More

    ಮುಸ್ಲಿಮರು ಬಳಸುವ ಟೋಪಿ, ದುಪ್ಪಟ್ಟ ವಿರೋಧಿಸುವವರು ಈ ದೇಶವನ್ನೇ ಬಿಟ್ಟು ತೊಲಗಲಿ; ಹೀಗೆಂದು ಹೇಳಿದ್ದು ಯಾರು ಗೊತ್ತಾ..?

    ಸ್ವೀಡೆನ್​: ಇಸ್ಲಾಮಿಕ್ ಪದ್ಧತಿಯನ್ನು ವಿರೋಧಿಸುವವರು ದೇಶವನ್ನು ತೊರೆಯಬೇಕು ಎಂದು ಘೋಷಣೆ ಮಾಡಿದವರು ಯಾವುದೋ ರಾಜಕೀಯ ಅಥವಾ ಧಾರ್ಮಿಕ ಮುಖಂಡರಲ್ಲ.

    ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಬಳಸುವ ಧಾರ್ಮಿಕ ಟೋಪಿ ಹಾಗೂ ದುಪ್ಪಟ್ಟ ನಿಷೇಧಿಸಿರುವುದನ್ನು ತೀವ್ರವಾಗಿ ಅವರು ವಿರೋಧಿಸಿದ್ದಾರೆ. ಅಲ್ಲದೆ ಮುಸ್ಲಿಂ ಸಾಂಪ್ರಾದಾಯಿಕ ಉಡುಪನ್ನು ವಿರೋಧಿಸುವವರಿಗೆ ದೇಶದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಹೇಳಿದ್ದಾರೆ.

    ದೇಶದಲ್ಲಿ ವಲಸಿಗರು ಆಗಮಿಸುತ್ತಿರುವ ಗೊಂದಲದಲ್ಲೇ ಇಂತಹ ಹೇಳಿಕೆಗಳು ಅಲ್ಲಿ ಜನಪ್ರಿಯವಾಗುತ್ತಿವೆ. ಅಲ್ಲದೆ ಇಂತಹ ಹೇಳಿಕೆಗಳನ್ನು ಅಲ್ಲಿನ ಅಧಿಕಾರಿಗಳು ಪ್ರೋತ್ಸಾಹಿಸಿದ್ದಾರೆ. ಇಷ್ಟಕ್ಕೂ ಈ ಹೇಳಿಕೆ ನೀಡಿದ್ದು ಒಬ್ಬ ಶಿಕ್ಷಕಿ. ನವೋಯೆಲ್ ಐಸೌಯಿ ಅವರ ಹೇಳಿಕೆಯನ್ನು “ಧೈರ್ಯದ ಹೇಳಿಕೆ” ಎಂದು ಸ್ವೀಡಿಶ್​ ಅಧಿಕಾರಿಗಳು ಹೊಗಳಿದ್ದಾರೆ.

    ನವೋಯೆಲ್ ಐಸೌಯಿ ಎಂಬ ಶಿಕ್ಷಕಿ ಇಲ್ಲಿನ ಮಹಾನಗರ ಪಾಲಿಕೆ ನಡೆಸುವ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅಲ್ಲದೆ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ಉಡುಪನ್ನು ಧರಿಸುತ್ತಾರೆ. ಶಿಕ್ಷಕಿ ಧರಿಸುವ ಹಿಜಾಬ್ ಎಂದೂ ಕರೆಯಲ್ಪಡುವ ಇಸ್ಲಾಮಿಕ್ ದುಪ್ಪಟ್ಟ ಮೇಲಿನ ನಿಷೇಧವನ್ನು ಧಿಕ್ಕರಿಸಿ ಎಂದು ಹೇಳಿದ್ದಾರೆ.

    ಸ್ಥಳೀಯ ಶಾಲೆಗಳಲ್ಲಿ ಹಿಜಾಬ್ ಉಡುಪು ಧರಿಸುವುದನ್ನು ನಿಷೇಧಿಸಬೇಕು ಎಂದು ಅಲ್ಲಿನ ರಾಜಕೀಯ ಪಕ್ಷದ ಸದಸ್ಯೆ ಲೌಬ್ನಾ ಸ್ಟೆನ್ಸೇಕರ್ ಗೆರಾನ್ಸನ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕಿ ಈ ರೀತಿ ನೀಡಿದ್ದಾರೆ.

    ಇಸ್ಲಾಮಿಕ್​ ಪದ್ಧತಿಯೂ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುತ್ತದೆ. ಧಾರ್ಮಿಕ ಉಪದೇಶ ನೀಡಿ ಅವರಿಗೆ ಮುಸುಕನ್ನು ಹಾಕಲಾಗುತ್ತದೆ ಎಂದು ಲೌಬ್ನಾ ಸ್ಟೆನ್ಸೇಕರ್ ಗೆರಾನ್ಸನ್ ಹೇಳಿದ್ದರು.

    ಸ್ವೀಡನ್ ಬಳಿಯ ಬೋರೆಸ್‌ನ ಎಂಬ ಪ್ರದೇಶಕ್ಕೆ ಇತ್ತೀಚೆಗೆ ಸೊಮಾಲಿಯನ್ ವಲಸಿಗರು ಬರುತ್ತಿದ್ದಾರೆ. ಅವರು ವಲಸೆ ಬಂದ ನಂತರ ಆ ಪ್ರದೇಶದಲ್ಲಿ ಇಸ್ಲಾಮೀಕರಣದ ಪ್ರಕ್ರಿಯೆ ಹೆಚ್ಚು ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಈಗ ಉಡುಪಿನ ಬಗ್ಗೆ ವಾದ ವಿದಾಗಳು ಹುಟ್ಟಿಕೊಂಡಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts