More

    ಪ್ರಾಚೀನ ವಿಷ್ಣುಮೂರ್ತಿಗೆ ಕೈಹಾಕಿದ ಮರಳು ಕಲಾಕೃತಿ ಕಲಾವಿದೆಯ ಬಂಧನ…!

    ಮೈಸೂರು: ಪ್ರಾಚೀನ ಮೂರ್ತಿ ವಿಚಾರದಲ್ಲಿ ಗ್ರಾಮಸ್ಥರೊಂದಿಗೆ ಗಲಾಟೆ ಮಾಡಿಕೊಂಡ ಪ್ರಖ್ಯಾತ ಮರಳು ಕಲಾಕೃತಿ ಕಲಾವಿದೆ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ.

    ಗೌರಿ ಎಂಬ ಕಲಾವಿದೆಯನ್ನು ಪೊಲೀಸರು ಬಂಧಿಸಿದ್ದಾರೆ. ಗತ ಕಾಲದ ವಿಷ್ಣುಮೂರ್ತಿಯನ್ನು ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಒಪ್ಪಿಸದ ಆರೋಪ ಕಲಾವಿದೆ ವಿರುದ್ಧ ಕೇಳಿಬರುತ್ತಿದೆ. ಬಿಳಿಗೆರೆ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಕಲಾವಿದೆಯನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ಗೂಗಲ್ ಪ್ಲೇ ಸ್ಟೋರ್​​ ನಿಂದ 59 ಚೀನಿ ಆ್ಯಪ್ ಗಳು ಔಟ್

    ತಿ.ನರಸೀಪುರ ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಗತ ಕಾಲದ ವಿಷ್ಣು ಮೂರ್ತಿ ಬಿದ್ದಿತ್ತು. ಅದರ ಪಕ್ಕದಲ್ಲೇ ಜೆಸಿಬಿಯಿಂದ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಮೂರ್ತಿಗೆ ಧಕ್ಕೆ ಆಗಬಹುದೆಂದು ಗೌರಿ ತಮ್ಮ ಬಳಿ ಮೂರ್ತಿಯನ್ನು‌ ಇರಿಸಿಕೊಂಡು, ಪ್ರಾಚ್ಯವಸ್ತು ಇಲಾಖೆ ವಶಕ್ಕೆ ನೀಡುತ್ತೇನೆಂದು ಹೇಳಿದ್ದರು. ಆದರೆ, ಗತ ಕಾಲದ ಮೂರ್ತಿಯನ್ನು ಸಂಬಂಧಿಸಿದ ಇಲಾಖೆಗೆ ಗೌರಿ ಒಪ್ಪಿಸಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.

    ಇನ್ನೊಂದೆಡೆ ಗೌರಿ ಪೋಷಕರು ಸಹ ಆರೋಪಿಸಿದ್ದು, ಗ್ರಾಮದ ಗುಂಪೊಂದು ಹಣಕ್ಕಾಗಿ ಬೇಡಿಕೆ ಇಡುತ್ತಿತ್ತು. ಹಣ ನೀಡಲು ಒಪ್ಪದಿದ್ದಕ್ಕೆ ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ ಎಂದಿದ್ದಾರೆ. ಗ್ರಾಮಸ್ಥರು ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಮಾಡದೆ ಎಫ್.ಐ.ಆರ್. ದಾಖಲಿಸಿದ್ದಾರೆ ಎಂದು ಪೊಲೀಸರ ವಿರುದ್ಧವೂ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ವಿಮಾನ ಹಾರಲಿಲ್ಲ, ಆದರೂ ತವರಿಗೆ ಹೋದ ಅನುಭವದಿಂದ ಭಾವುಕರಾದ ಪ್ರಯಾಣಿಕರು!

    ಕೆ‌.ಆರ್.ಎಸ್ ರಸ್ತೆಯಲ್ಲಿರುವ ಗೌರಿ ನಿವಾಸ ಜಲಭಾಗ್​ಗೆ ಭೇಟಿ ನೀಡಿದ ಪೊಲೀಸರು ವಿಷ್ಣುಮೂರ್ತಿಯನ್ನು ವಶಕ್ಕೆ ಪಡೆದು ಗೌರಿಯನ್ನು ಬಂಧಿಸಿದ್ದಾರೆ. ವಿಷ್ಣು ಮೂರ್ತಿ ಸಂರಕ್ಷಣೆ ಮಾಡಲು ಯತ್ನಿಸಿದ್ದಕ್ಕೆ ಪೊಲೀಸರು ಕೇಸ್ ದಾಖಲಿಸಿದ್ದಾರೆಂದು ಗೌರಿ ತಾಯಿ ಆರೋಪ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts