More

    ಜಲಸಂರಕ್ಷಣೆ ಪ್ರತಿಯೊಬ್ಬರ ಹೊಣೆ

    ಪಾಂಡವಪುರ: ಪ್ರತಿಯೊಬ್ಬರೂ ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಕೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೀಣಾ ಹೇಳಿದರು.

    ಪಟ್ಟಣದ ಪುರಸಭೆ ಆವರಣದಲ್ಲಿರುವ ಸ್ವರ್ಣ ಜಯಂತಿ ರೋಜ್‌ಗಾರ್ ಯೋಜನೆಯ ಸಮುದಾಯ ಸಂಘಟನಾ ಕಚೇರಿಯಲ್ಲಿ ಆಯೋಜಿಸಿದ್ದ ಜಲದೀಪಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಭವಿಷ್ಯದಲ್ಲಿ ಪ್ರತಿಯೊಂದು ನೀರಿನ ಹನಿ ಶೇಖರಣೆಗೂ ಅಪಾರ ಶ್ರಮ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಆದ್ದರಿಂದ ಜಲಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು. ಕಾರ್ಯಕ್ರಮದ ಬಳಿಕ ಪಟ್ಟಣದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಮಹಿಳಾ ಸಂಘಟನೆಗಳ ಪ್ರತಿನಿಧಿಗಳನ್ನು ಜಲ ಶುದ್ಧೀಕರಣ ಘಟಕಕ್ಕೆ ಕರೆದೊಯ್ದು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುವ ಕಾರ್ಯವಿಧಾನಗಳ ಬಗ್ಗೆ ತಿಳಿಸಿ ನೀರು ಬಳಕೆ ಬಗ್ಗೆ ಅರಿವು ಮೂಡಿಸಲಾಯಿತು.

    ಪುರಸಭೆ ಕಿರಿಯ ಅಭಿಯಂತರ ಚೌಡಪ್ಪ, ನಗರ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ವೈ.ಕೆ.ಯೋಗೇಶ್, ಸ್ವರ್ಣ ಜಯಂತಿ ರೋಜ್‌ಗಾರ್ ಯೋಜನೆಯ ಸಮುದಾಯ ಸಂಘಟಕಿ ಎಚ್.ಎನ್.ವನಿತಾ, ಶ್ರೀನಿವಾಸ್, ಮಣಿ, ಸ್ವಸಹಾಯ ಗುಂಪಿನ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts