More

    ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ

    ಅಳವಂಡಿ: ಪ್ರತಿ ಮಕ್ಕಳಲ್ಲಿಯೂ ವಿಭಿನ್ನ ಪ್ರತಿಭೆ ಅಡಗಿರುತ್ತದೆ, ಅದನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಿಕ್ಷಣ ಸಂಯೋಜಕ ಗವಿಸಿದ್ದೇಶ ಶೆಟ್ಟರ ತಿಳಿಸಿದರು.

    ಇದನ್ನೂ ಓದಿ: ಪ್ರತಿಭೆ ಅನಾವರಣಕ್ಕೆ ಸಹಕಾರಿ

    ಸಮೀಪದ ಗುಡ್ಲಾನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ ಕೊಪ್ಪಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಯಿಂದ ನಡೆದ ಹಿರೇಸಿಂದೋಗಿ ಕ್ಲಷ್ಟರ್ ಮಟ್ಟದ 2023-24 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

    ಮುಖ್ಯ ಶಿಕ್ಷಕ ಬಾಬು ಹಕ್ಕಂಡಿ ಮಾತನಾಡಿ, ಮಕ್ಕಳು ಪುಸ್ತಕದ ಓದಿನ ಜತೆಗೆ ದೈಹಿಕ ಹಾಗೂ ಮಾನಸಿಕ ಚಟುವಟಿಕೆ ನೀಡುವ ಪ್ರತಿಭಾ ಕಾರಂಜಿ, ಕ್ರೀಡೆ, ರಸಪ್ರಶ್ನೆ, ಮುಂತಾದ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಇದರಿಂದ ಬೌದ್ಧಿಕ ವಿಕಸನ ಹೊಂದಲಿದೆ ಎಂದರು.

    ಗ್ರಾಪಂ ಅಧ್ಯಕ್ಷೆ ಲಕ್ಷ್ಮವ್ವ ಇಡಗಲ್, ಉಪಾಧ್ಯಕ್ಷ ಸುರೇಶ, ಸಿಆರ್‌ಪಿಗಳಾದ ದೇವರಡ್ಡಿ ಕಲ್ಗುಡಿ, ಪ್ರಮುಖರಾದ ಯರಿಯಪ್ಪಗೌಡ,
    ಸಿದ್ದನಗೌಡ, ಶಿವಮ್ಮ, ಮಲ್ಲಪ್ಪ, ಶಾಂತಮ್ಮ, ಶಿವಲೀಲಾ, ಪವಿತ್ರಾ, ಬಸಪ್ಪ, ಮೈಲಕ್ಕ, ಹುಲಿಗೆವ್ವ, ವಿರುಪಾಕ್ಷಗೌಡ,
    ಗಾಳೆಪ್ಪ, ರೇಖಾ, ಗಂಗವ್ವ, ಮುತ್ತಪ್ಪ, ಶಂಕರರಡ್ಡಿ, ಯಮನವ್ವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts