ಪ್ರಾಮಾಣಿಕತೆ ಮೆರೆದ ಶಿಕ್ಷಕ ದೇವಣಗಾಂವಿ

blank
blank

ಗೊಳಸಂಗಿ: ಕರ್ತವ್ಯ ಮಗಿಸಿಕೊಂಡು ಮನೆಗೆ ತೆರಳುತ್ತಿರುವ ವೇಳೆ ತಮಗೆ ಸಿಕ್ಕ ಮೊಬೈಲ್, ಎಟಿಎಂ ಕಾರ್ಡ್ ಹಾಗೂ ನಗದನ್ನು ಕಳೆದುಕೊಂಡ ವ್ಯಕ್ತಿಗೆ ಹಿಂದಿರುಗಿಸುವ ಮೂಲಕ ಶಿಕ್ಷಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಗೊಳಸಂಗಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕ ವಿ.ಎನ್. ದೇವಣಗಾಂವಿ ಅವರೇ ಪಾಮಾಣಿಕತೆ ಮೆರೆದವರು.
ಕಳೆದ ಗುರುವಾರ ಸಂಜೆ ಗೊಳಸಂಗಿಯಿಂದ ಶಾಲಾ ಕರ್ತವ್ಯ ಮುಗಿಸಿಕೊಂಡು ವಾಸ್ತವ್ಯಕ್ಕಾಗಿ ವಿಜಯಪರಕ್ಕೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆದ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಸುಮಾರು ಹತ್ತು ಸಾವಿರ ರೂ. ಬೆಲೆ ಬಾಳುವ ಒಂದು ಮೊಬೈಲ್, 4 ಎಟಿಎಂ ಕಾರ್ಡ್‌ಗಳು, ಸಿಕ್ರೇಟ್ ಪಿನ್ ಕೋಡ್, 500 ರೂ., ನಗದು ಸಿಕ್ಕಿತ್ತು. ಆದರೆ, ಮರುದಿನ ಬೆಳಗ್ಗೆ ಮೊಬೈಲ್ ಕಳೆದುಕೊಂಡ ಹಿಟ್ಟಿನಹಳ್ಳಿಯ ಪರಶುರಾಮ ಎಂಬುವವರು ತಮ್ಮ ಮೊಬೈಲ್‌ಗೆ ಫೋನ್ ಮಾಡಿದ್ದರು. ಆಗ ಶಿಕ್ಷಕರಿಗೆ ತಾನು ಕಳೆದುಕೊಂಡಿದ್ದ ಮೊಬೈಲ್, ಎಟಿಎಂ ಹಾಗೂ ಹಣವನ್ನು ಹಿಂದಿರುಗಿಸುವಂತೆ ಬೇಡಿಕೊಂಡಿದ್ದರು. ಅದರಂತೆ ಶಿಕ್ಷಕ ದೇವಣಗಾಂವಿಯವರು ಶನಿವಾರ ಅವರನ್ನು ಸಂಪರ್ಕಿಸಿ ತಮಗೆ ಸಿಕ್ಕಿದ್ದ ಮೊಬೈಲ್, ಹಣ, ಎಟಿಎಂ ಕಾರ್ಡ್‌ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

Share This Article

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…

ದೇಹದಲ್ಲಿ ಈ ವಿಚಿತ್ರ ಸೂಚನೆಗಳು ಕಾಣಿಸಿದ್ರೆ ಸಕ್ಕರೆ ಕಾಯಿಲೆ ಇದೆ ಎಂದರ್ಥ! | Diabetes

Diabetes: ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿ, ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು, ವ್ಯಾಯಾಮದ ಕೊರತೆ ಇತ್ಯಾದಿಗಳಿಂದಾಗಿ, ಚಿಕ್ಕ…