More

    ತಮಿಳುನಾಡು ವಿಧಾನಸಭೆ ಚುನಾವಣೆ: ಕ್ಷೇತ್ರ ಆಯ್ಕೆ ಮಾಡಿಕೊಂಡ ಕಮಲ್ ಹಾಸನ್

    ಚೆನ್ನೈ: ಬರುವ ವಿಧಾನಸಭೆ ಚುನಾವಣೆಯಲ್ಲಿ ನಟ ಹಾಗೂ ತಮಿಳುನಾಡಿನ ಮಕ್ಕಳ ನಿಧಿ ಮಯಂ (ಎಂಎನ್​ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು ಕೋಯಂಬತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಶುಕ್ರವಾರ ಈ ವಿಷಯ ಪ್ರಕಟಿಸಿರುವ ಅವರು, ಚುನಾವಣೆಗೆ ಸ್ಪರ್ಧಿಸಲಿರುವ ತಮ್ಮ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

    ಪ್ರಸ್ತುತ ಕೋಯಂಬತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಆಡಳಿತಾರೂಢ ಎಐಎಡಿಎಂಕೆ ವಶದಲ್ಲಿದೆ. ಅಲ್ಲಿ ಅಮ್ಮನ್ ಅರ್ಜುನನ್ ಅವರು ಶಾಸಕರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರು ಸತತ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಯಂಬತ್ತೂರು ಕ್ಷೇತ್ರದಲ್ಲಿ ಕಮಲ್ ಹಾಸನ್ ಅವರ ಎಂಎನ್​ಎಂ ಪಕ್ಷ ಶೇ 11 ರಷ್ಟು ಮತಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿತ್ತು.

    ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿರುವ ಕಮಲ್ ಹಾಸನ್ ಅವರು, ”ನನ್ನ ತಂದೆಗೆ ನಾನು ಐಎಎಸ್ ಅಧಿಕಾರಿ ಅಥವಾ ರಾಜಕಾರಣಿ ಆಗಬೇಕು ಎಂಬ ಕನಸಿತ್ತು. ಅದನ್ನೂ ನಾನೀಗ ನನಸು ಮಾಡಿದ್ದಲ್ಲದೇ ನಮ್ಮ ಪಕ್ಷದಲ್ಲಿ ಅನೇಕ ಐಎಎಸ್ ನಿವೃತ್ತ ಅಧಿಕಾರಿಗಳು ಇದ್ದಾರೆ” ಎಂದಿದ್ದಾರೆ.

    ಇದನ್ನೂ ಓದಿ: ಆಕಾಶದಲ್ಲಿ ‘ಸೂರ್ಯಕಿರಣ’ದ ಚಮತ್ಕಾರ; ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಏರೋಬ್ಯಾಟಿಕ್ ತಂಡದ ಫಾರ್ಮೇಷನ್

    2018 ರಲ್ಲಿ ಆರಂಭವಾಗಿರುವ ಎಂಎನ್​ಎಂ ಪಕ್ಷ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗಮನ ಸೆಳೆದಿರುವ ಪಕ್ಷ, ಅಧಿಕಾರಕ್ಕೆ ಬಂದರೆ, ಗೃಹಿಣಿಯರಿಗೂ ಗೌರವಧನ, ಮನೆ ಮನೆಗೂ ಕಂಪ್ಯೂಟರ್, ಇಂಟರನೆಟ್​ ಒದಗಿಸುವ ವಾಗ್ದಾನ ಮಾಡಿದೆ. ಏಪ್ರೀಲ್ 6 ರಂದು ಒಂದೇ ಹಂತದಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ.

    ಜಾರಕಿಹೊಳಿ ಸಿಡಿ ಕೇಸ್​: ತನಿಖೆ ಆರಂಭಿಸಿದ ಮೊದಲ ದಿನವೇ ಸಿಕ್ಕಿಬಿದ್ದ ಮೂವರು

    ಸೆಕ್ಸ್ ಸಿಡಿ ಪ್ರಕರಣ; ಸಿಕ್ಕಿ ಬಿದ್ದವರ ಪೈಕಿ ಇಬ್ಬರ ತೀವ್ರ ವಿಚಾರಣೆ, ಎಫ್​ಎಸ್ಎಲ್​ ಕೇಂದ್ರದಲ್ಲೇ ಫುಲ್​ ಡ್ರಿಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts