More

    ಟ್ಯಾಬ್ಲೆಟ್ ಶೈಕ್ಷಣಿಕ ಪ್ರಗತಿಗೆ ಪೂರಕ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಮತ

    ತುಮಕೂರು : ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಟ್ಯಾಬ್ಲೆಟ್ ಪಿಸಿಗಳ ವಿತರಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆ ಮತ್ತು ಐಸಿಟಿಯುಕ್ತ ಸ್ಮಾರ್ಟ್ ತರಗತಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಟ್ಯಾಬ್ಲೆಟ್ ಉಪಯೋಗಿಸಬೇಕು. ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.

    ಶಿಕ್ಷಣ ಜವಾಬ್ದಾರರನ್ನಾಗಿ, ಶಕ್ತಿಯುತರನ್ನಾಗಿ ಮಾಡುತ್ತದೆ. ಈ ದಿಕ್ಕಿನಲ್ಲಿ ಮಕ್ಕಳು ಬೆಳೆಯಬೇಕು, ಶ್ರಮಪಡಬೇಕು. ಸಾಧನೆಗೆ ಅನುಕೂಲಕರ ಸಾಧನಗಳು ಮುಖ್ಯಗಿದ್ದು, ಈ ನಿಟ್ಟಿನಲ್ಲಿ ಟ್ಯಾಬ್ಲೆಟ್ ವಿತರಣೆ ಮಾಡಲಾಗುತ್ತಿದೆ ಎಂದರು. ವಿದ್ಯಾರ್ಥಿಗಳು ಹೊಸತನವನ್ನು ಹುಡುಕುವ ತವಕ ರೂಢಿಸಿಕೊಳ್ಳಬೇಕು, ಇರುವ ಜ್ಞಾನದ ಜತೆಗೆ ಮತ್ತಷ್ಟು ಪೂರಕವಾದುದನ್ನು ಸೇರಿಸಿಕೊಂಡು ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು. ವಿಶ್ಲೇಷಣೆ ವಾಡುವುದನ್ನೂ ಬೆಳೆಸಿಕೊಳ್ಳಬೇಕು. ಒಂದೇ ಪುಸ್ತಕ, ಒಂದೇ ವಿಚಾರಕ್ಕೆ ಜ್ಞಾನ ಹೆಚ್ಚಿಸಿಕೊಳ್ಳುವ ಬದಲು ಬೇರೆ ಬೇರೆ ಮೂಲಗಳಿಂದ ಜ್ಞಾನಾರ್ಜನೆ ವೃದ್ಧಿ ಮಾಡಿಕೊಂಡರೆ ನೈಜ ಅರಿವು ಬೆಳೆಯುತ್ತದೆ ಎಂದರು.

    ವಿಜ್ಞಾನ ಮತ್ತು ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾದ ಜ್ಞಾನ ಬೆಳೆಸಿಕೊಳ್ಳಬೇಕು ಇಲ್ಲದಿದ್ದರೆ ಹಿಂದುಳಿಯಬೇಕಾಗುತ್ತದೆ. ಗೋಡೆಗಳು, ಬೋರ್ಡ್‌ಗಳು ಜ್ಞಾನ ಕಲಿಸಲ್ಲ. ಹಾಗಾಗಿ ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಬೇಕು, ಹೊಸತನವನ್ನು ಕಲಿಸಬೇಕು. ಕಲಿಕೆಗೆ ಮಕ್ಕಳನ್ನು ತೊಡಗಿಸಿದರೆ ಮಕ್ಕಳು ಬುದ್ದಿವಂತರಾಗುತ್ತಾರೆ ಅದಕ್ಕೆ ಪೂರಕವಾದ ಮಾಹಿತಿ ಸಂಗ್ರಹ ಮಾಡಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು.

    ಲೀಡ್ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಎಸ್.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ 5927 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಲಾಗಿದ್ದು, ಸಾಂಕೇತಿಕವಾಗಿ ಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ. ಇದರಿಂದ ಉನ್ನತ ಶಿಕ್ಷಣದ ಬೋಧನೆ ಮತ್ತು ಕಲಿಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿಯಾಗಿದೆ ಎಂದರು.

    ಅಹಂ ಬಿಟ್ಟು ಕಲಿಯಿರಿ : ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯನ್ನು ಯಾರೂ ಬೊಟ್ಟು ವಾಡಿ ತೋರಿಸುವುದಿಲ್ಲ, ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಯನ್ನು ನಾನಾ ತರದಲ್ಲಿ ಪ್ರಶ್ನಿಸಿ ಬೊಟ್ಟು ವಾಡುತ್ತಾರೆ. ಅಂಕಗಳ ಆಧಾರದ ಮೇಲೆ ಬೌದ್ಧಿಕ ಶಕ್ತಿ ಅಳೆಯುವ ದುಸ್ಥಿತಿಯಿಲ್ಲಿ ನಾವಿದ್ದೇವೆ, ಪಠ್ಯವನ್ನು ಅರ್ಥ ವಾಡಿಕೊಂಡು ಅವಲೋಕನ ವಾಡಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು, ಇದಕ್ಕಿಂತ ದೊಡ್ಡ ಗುರು ಮತ್ತ್ಯಾರೂ ಇರುವುದಿಲ್ಲ ಎಂದು ಸಚಿವ ಜೆ.ಸಿ.ವಾಧುಸ್ವಾಮಿ ಹೇಳಿದರು. ವಿದ್ಯಾರ್ಥಿಗಳು ಅಹಂ ಬಿಟ್ಟು ಕಲಿಕೆಯಲ್ಲಿ ತೊಡಗಬೇಕು, ನಾನಿನ್ನೂ ವಿದ್ಯೆಯ ಕಲಿಕೆ ಹಾದಿಯಲ್ಲಿ ನಡೆಯುವ ದೂರ ಬಹಳಿಷ್ಟಿದೆ ಎಂದು ಮುನ್ನಡೆಯಬೇಕು. ವೃತ್ತಿ ಶಿಕ್ಷಣಕ್ಕಿಂತ ಸಾವಾನ್ಯ ಜ್ಞಾನ ಬಹಳ ಮುಖ್ಯ, ಸಾವಾನ್ಯ ಜ್ಞಾನ ಕಲಿಕೆಗೆ ಮಿತಿಯಿಲ್ಲ. ಸಾವಾನ್ಯ ಜ್ಞಾನ ವೃದ್ಧಿಯಾದರೆ ಬದುಕು ನಾವಂದುಕೊಂಡಂತೆ ಇರುತ್ತದೆ. ಜೀವನ ನಮ್ಮನ್ನು ಹೇಗೆ ಕರೆದೊಯ್ಯತ್ತದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ, ಅವಕಾಶ ಸಿಕ್ಕಾಗ ನಮಗೂ ಸಾಮರ್ಥ್ಯ ಇದೆ ಎಂಬ ಧೈರ್ಯ ನಮ್ಮಲ್ಲಿರಬೇಕು ಇದಕ್ಕೆ ಹೆಚ್ಚು ಕಲಿಯಬೇಕು ಎಂದರು.

    ಕಾಲಹರಣ ಮಾಡದಿರಿ : ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಅವಶ್ಯಕವಾಗಿದ್ದು ಸರ್ಕಾರ ಉಚಿತವಾಗಿ ಟ್ಯಾಬ್ಲೆಟ್ ವಿತರಿಸಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಕಾಲಹರಣ ವಾಡುವುದಕ್ಕೆ ದುರುಪಯೋಗ ಪಡಿಸಿಕೊಳ್ಳಬಾರದು. ದಾರಿ ತಪ್ಪಿಸುವ ಸಾಧನವಾಗಬಾರದು, ಶೈಕ್ಷಣಿಕ ಗುಣಮಟ್ಟಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

    ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ ಶಹಾಪುರವಾಡ್, ಪಾಲಿಕೆ ಸದಸ್ಯೆ ಗಿರಿಜಾ, ಮಹಿಳಾ ಕಾಲೇಜು ಪ್ರಾಚಾರ್ಯೆ ಡಾ.ಬಿ.ಆರ್.ಲೀಲಾವತಿ ಮತ್ತಿತರರು ಇದ್ದರು. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆ ಮತ್ತು ಐ.ಸಿ.ಟಿ.ಯುಕ್ತ ಸ್ಮಾರ್ಟ್ ತರಗತಿ ಕೊಠಡಿಗಳ ಉದ್ಘಾಟನಾ ಸವಾರಂಭಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts