More

    ಪಿಒಪಿ ಗಣೇಶ ಮೂರ್ತಿಗಳ ನಿಯಂತ್ರಣಕ್ಕೆ ತಂಡ ರಚನೆ


    ಚಿತ್ರದುರ್ಗ: ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಗಣೇಶ ಮೂರ್ತಿಗಳ ಬಳಕೆ ಬಗ್ಗೆ ನಿಗಾ ವಹಿಸಲು ವಿವಿಧ ಅಧಿಕಾರಿ ಗಳನ್ನೊಳಗೊಂಡ ತಂಡ ರಚಿಸಲಾಗುವುದೆಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.
    ಡಿಸಿ ಕಚೇರಿಯಲ್ಲಿ ಸೋಮವಾರ ಗೌರಿ-ಗಣೇಶ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವ ರು,ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸ ಬೇಕು. ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಒಪಿ,ಲೋಹ ಮಿಶ್ರಿತ ಬಣ್ಣದ ವಿಗ್ರಹಗಳ ಬಳಕೆ ನಿಷೇಧಿಸಲಾಗಿದೆ.
    ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ನಿಗಾ ವಹಿಸಲು ಪರಿಸರ,ಪೊಲೀಸ್,ಕಂದಾಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗುವುದು. ಪಿಒಪಿ ಗಣೇಶ ವಿಗ್ರಹಗಳ ಮಾರಾಟ,ಬಳಕೆ ಕಂಡುಬಂದಲ್ಲಿ ಕೂಡಲೇ ವಶಪಡಿಸಿಕೊಳ್ಳಬೇಕು. ವಿಗ್ರಹಗಳ ಸಾಗಾಟ ತಡೆಗೆ ಚೆಕ್‌ಪೋಸ್ಟ್‌ಗಳಲ್ಲಿ ಕ್ರಮ ವಹಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಡಿಸಿ ನಿರ್ದೇಶಿಸಿದರು. ಗಣೇಶ ವಿಗ್ರಹಗಳ ವಿ ಸರ್ಜನೆ ಕುರಿತಂತೆ ಸೂಚನೆಗಳನ್ನು ನೀಡಿದರು.
    ಎಸ್‌ಪಿ ಧರ್ಮೇಂದ್ರ ಕುಮಾರ್‌ಮೀನಾ ಅವರ ಮಾತನಾಡಿ,ಜಿಲ್ಲೆಯಲ್ಲಿ 1650 ಗಣೇಶ ಮೂರ್ತಿಗಳನ್ನು ಸಾರ್ವಜನಿಕವಾಗಿ ಸ್ಥಾಪಿಸ ಲಾಗುತ್ತಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಅಧಿಕೃತ ಅನುಮತಿ ಪಡೆಯುವುದು ಹಾಗೂ ನಿಯಮಗಳನ್ನು ಪಾಲಿಸುವುದು ಕಡ್ಡಾಯವೆಂದ ಅವರು,ಬ್ಯಾನರ್,ಬಂಟಿಂಗ್,ಧ್ವಜಗಳ ಅಳವಡಿಕೆ ವಿಸರ್ಜನೆ ದಿನಕ್ಕೆ ಸೀಮಿತವಾಗಬೇಕು ಹಾಗೂ ಅಂದೇ ಅವುಗಳನ್ನು ಸ ಮಿತಿಯವರು ತೆರವುಗೊಳಿಸಬೇಕು.
    ಮಹನೀಯರ ಪುತ್ಥಳಿಗಳಿರುವ ಪ್ರಮುಖ ವೃತ್ತಗಳಲ್ಲಿ ಹೂವಿನ ಅಲಂಕಾರಕ್ಕೆ ಅವಕಾಶ ನೀಡಬೇಕು,ವೃತ್ತದ ಸ್ಥಳದಲ್ಲಿ ಬ್ಯಾನರ್,ಬಂ ಟಿಂಗ್,ಧ್ವಜಗಳನ್ನು ಅಳವಡಿಸುವಂತಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕಿದೆ. ಇದ ಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸ್ ಮತ್ತಿತರ ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಎಸಿ ಎಂ.ಕಾರ್ತಿಕ್,ಪರಿಸರ ಅಧಿಕಾರಿ ಪ್ರಕಾಶ್,ನಗರಸಭೆ ಪೌರಾಯುಕ್ತೆ ರೇಣುಕಾ,ಎಎಸ್‌ಪಿ ಕುಮಾರಸ್ವಾಮಿ,ಡಿಎಚ್‌ಒ ಡಾ.ಆರ್. ರಂಗನಾಥ್,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್ ಮತ್ತಿತರರು ಇದ್ದರು.
    (ಸಿಟಿಡಿ 11 ಡಿಸಿ ಗಣೇಶ)
    ಚಿತ್ರದುರ್ಗದಲ್ಲಿ ಸೋಮವಾರ ಗೌರಿ-ಗಣೇಶ ಹಬ್ಬದ ಆಚರಣೆ ಕುರಿತಂತೆ ನಡೆದ ಅಧಿಕಾರಿಗಳ ಸಭೆಯಲ್ಲಿ ಡಿಸಿ ಜಿಆರ್‌ಜೆ ದಿವ್ಯಾ ಪ್ರಭು,ಎಸ್‌ಪಿ ಧರ್ಮೆಂದ್ರಕುಮಾರ್ ಮೀನಾ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts