More

    ತಣ್ಣೀರುಬಾವಿ ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯ

    ಮಂಗಳೂರು: ಕಳೆದ ನಾಲ್ಕು ವಾರದಿಂದ ನಡೆಯುತ್ತಿರುವ ತಣ್ಣೀರುಬಾವಿ ಬೀಚ್ ಸ್ವಚ್ಛತಾ ಕಾರ್ಯಮದಲ್ಲಿ ಭಾನುವಾರ 200ಕ್ಕೂ ಅಧಿಕ ಮಂದಿ ಭಾಗವಹಿಸಿದರು.
    ಮಂಗಳೂರಿನ ಮುಹಮ್ಮದ್ ಶಫಕ್ ಎಂಬುವರು ಇನ್‌ಸ್ಟ್ರಾಗ್ರಾಮ್‌ನಲ್ಲಿ ಹಾಕಿದ ವಿಡಿಯೋಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸ್ವಯಂಪ್ರೇರಣೆಯಿಂದ ಭಾಗವಹಿಸಿದ ಜನರು ಒಂದು ಕಿ.ಮೀ. ತನಕದ ಕಸ ಹೆಕ್ಕಿ ರಾಶಿ ಹಾಕಿದರು.

    ಕೇರಳದ ಕೊಲ್ಲಂನಿಂದ ಬಂದಿದ್ದ ಮಾಡೆಲ್ ಮತ್ತು ಫಿಟ್ನೆಸ್ ಟ್ರೈನರ್ ದಾಮೋದರ್ ಎಂಬುವರು ಸೆ.20ರಂದು ತನ್ನ ಸಂಬಂಧಿಕ ಗಣೇಶ್ ನಾಯಕ್ ಜತೆ ತಣ್ಣೀರುಬಾವಿ ಬೀಚ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಗಾಜಿನ ಚೂರೊಂದು ತಾಗಿತ್ತು.

    ತಕ್ಷಣ ದಾಮೋದರ್ ಆ ಗಾಜಿನ ಚೂರನ್ನು ಹೆಕ್ಕಿದರೂ ಅಲ್ಲಲ್ಲಿ ತ್ಯಾಜ್ಯದ ರಾಶಿಯು ಕಾಣಲು ಸಿಕ್ಕಿತು. ಅದರಲ್ಲೂ ಸಿರಿಂಜ್ ಅಧಿಕ ಸಂಖ್ಯೆಯಲ್ಲಿತ್ತು. ಇದನ್ನು ಕಂಡು ಗಣೇಶ್ ನಾಯಕ್ ಮತ್ತು ದಾಮೋದರ್ ವಾಕಿಂಗ್ ಸ್ಥಗಿತಗೊಳಿಸಿ ತಣ್ಣೀರುಬಾವಿ ಬೀಚ್‌ನ ತ್ಯಾಜ್ಯವನ್ನು ಹೆಕ್ಕಿ ರಾಶಿ ಹಾಕತೊಡಗಿದರು. ಅಲ್ಲದೆ ವೀಡಿಯೋ ಮಾಡಿ ಶೇರ್ ಮಾಡಿದರು. ಇದು ಕೆಲವೇ ದಿನದಲ್ಲಿ ‘ಬೀಚ್ ರಿಜುವೇಶನ್ ಆರ್ಮಿ’ಯ ಹುಟ್ಟಿಗೆ ಕಾರಣವಾಯಿತು.

    ನೀವು ಬೀಚ್‌ಗೆ ಬನ್ನಿ. ಹಾಗೇ ವಿಹರಿಸಿ ಹೋಗುವ ಮುನ್ನ ಬೀಚ್‌ನಲ್ಲಿ ರಾಶಿಬಿದ್ದಿರುವ ಗಾಜು, ಸಿರಿಂಜ್‌ಗಳನ್ನೂ ಹೆಕ್ಕಿ ಕಸದ ತೊಟ್ಟಿಗೆ ಹಾಕಿ ಎಂದು ಹೇಳಿದ ಬಳಿಕವಂತೂ ಚಳುವಳಿ ರೂಪ ತಾಳಿತು. ರಿಜುವೇಶನ್ ಆರ್ಮಿ ಬಗ್ಗೆ ಯೂಟ್ಯೂಬರ್ ಮುಹಮ್ಮದ್ ಶಕ್ ಇಂಡಿಯನ್ ವಿಡಿಯೋ ಮೂಲಕ ನೀಡಿರುವುದು ಹೊಸ ಟ್ರೆಂಡ್ ಸೃಷ್ಟಿಸಿದೆ. ಅಂದರೆ ಇಬ್ಬರಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯ ನಾಲ್ಕು ವಾರದ ಬಳಿಕ 200 ಮಂದಿಯಿಂದ ನಡೆಯುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts