More

    ಶಿಕ್ಷಕರ ಪರಿಶ್ರಮದಲ್ಲಿ ಮಕ್ಕಳ ಪ್ರಗತಿ ಇದೆ,

    ಅಳವಂಡಿ: ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಹಾಗೂ ಶೈಕ್ಷಣಿಕ ಪ್ರಗತಿ ಶಿಕ್ಷಕರ ಪರಿಶ್ರಮದ ಮೇಲೆ ಇದೆ. ಕಾರಣ ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಎಂದು ಶಿಕ್ಷಣ ಸಂಯೋಜಕ ಗವಿಸಿದ್ದೇಶ ಶೆಟ್ಟರ ತಿಳಿಸಿದರು.

    ಇದನ್ನೂ ಓದಿ: ಶಿಕ್ಷಕರ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ

    ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೇಟಿ ನೀಡಿ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ ಮಾತನಾಡಿದರು. ನಂತರ ಶಾಲಾ ದಾಖಲಾತಿ, ಬಿಸಿಯೂಟ, ಮಕ್ಕಳ ಶಿಕ್ಷಣ ಮುಂತಾದವುಗಳ ಬಗ್ಗೆ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಪ್ರತಿದಿನ ಮಕ್ಕಳು ಶಿಕ್ಷಕರು ಭೋಧಿಸುವ ವಿಷಯವನ್ನು ಮನನ ಮಾಡಿಕೊಂಡು ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ದಿನ ನಿತ್ಯದ ವಿಷಯವನ್ನು ಮನೆಯಲ್ಲಿ ಮತ್ತೊಮ್ಮೆ ಮನನ ಮಾಡಿಕೊಳ್ಳಿ. ಹಾಗೂ ಸರಕಾರ ನೀಡುವ ಶೈಕ್ಷಣಿಕ ಸೌಲಭ್ಯ ಬಳಸಿಕೊಂಡು ಮಕ್ಕಳು ವಿದ್ಯಾವಂತರಾಗಿ ಎಂದರು.

    ಮುಖ್ಯ ಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ, ಶಿಕ್ಷಕರಾದ ಕೃಷ್ಣಪ್ಪ ತಳಕಲ್, ಪೂಜಾ ಅಂಗಡಿ, ಕಲಿಕಾ ಟಾಟಾ ಟ್ರಸ್ಟನ ಪ್ರೇರಕ ನೇತ್ರಾವತಿ ಆನಂದಳ್ಳಿ, ಪ್ರಶಿಕ್ಷಣಾರ್ಥಿ ಭಾಗ್ಯಲಕ್ಷ್ಮೀ ಗೊಂಡಬಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts