More

    ಗ್ರಾಹಕರ ಗಮನ ಸೆಳೆದ ಗಡ್ಡೆ ಗೆಣಸು ಮೇಳ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಸಹಜ ಸಮೃದ್ಧ, ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ನೇಚರ್ -Àಸ್ಟ್ ಗಾರ್ಡನ್ ಸಿಟಿ ಆಶ್ರಯದಲ್ಲಿ ನಗರದ ಕೋರ್ಟ್ ವೃತ್ತ ಬಳಿಯ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಗಡ್ಡೆ ಗೆಣಸುಗಳ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು.
    ಎರಡು ದಿನಗಳ ಮೇಳದಲ್ಲಿ ವಿವಿಧ ಜಿಲ್ಲೆಗಳ ರೈತರು ಬಗೆಬಗೆಯ ಗಡ್ಡೆ ಗೆಣಸುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದಾರೆ. ವಿವಿಧ ಪ್ರಭೇದದ, ವೈವಿದ್ಯಮಯ ಗಾತ್ರ ಹಾಗೂ ಆಕಾರದ ಗಡ್ಡೆ ಗೆಣಸುಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
    ಗಡ್ಡೆ ಗೆಣಸಿನ ಕೃಷಿ ಮಾಡಲು ಆಸಕ್ತ ರೈತರಿಗೆ ಬೆಳೆಗಾರರು ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಕೃಷಿಯ ಹಂಗಾಮು, ಬೆಳೆ ಉಪಚಾರ, ಸಂಸ್ಕರಣೆ, ಮಾರುಕಟ್ಟೆಯ ಮಾಹಿತಿಯನ್ನು ದೇವಧಾನ್ಯ ರೈತ ಕಂಪನಿಯು ನೀಡಿತು.
    ಹಳದಿ, ಕೆಂಪು ಮತ್ತು ಬಿಳಿ ಸಿಹಿಗೆಣಸು, ಪರ್ಪಲ್ ಯÁಮ್, ಬಳ್ಳಿ ಆಲೂಗಡ್ಡೆ, ಹಸಿರು ಮತ್ತು ಕಪ್ಪು ಅರಿಷಿಣ, ಸುವರ್ಣ ಗಡ್ಡೆ, ಮಾವಿನ ಶುಂಠಿ, ಕೂವೆ ಗೆಡ್ಡೆ, ಇತರ ಗಡ್ಡೆ ಗೆಣಸುಗಳು ಮಾರಾಟಕ್ಕಿವೆ.
    ಕುಂದಗೋಳದ ಮಹಿಳಾ ಸಂಘದವರು ಕೊರಲೆ, ರಾಗಿ ಮತ್ತು ಜೋಳದ ರೊಟ್ಟಿಯ ಜೊತೆ ಗಡ್ಡೆ ಗೆಣಸಿನ ಪಲ್ಯ ಉಣಬಡಿಸಿದರು. ಜೊತೆಗೆ ಅಪರೂಪದ ಹಣ್ಣಿನ ಗಿಡಗಳು, ದೇಸಿ ಬೀಜ, ಸಾವಯವ ಕೃಷಿ ಉತ್ಪನ್ನಗಳು, ಸಿರಿಧಾನ್ಯ, ಮೌಲ್ಯವಽðತ ಪದಾರ್ಥಗಳ ಮಳಿಗೆಗಳು ಇಲ್ಲಿವೆ.
    ಭಾನುವಾರ ಕಂದಮೂಲಗಳ ಆಹಾರ ತಯÁರಿಕೆ ಸ್ಪರ್ಧೆ ನಡೆಯಲಿದೆ. ಗಡ್ಡೆ ಗೆಣಸುಗಳನ್ನು ಬಳಸಿ, ಮನೆಯಲ್ಲೇ ಅಡುಗೆ ತಯÁರಿಸಿ ತರಬೇಕು. ಉತ್ತಮ ಅಡುಗೆಗೆ ಬಹುಮಾನ ಇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts