More

    ಕಪ್ಪು ಪಟ್ಟಿ ಧರಿಸಿ ಬೇಡಿಗೆ ಗೌರವ ಸೂಚಿಸಿದ ಟೀಮ್ ಇಂಡಿಯಾ: ಇವೋಯಿನ್ ಮಾರ್ಗನ್ ದಾಖಲೆ ಹಿಂದಿಕ್ಕಿದ ರೋಹಿತ್ ಶರ್ಮ

    ಲಖನೌ: ಹಿಂದಿನ 5 ಪಂದ್ಯಗಳಲ್ಲಿ ಯಶಸ್ವಿ ಚೇಸಿಂಗ್ ನಡೆಸಿದ ಟೀಮ್ ಇಂಡಿಯಾ ಈ ಬಾರಿ ಸಾಧಾರಣ ಮೊತ್ತವನ್ನು ರಕ್ಷಿಸಿಕೊಳ್ಳುವ ಮೂಲಕ ಎಲ್ಲದಕ್ಕೂ ಸೈ ಎನಿಸಿಕೊಂಡಿದೆ. ಇದರೊಂದಿಗೆ ರೋಹಿತ್ ಶರ್ಮ ಬಳಗ ಅಜೇಯ ಓಟವನ್ನು ಸತತ ಆರನೇ ಪಂದ್ಯಕ್ಕೂ ವಿಸ್ತರಿಸಿದೆ. ನಾಯಕ ರೋಹಿತ್ ಶರ್ಮ (87 ರನ್, 101 ಎಸೆತ, 10 ಬೌಂಡರಿ, 3 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ಹಾಗೂ ವೇಗಿಗಳಾದ ಮೊಹಮದ್ ಶಮಿ (22ಕ್ಕೆ 4) ಮತ್ತು ಜಸ್‌ಪ್ರೀತ್ ಬುಮ್ರಾ (32ಕ್ಕೆ 3) ಮಾರಕ ದಾಳಿಯ ಬಲದಿಂದ ಭಾರತ ತಂಡ, ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು ಭರ್ತಿ 100 ರನ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ 2019ರ ಸೋಲಿಗೆ ಮುಯ್ಯಿ ತೀರಿಸಿಕೊಂಡು ಅಂಕಪಟ್ಟಿಯಲ್ಲಿ ಮರಳಿ ಅಗ್ರಸ್ಥಾನಕ್ಕೇರಿದೆ. ಇನ್ನು ಸತತ 4ನೇ ಹಾಗೂ ಒಟ್ಟಾರೆ 5ನೇ ಸೋಲಿನೊಂದಿಗೆ ಇಂಗ್ಲೆಂಡ್ ಪ್ರಶಸ್ತಿ ಉಳಿಸಿಕೊಳ್ಳುವ ಆಸೆಯನ್ನು ಅಧಿಕೃತವಾಗಿ ಕೈಚೆಲ್ಲಿದೆ.
    ಏಕನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ, ಡೇವಿಡ್ ವಿಲ್ಲಿ (45ಕ್ಕೆ3), ಕ್ರಿಸ್ ವೋಕ್ಸ್ (33ಕ್ಕೆ2) ಬಿಗಿ ದಾಳಿಯ ನಡುವೆಯೂ ರೋಹಿತ್ ಶರ್ಮ ಜವಾಬ್ದಾರಿಯುತ ಆಟ ಹಾಗೂ ಮಧ್ಯಮ-ಕೆಳ ಸರದಿಯ ಬ್ಯಾಟರ್‌ಗಳ ಹೋರಾಟಯುತ ಬ್ಯಾಟಿಂಗ್‌ನಿಂದ 9 ವಿಕೆಟ್‌ಗೆ 229 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಪ್ರತಿಯಾಗಿ ಭಾರತೀಯರ ಸಂಘಟಿತ ದಾಳಿಗೆ ನೆಲಕಚ್ಚಿದ ಇಂಗ್ಲೆಂಡ್, 34.5 ಓವರ್‌ಗಳಲ್ಲಿ 129 ರನ್‌ಗಳಿಗೆ ಸರ್ವಪತನ ಕಂಡಿತು. ಚೇಸಿಂಗ್‌ನಲ್ಲಿ ಸಂಪೂರ್ಣವಾಗಿ ಲಯ ತಪ್ಪಿದ ಇಂಗ್ಲೆಂಡ್, ಮೂರಂಕಿ ತಲುಪುವ ಮುನ್ನವೇ 8 ವಿಕೆಟ್ ಕಳೆದುಕೊಂಡು ಗೆಲುವಿನಾಸೆ ಕೈಚೆಲ್ಲಿತು.

    ಬೇಡಿಗೆ ಗೌರವ : ಇತ್ತೀಚೆಗೆ ನಿಧನರಾದ ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿಗೆ ಗೌರವಾರ್ಥ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದರು.

    ಆಂಗ್ಲರ ವಿರುದ್ಧ ಪಂದ್ಯದಲ್ಲಿ ದಾಖಲಾದ ಕೆಲ ಅಂಕಿ-ಆಂಶಗಳು ಕೆಳಗಿನಂತಿವೆ !

    7: ರೋಹಿತ್ ಶರ್ಮ ಟೀಮ್ ಇಂಡಿಯಾವನ್ನು 100 ಪಂದ್ಯಗಳಲ್ಲಿ ಮುನ್ನಡೆಸಿದ 7ನೇ ನಾಯಕ ಎನಿಸಿದರು. ಧೋನಿ (332), ಅಜರುದ್ದೀನ್ (221), ವಿರಾಟ್ ಕೊಹ್ಲಿ (213), ಸೌರವ್ ಗಂಗೂಲಿ (196), ಕಪಿಲ್ ದೇವ್ (108), ರಾಹುಲ್ ದ್ರಾವಿಡ್ (104) ಹಿಂದಿನ ಸಾಧಕರು.

    18: ರೋಹಿತ್ ಶರ್ಮ (18, 040) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18 ಸಾವಿರ ರನ್ ಕಲೆಹಾಕಿದ 5ನೇ ಭಾರತೀಯ ಹಾಗೂ ಒಟ್ಟಾರೆ 20ನೇ ಬ್ಯಾಟರ್ ಎನಿಸಿದರು. ಸಚಿನ್ ತೆಂಡುಲ್ಕರ್ (34,357), ವಿರಾಟ್ ಕೊಹ್ಲಿ (26,121,) ರಾಹುಲ್ ದ್ರಾವಿಡ್ (24,064), ಸೌರವ್ ಗಂಗೂಲಿ (18,433) ಹಿಂದಿನ ಭಾರತೀಯ ಸಾಧಕರು.

    1. ರೋಹಿತ್ ಶರ್ಮ (20+) ಏಕದಿನ ವಿಶ್ವಕಪ್ ಒಂದೇ ಆವೃತ್ತಿಯಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ನಾಯಕ ಇವೋಯಿನ್ ಮಾರ್ಗನ್ (19) ದಾಖಲೆಯನ್ನು ಹಿಂದಿಕ್ಕಿದರು.

    1: ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್‌ನ 32 ಇನಿಂಗ್ಸ್‌ಗಳಲ್ಲಿ ಮೊದಲ ಬಾರಿ ಶೂನ್ಯಕ್ಕೆ ಔಟಾದರು. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟಾರೆ 16ನೇ ಬಾರಿ ಡಕೌಟ್ ಆದರು.

    12: ರೋಹಿತ್ ಶರ್ಮ ಏಕದಿನ ವಿಶ್ವಕಪ್‌ನಲ್ಲಿ 50 ಪ್ಲಸ್ ರನ್‌ಗಳಿಸಿದ ವಿರಾಟ್ ಕೊಹ್ಲಿ (12). ದಾಖಲೆ ಸರಿಗಟ್ಟಿದರು. ಸಚಿನ್ ತೆಂಡುಲ್ಕರ್ (21) ಅಗ್ರಸ್ಥಾನದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts