More

    ಸ್ವಾವಲಂಬಿ ಬದುಕಿಗೆ ಟೇಲರಿಂಗ್​ ಸಹಕಾರಿ

    ಕೋಲಾರ: ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಟೇಲರಿಂಗ್​ ಸಹಕಾರಿ ಎಂದು ಪೌರಾಯುಕ್ತ ಶಿವಾನಂದ ಹೇಳಿದರು.

    ನಗರದ ಸ್ಕೌಟ್ಸ್​ ಭವನದಲ್ಲಿ ಜಿಲ್ಲಾ ಸ್ಕೌಟ್ಸ್​ ಗೈಡ್ಸ್​ ಸಂಸ್ಥೆ, ರೋಟರಿ ಕೋಲಾರ ನಂದಿನಿ ಮತ್ತು ಶ್ರೀಚೌಡೇಶ್ವರಿ ರೂರಲ್​ ಅಂಡ್​ ಅರ್ಬನ್​ ಡೆವೆಲಪ್​ಮೆಂಟ್​ ಟ್ರಸ್ಟ್​ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಟೇಲರಿಂಗ್​ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು. ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದೆ. ಜತೆಗೆ ತರಬೇತಿಯೂ ನೀಡುತ್ತಿದೆ. ಇದರ ಪ್ರಯೋಜನ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.
    ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ದೇಶದ ಪ್ರಗತಿಯಲ್ಲಿ ಮಹಿಳೆಯ ಪಾತ್ರ ಹೆಚ್ಚಿದೆ. ಎಲ್ಲ ಮಹಿಳೆಯರು ತಮ್ಮ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಿಕೊಳ್ಳಲು ಟೇಲರಿಂಗ್​ ತರಬೇತಿ ಸಹಕಾರಿ ಎಂದರು.
    ಸರ್ಕಾರದಿಂದ ಸಿಗುವ ಹೊಲಿಗೆ ಯಂತ್ರವನ್ನು ಪಡೆದು ತಮ್ಮ ಮನೆಗಳಲ್ಲಿಯೇ ಉದ್ಯಮ ಪ್ರಾರಂಭಿಸಬಹುದು. ಸೇವಾ ಮನೋಭಾವದಿಂದ ನಡೆಸುವ ಸಂಘ&ಸಂಸ್ಥೆಗಳಿಗೆ ಸರ್ಕಾರ ಕನಿಷ್ಠ ಮಟ್ಟದಲ್ಲಿ ಆರ್ಥಿಕವಾಗಿ ಸಹಾಯ ಮಾಡಿದರೆ. ಮತ್ತಷ್ಟು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂದು ತಿಳಿಸಿದರು.
    ಪಧಾದಿಕಾರಿಗಳಾದ ಡಾ.ಚಂದ್ರಶೇಖರ್​, ಸುರೇಶ್​, ಉಮೇಶ್​, ನಾರಾಯಣಸ್ವಾಮಿ, ಉಮಾದೇವಿ, ರಮೇಶ್​ ನಾಯಕ್​, ಮುನಿನಾರಾಯಣಪ್ಪ, ಸ್ಕೌಟ್​ ಬಾಬು, ಸುನಿತಾ, ರಾಮಕೃಷ್ಣೇಗೌಡ, ಕೃಷ್ಣಮೂರ್ತಿ, ಭಾಸ್ಕರ್​ ರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts