ್ಟರ್ ಕಾ ಸಾಗ್, ಹಳದಿ ದಾಲ್ ತಡ್ಕಾ ಪುಲಾವ್, ರೋಟಿ ಸೇರಿ ಹಲವಾರು ಬಗೆಯ ಐಟಂಗಳಿತ್ತು. ಇದರಲ್ಲಿ ಭಾರತೀಯ ಹಲವಾರು ಭಕ್ಷ್ಯಗಳಿತ್ತು. ಸಿಹಿತಿಂಡಿಗಳ ವಿಷಯಕ್ಕೆ ಬಂದರೆ, ಬಾದಮ್ ಕಾ ಹಲ್ವಾ, ಕೇಸರ್-ಪಿಸ್ತಾ ಕುಲ್ಫಿ, ತಾಜಾ ಹಣ್ಣುಗಳು​ ಮೆನುವಿನಲ್ಲಿತ್ತು. ಈ ಎಲ್ಲವನ್ನೂ ಮೀರಿದ ಒಂದು ಐಟಂ ಅಂದ್ರೆ ಅದೇ ಗುಸ್ಸಿ ಡೂನ್ ಚೆಟಿನ್. 
ಪುಟಿನ್ ಅವರಿಗೆ ಕಾಶ್ಮೀರಿ ಶೈಲಿಯ ಗುಸ್ಸಿ ಡೂನ್ ಚೆಟಿನ್ ಅನ್ನು ವಾಲ್ನಟ್, ಮೀನಪಾ ವಡಾ ಮತ್ತು ತರಕಾರಿಗಳಿಂದ ತುಂಬಿದ ಜೋಲ್ ಮೊಮೊಗಳೊಂದಿಗೆ ಬಡಿಸಲಾಯಿತು. ಮುಖ್ಯ ಖಾದ್ಯವಾಗಿ, ಕೇಸರ್​ ಪನೀರ್, ಪಾಲಕ್ ಮೆಂತ್ಯ, ಹಸಿರು ಬಟಾಣಿ ಕರಿ, ಮೊಸರು, ಮಸಾಲಾದಲ್ಲಿ ನೆನೆಸಿದ ತಂದೂರಿ ಭರ್ವಾನ್ ಆಲೂ ಮತ್ತು ಸಣ್ಣ ಬದನೆಕಾಯಿಗಳಿಂದ ಮಾಡಿದ ಆಚಾರಿ ಬೈಗನ್ ಅನ್ನು ಸವಿದ ಪುಟಿನ್,​ ತೃಪ್ತಿಯಿಂದ ಊಟ ಮಾಡಿದರು ಎಂಬುದರಲ್ಲಿ ಅನುಮಾನವಿಲ್ಲ ಎಂದೇ ಹೇಳಬಹುದು.  

ಪುಟಿನ್​ಗೆ ಭೋಜನದಲ್ಲಿ ಬಡಿಸಲಾದ ದುಬಾರಿ ಖಾದ್ಯ

ಪುಟಿನ್‌ಗೆ ಬಡಿಸಲಾದ ಆಹಾರಗಳಲ್ಲಿ ದುಬಾರಿ ಎಂದು ಕರೆಯಲಾದ ಐಟಂ ಅಂದರೆ ಅದು ಗುಚಿ ಡೂನ್ ಚೆಟಿನ್ ಎಂಬ ಕಾಶ್ಮೀರಿ ಖಾದ್ಯ. ಗುಚಿ ಅಣಬೆಗಳು ಅಪರೂಪ. ಇದರಿಂದಾಗಿ, ಇದು ದುಬಾರಿಯಾಗಿದೆ. ಈ ಅಣಬೆಗಳ ಬೆಲೆ ಪ್ರತಿ ಕೆಜಿಗೆ 35ರಿಂದ 40 ಸಾವಿರ ರೂ.ವರೆಗಿದೆ. ಕೆಲವೊಮ್ಮೆ ಇದಿನ್ನೂ ಹೆಚ್ಚಿರಬಹುದು ಎಂದು ವರದಿಗಳು ಉಲ್ಲೇಖಿಸಿವೆ.

ಏನಿದರ ವಿಶೇಷತೆ?

ಗುಸ್ಸಿ ಅಣಬೆಗಳನ್ನು ಬೆಳೆಸುವುದು ಕಷ್ಟಕರ. ನಿರ್ದಿಷ್ಟ ಮಣ್ಣು ಮತ್ತು ತಾಪಮಾನದ ನಡುವಿನ ನೈಸರ್ಗಿಕ ಪರಿಸ್ಥಿತಿಗಳಲ್ಲಿ ಈ ವಿಭಿನ್ನ ಹಾಗೂ ವಿಶೇಷ ಮಶ್ರೂಮ್​ಗಳು ಬೆಳೆಯುತ್ತವೆ. ಹಿಮ ಕರಗಿದ ನಂತರ ವಸಂತಕಾಲದಲ್ಲಿ ಹಿಮಾಲಯನ್ ಪ್ರದೇಶದಲ್ಲಿ ಅವು ಸಾಮಾನ್ಯವಾಗಿ ಕಂಡುಬರುತ್ತವೆ. 
ಗುಚಿ ಅಣಬೆಗಳು ತೀರ ಅಪರೂಪ. ಅವು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಕಂಡುಬರುತ್ತವೆ. ಇದರ ಸಂಗ್ರಹಣೆ ಬಹಳ ಕಷ್ಟಕರ ಎನ್ನಲಾಗಿದೆ. ಕಡಿಮೆ ಕೊಯ್ಲು ಅವಧಿ ಮತ್ತು ಅವುಗಳನ್ನು ಕಂಡುಹಿಡಿಯುವಲ್ಲಿನ ತೊಂದರೆ ಗುಚಿ ಅಣಬೆಗಳನ್ನು ಬಹಳ ಮೌಲ್ಯಯುತವಾಗಿಸಿಬಿಟ್ಟಿದೆ. ಮತ್ತು ದುಬಾರಿ ಬೆಲೆಗೆ ತಂದಿಟ್ಟಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net