More

    ಕೆಲಸ ಕಳೆದುಕೊಂಡ ಟೆಕ್ಕಿ ಈಗ ರ‌್ಯಾಪಿಡೊ ಚಾಲಕ; ಮತ್ತೆ ಸಾಫ್ಟ್​ವೇರ್ ಉದ್ಯೋಗಕ್ಕಾಗಿ ಹುಡುಕಾಟ..

    ಬೆಂಗಳೂರು: ಸಾಫ್ಟ್​ವೇರ್ ಕಂಪನಿಯ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬರು ಹೊಟ್ಟೆಪಾಡಿಗಾಗಿ ರ‌್ಯಾಪಿಡೊ ಚಾಲಕರಾಗಿ ದುಡಿಯುತ್ತ ಇದೀಗ ಮತ್ತೆ ಸಾಫ್ಟ್​ವೇರ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಪ್ರಸಂಗವೊಂದು ನಡೆದಿದೆ.

    ಆ ವ್ಯಕ್ತಿಯ ಜತೆ ರ‌್ಯಾಪಿಡೊ ಮೂಲಕ ಸಂಚರಿಸಿದ್ದವರೊಬ್ಬರು ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವುದಷ್ಟೇ ಅಲ್ಲದೆ, ಅವರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿಯೂ ಪ್ರಯತ್ನ ಮಾಡಿದ್ದಾರೆ. ಲವ್​ನೀಶ್ ಧೀರ್ ಎನ್ನುವ ವ್ಯಕ್ತಿ ಟ್ವಿಟರ್​ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.

    ನನ್ನನ್ನು ರ‌್ಯಾಪಿಡೊದಲ್ಲಿ ಕರೆದುಕೊಂಡು ಹೋಗುತ್ತಿರುವವರು ಜಾವಾ ಡೆವೆಲಪರ್. ಇತ್ತೀಚೆಗೆ ಕೆಲಸ ಕಳೆದುಕೊಂಡಿರುವ ಇವರು ಜಾವಾ ಡೆವೆಲಪರ್ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರ ಬಯೋಡೇಟಾ ನನ್ನ ಬಳಿ ಇದೆ, ಅವಕಾಶ ಇದ್ದರೆ ತಿಳಿಸಿ ಎಂದು ಲವ್​ನೀಶ್ ಟ್ವೀಟ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts