More

    ನಿಮ್ ಹೆಣ್ಮಕ್ಕಳಾಗಿದ್ರೆ ಹೀಗೆ ಮಾಡ್ತೀರಾ?: ಅಧಿಕಾರಿಗಳಿಗೆ ತಹಸೀಲ್ದಾರ್ ತರಾಟೆ, ಕ್ರೀಡಾಕೂಟ ಅವ್ಯವಸ್ಥೆಗೆ ಗರಂ

    ನೆಲಮಂಗಲ: “ನಿಮ್ ಹೆಣ್ಮಕ್ಕಳಾಗಿದ್ರೆ ಹೀಗೆ ಮಾಡ್ತೀರಾ? ಸರ್ಕಾರಿ ಶಾಲಾ ಮಕ್ಕಳು ಅಂದ್ರೆ ಅಷ್ಟೊಂದು ಉದಾಸೀನಾನ? ನಿಮ್ಮ ಕರ್ತವ್ಯಲೋಪಕ್ಕೆ ನಾವೆಲ್ಲ ತಲೆತಗ್ಗಿಸುವಂತಾಗಿದೆ..”
    ನೆಲಮಂಗಲದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ 4 ದಿನಗಳ ಕಾಲ ಆಯೋಜಿಸಿರುವ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದ ಅವ್ಯವಸ್ಥೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ.ಮಂಜುನಾಥ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಕ್ರೀಡಾಕೂಟದಲ್ಲಿನ ಮೂಲಸೌಕರ್ಯಗಳನ್ನು ಪ್ರತ್ಯಕ್ಷವಾಗಿ ಕಂಡಿದ್ದಲ್ಲದೆ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು.

    ಆಯೋಜಕರಿಗೆ ಎಚ್ಚರಿಕೆ: ಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿನಿಯರಿಗೆ ಬಟ್ಟೆ ಬದಲಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದ್ದನ್ನು ಗಮನಿಸಿ ಇನ್ನು ಮುಂದೆ ಇಂಥ ಅವ್ಯವಸ್ಥೆ ಪುನಾವರ್ತನೆಯಾದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಕ್ರೀಡಾಕೂಟ ಆಯೋಜಕರ ಬೇಜಬ್ದಾರಿಯಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಆಗುವಂತಾಗಿದೆ ಎಂದು ಕಿಡಿಕಾರಿದರು. ಸ್ವಚ್ಛತೆಗೆ ಆದ್ಯತೆ ನೀಡಬೇಕು, ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್, ಪ್ರಥಮ ಚಿಕಿತ್ಸೆಗೆ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ತಾಕೀತು ಮಾಡಿದರು.

    ಕೊಠಡಿ ವ್ಯವಸ್ಥೆ: ಕ್ರೀಡಾಂಗಣದಲ್ಲಿನ ಕೊಠಡಿಯೊಂದನ್ನು ತಾತ್ಕಾಲಿಕವಾಗಿ ಬಟ್ಟೆ ಬದಲಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಯಿತು, ಎರಡು ಇ-ಟಾಯ್ಲೆಟ್, ಶುದ್ಧಕುಡಿಯುವ ನೀರಿನ ಕ್ಯಾನ್‌ಗಳ ವ್ಯವಸ್ಥೆ ಮಾಡಲಾಯಿತು.

    ವಿಜಯವಾಣಿ ವರದಿ ಪರಿಣಾಮ

    ಕ್ರೀಡಾಕೂಟದ ಅವ್ಯವಸ್ಥೆ ಬಗ್ಗೆ ವಿಜಯವಾಣಿಯಲ್ಲಿ ಜು.20ರಂದು ‘ಮರದ ಮರೆಯಲ್ಲಿ ಬಟ್ಟೆ ಬದಲಿಸಿದ ವಿದ್ಯಾರ್ಥಿನಿಯರು’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ವರದಿ ಗಮನಿಸಿದ ತಹಸೀಲ್ದಾರ್ ಗುರುವಾರ ಕ್ರೀಡಾಕೂಟದ ಅವ್ಯವಸ್ಥೆ ಸರಿಪಡಿಸುವ ವ್ಯವಸ್ಥೆ ಮಾಡಿದರು. ಪತ್ರಿಕೆ ವರದಿಗೆ ಧನ್ಯವಾದ ತಿಳಿಸಿದರು.

    ನಿಮ್ ಹೆಣ್ಮಕ್ಕಳಾಗಿದ್ರೆ ಹೀಗೆ ಮಾಡ್ತೀರಾ?: ಅಧಿಕಾರಿಗಳಿಗೆ ತಹಸೀಲ್ದಾರ್ ತರಾಟೆ, ಕ್ರೀಡಾಕೂಟ ಅವ್ಯವಸ್ಥೆಗೆ ಗರಂ
    ನೆಲಮಂಗಲದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ ಗುರುವಾರ ಭೇಟಿ ನೀಡಿದ ತಹಸೀಲ್ದಾರ್ ಕೆ.ಮಂಜುನಾಥ್ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು.

    ಸೇತುವೆ ಮೇಲೆ ಡಿಯೋ ನಿಲ್ಲಿಸಿ, ನದಿಗೆ ಹಾರಿದ ವಿದ್ಯಾರ್ಥಿನಿ; ತಾಲೂಕು ಪಂಚಾಯಿತಿ ಸದಸ್ಯನ ಪುತ್ರಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts