More

    ಮಾತೃಭಾಷೆ ನೆರೆ ರಾಜ್ಯಕ್ಕೆ ಮಾದರಿಯಾಗಲಿ

    ತಾವರಗೇರಾ: ಪಟ್ಟಣಕ್ಕೆ ಡಿ.3ರಂದು ಆಗಮಿಸುವ ಕನ್ನಡ ಜ್ಯೋತಿ ರಥಯಾತ್ರೆ ಅದ್ದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಕೈಗೊಳ್ಳಬೇಕು ಎಂದು ಪಪಂ ಮುಖ್ಯಾಧಿಕಾರಿ ನಬಿಸಾಬ್ ಖುದನವರ ಹೇಳಿದರು.

    ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸಂಭ್ರಮ-50 ಕನ್ನಡ ಜ್ಯೋತಿ ರಥಯಾತ್ರೆ ಸ್ವಾಗತ ನಿಮಿತ್ತ ಪಪಂ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಡಿ.4ರ ಬೆಳಗ್ಗೆ 9ಕ್ಕೆ ಡಾ.ಬಿ.ಆರ್. ಅಂಬೆಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ವಾದ್ಯ, ಕುಂಭ, ಕಲಶಗಳೊಂದಿಗೆ ಕಿತ್ತೂರ ರಾಣಿ ಚನ್ನಮ್ಮ ಸರ್ಕಲ್‌ನಲ್ಲಿ ಕೊನೆಗೊಳ್ಳುತ್ತದೆ. ಕರ್ನಾಟಕ ಸಂಭ್ರಮ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಕನ್ನಡ ಭಾಷೆ ನೆರೆ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.

    ಉಪ ತಹಸೀಲ್ದಾರ್ ಶರಣಬಸವೇಶ್ವರ ಮಾತನಾಡಿದರು. ವಿವಿಧ ಕಾಲೇಜು ಪ್ರಾಚಾರ್ಯರಾದ ಸುಭಾಷ್ ಪೋರೆ, ಅರುಣ ಕುಮಾರಿ, ಜಗ್ಗಲ, ಕೊಟ್ರಪ್ಪ, ನಾಗರಾಜ ಸಂಗನಾಳ, ಎಸ್. ಹಿರೇಮಠ, ಲಕ್ಷ್ಮಣಸಿಂಗ ವಗರನಾಳ, ಶರಣಬಸಪ್ಪ ವಿಶ್ವಕರ್ಮ, ಮುಖ್ಯ ಶಿಕ್ಷಕರಾದ ಪರಸಪ್ಪ ಹೊಸಮನಿ, ಸುನಿತಾ ಹೋಟಕರ್, ಡಿ.ಆರ್ ಪಾಟೀಲ್, ಷಡಕ್ಷರಯ್ಯ ಹಿರೇಮಠ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಂದ್ರ ಬಳಿಗಾರ, ಕಾರ್ಯದರ್ಶಿ ಬಸವರಾಜ ದೇವರಮನಿ, ಪಿಎಸ್‌ಐ ಮಲ್ಲಪ್ಪ ವಜ್ರದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts