More

    ಕಲ್ಲಂಗಡಿಹಣ್ಣಿನ ಮೇಲೆ ಮೋದಿ-ಟ್ರಂಪ್​, ತಾಜ್​ ಮಹಲ್​ ಚಿತ್ರವನ್ನು ಸುಂದರವಾಗಿ ಕೆತ್ತನೆ ಮಾಡಿದ ತಮಿಳುನಾಡಿನ ಕಲಾವಿದ..

    ನವದೆಹಲಿ: ತಮಿಳುನಾಡಿನ ಕಲಾವಿದನೋರ್ವ ಕಲ್ಲಂಗಡಿ ಹಣ್ಣಿನ ಮೇಲೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ತಾಜ್​ ಮಹಲ್​ ಚಿತ್ರವನ್ನು ಸುಂದರವಾಗಿ ಕೆತ್ತನೆ ಮಾಡಿದ್ದು, ಫೋಟೋ ಇಂಟರ್​ನೆಟ್​ನಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

    ಎಂ. ಎಲಾಂಚೆಜಿಯಾನ್ ಅವರು ಹಣ್ಣು ಮತ್ತು ತರಕಾರಿಗಳ ಮೇಲೆ ಚಿತ್ರವನ್ನು ಕೆತ್ತುವ ಕಲಾವಿದರು. ಅಮೆರಿಕ ಅಧ್ಯಕ್ಷರು ತಾಜ್​ಮಹಲ್​ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸ್ವಾಗತ ಕೋರುವ ಸಲುವಾಗಿ ಈ ಸುಂದರ ಚಿತ್ರವನ್ನು ಕೆತ್ತನೆ ಮಾಡಿದ್ದಾರೆ. ಮೋದಿ ಹಾಗೂ ಟ್ರಂಪ್​ ಅವರನ್ನು ಅಕ್ಕಪಕ್ಕ ಚಿತ್ರಿಸಿ, ಅವರ ತಲೆಯ ಮೇಲ್ಭಾಗದಲ್ಲಿ ತಾಜ್​ ಮಹಲ್​ನ್ನು ರೂಪಿಸಿದ್ದಾರೆ.

    31 ವರ್ಷದ ಎಂ. ಎಲಾಂಚೆಜಿಯಾನ್ ಅವರು ಥೇಣಿ ಜಿಲ್ಲೆಯ ಗುಡಲೂರಿನವರು. 5 ಕೆಜಿ ತೂಕದ ಕಲ್ಲಂಗಡಿ ಹಣ್ಣಿನ ಮೇಲೆ ಟ್ರಂಪ್​, ಮೋದಿ ಹಾಗೂ ತಾಜ್​ಮಹಲ್​ ಚಿತ್ರವನ್ನು ಕೆತ್ತನೆ ಮಾಡಿದ್ದಾರೆ.

    ಕಳೆದ ವರ್ಷ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಭಾರತ ಭೇಟಿಯ ವೇಳೆ ನಾಲ್ಕು ಕೆಜಿ ಕಲ್ಲಂಗಡಿ ಹಣ್ಣಿನ ಮೇಲೆ ಮೋದಿ ಹಾಗೂ ಚೀನಾ ಅಧ್ಯಕ್ಷರ ಚಿತ್ರ ಬರೆದಿದ್ದರು.

    ಈ ಬಾರಿ ಮೂರು ಚಿತ್ರಗಳನ್ನು ಕೆತ್ತನೆ ಮಾಡಬೇಕಾಗಿರುವುದರಿಂದ ಇನ್ನೂ ದೊಡ್ಡ ಹಣ್ಣನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಎಲಾಂಚೆಜಿಯಾನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕಲ್ಲಂಗಡಿಹಣ್ಣಿನ ಮೇಲೆ ಮೋದಿ-ಟ್ರಂಪ್​, ತಾಜ್​ ಮಹಲ್​ ಚಿತ್ರವನ್ನು ಸುಂದರವಾಗಿ ಕೆತ್ತನೆ ಮಾಡಿದ ತಮಿಳುನಾಡಿನ ಕಲಾವಿದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts