More

    ಪ್ರತಿಭಾ ಸ್ಪರ್ಧೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ

    ಚಿಕ್ಕೋಡಿ: ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಲಾಗಿದ್ದ ಹ್ಯಾಸ್ ಟ್ಯಾಲೆಂಟ್ ಪ್ರತಿಭಾ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಮಾಜ ಸೇವೆಗಾಗಿ ನಮ್ಮ ಕುಟುಂಬ ಇನ್ನಷ್ಟು ತೊಡಗಿಸಿಕೊಳ್ಳಲಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

    ಪಟ್ಟಣದ ಆರ್.ಡಿ. ಹೈಸ್ಕೂಲ್ ಮೈದಾನದಲ್ಲಿ ಸಂಸದ ಅಣ್ಣಸಾಹೇಬ ಜೊಲ್ಲೆ ಜನ್ಮದಿನದ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ ಪ್ರತಿಭಾ ಸ್ಪರ್ಧೆಯ ಅಂತಿಮ ಸುತ್ತಿನ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಚಿಕ್ಕೋಡಿ ಲೋಕಸಭೆಯ ವಿಧಾನಸಭಾ ಕ್ಷೇತ್ರಗಳ 2,280 ತಂಡಗಳಿಂದ 8,450 ಸ್ಪರ್ಧಾಳುಗಳು ಭಾಗವಹಿಸಿದ್ದಾರೆ ಎಂದರು.

    ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ. ಆದರೆ, ನನ್ನನ್ನು ಬೆಳೆಸುವಲ್ಲಿ ಕುಟುಂಬದ ಬೆಂಬಲ ಅದ್ಭುತ. ಜೊಲ್ಲೆ ಕುಟುಂಬದಿಂದ ಸಮಾಜಕ್ಕೆ ಸೇವೆಯ ಕೊಡುಗೆ ಸಿಕ್ಕಿದೆ. ನನ್ನನ್ನು ಸಂಸದ ಜೊಲ್ಲೆ ಸಮಾಜಮುಖಿ ಕಾರ್ಯ ಮಾಡುವಂತೆ ಪ್ರೋತ್ಸಾಹಿಸಿದರು. ಕುಟುಂಬದ ಯಾವುದೇ ಕಾರ್ಯಕ್ರಮವಿದ್ದರೂ ಸಮಾಜಕ್ಕೆ ಉಪಯುಕ್ತವಾಗಲು ಪ್ರಯತ್ನಿಸುತ್ತಾರೆ. ಯಕ್ಸಂಬಾದಲ್ಲಿ ಅವರು ನೆಟ್ಟ ಬೀರೇಶ್ವರ ಸಸಿಗಳು ಇಂದು 154 ಸಹಕಾರಿ ಶಾಖೆಗಳಾಗಿ ಪರಿವರ್ತನೆಯಾಗಿವೆ. ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಕಾರ ಸ್ಮರಣೀಯ ಎಂದರು.

    ಜನ್ಮದಿನಾಚರಣೆ ಸಮಿತಿ ಅಧ್ಯಕ್ಷ ದುರ್ಯೋಧನ ಐಹೊಳೆ ಮಾತನಾಡಿ, ಸಂಸದ ಜೊಲ್ಲೆ ಕೈಗೊಳ್ಳುವ ಕೆಲಸಗಳಿಗೆ ಜಯ ಸಿಗಲಿ ಎಂದರು. ರಾಜ್ಯ ವಿಶೇಷ ಒಲಿಂಪಿಕ್ಸ್ ನಿರ್ದೇಶಕ ಅಮರೇಂದ್ರ ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ಶಾಂತಲಾ ಭಟ್, ಜೋತಿಪ್ರಸಾದ ಜೊಲ್ಲೆ, ಪ್ರಿಯಾಂಕಾ ಜೊಲ್ಲೆ, ಹಾಲಸಿದ್ಧನಾಥ ಕಾರ್ಖಾನೆ ಅಧ್ಯಕ್ಷ ಎಂ.ಪಿ. ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಜಯವಂತ ಭಾಟಲೆ, ರಾಜು ಗುಂದೇಶಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts