More

    ಮಕ್ಕಳಲ್ಲಿ ಸೂಪ್ತವಾಗಿರುವ ಪ್ರತಿಭೆಗೆ ನೀರೆರೆಯಿರಿ

    ಹೊಸನಗರ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತಂದು ಅದಕ್ಕೆ ನೀರೆರೆಯಬೇಕು ಎಂದು ಎಸಿಎಫ್ ಮೋಹನಕುಮಾರ್ ತಿಳಿಸಿದರು.

    ವನ್ಯಜೀವಿ ಸಪ್ತಾಹದ ಅಂಗವಾಗಿ ಕರಿಮನೆ ಗ್ರಾಪಂ ವ್ಯಾಪ್ತಿಯ ಮಳಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಗರ ವಲಯ ಅರಣ್ಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿದ ಅವರು, ಗ್ರಾಮೀಣ ಶಾಲೆ ಮಕ್ಕಳು ಎಂದು ಕೀಳರಿಮೆ ಬೇಡ. ಪ್ರತಿಭೆಗೆ ನಗರ, ಹಳ್ಳಿ ಎಂಬ ತಾರತಮ್ಯವಿಲ್ಲ ಎಂದರು.
    ಸ್ಪರ್ಧೆಯಲ್ಲಿ 10 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಕಲಾಕೃತಿ ರಚಿಸಿ ಗಮನ ಸೆಳೆದರು.
    ಬಹುಮಾನದ ಜತೆ ಸಿಹಿ ಹಂಚಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ನಗರ ವಲಯ ಅರಣ್ಯಾಧಿಕಾರಿ ಬಿ.ಸಂಜಯ್, ಮುಖ್ಯಶಿಕ್ಷಕ ಜಗದೀಶ್, ಅರಣ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು, ಸ್ಥಳೀಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts