More

    ಮಠದಿಂದ ಹೊರಬರಲು ಒಪ್ಪದ ಸ್ವಾಮೀಜಿ

    ಶ್ರೀರಂಗಪಟ್ಟಣ: ಕಾವೇರಿ ನದಿ ಪ್ರವಾಹದಿಂದ ಜಲಾವೃತವಾಗಿರುವ ನಡುಗಡ್ಡೆಯ ಗೌತಮ ಕ್ಷೇತ್ರದ ಮಠದ ಸ್ಥಳಕ್ಕೆ ಭಾನುವಾರ ತಹಸೀಲ್ದಾರ್ ಎಂ.ವಿ.ರೂಪಾ ತೆರಳಿ ಪರಿಶೀಲನೆ ನಡೆಸಿದರು.

    ಸಂಪರ್ಕ ಕಳೆದುಕೊಂಡ ಗೌತಮ’ ಕ್ಷೇತ್ರ ಶೀರ್ಷಿಕೆಯಡಿ ವಿಜಯವಾಣಿ ಭಾನುವಾರದ ಸಂಚಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ದೂರದಿಂದಲೇ ಪೀಠಾಧಿಪತಿ ಗಜಾನನ ಶ್ರೀ ಜತೆ ಮೊಬೈಲ್‌ನಲ್ಲಿ ಚರ್ಚೆ ನಡೆಸಿ ಮಾಹಿತಿ ಪಡೆದರು. ಜಿಲ್ಲಾಡಳಿತದ ನಿರ್ದೇಶನದೊಂದಿಗೆ ಸ್ಥಳಕ್ಕೆ ತೆರಳಿ ಗಜಾನನ ಶ್ರೀಗಳ ಆರೋಗ್ಯ ಮತ್ತು ಪರಿಸ್ಥಿತಿ ಕುರಿತು ಮಾಹಿತಿ ಪಡೆದ ತಹಸೀಲ್ದಾರ್, ಮಠದಿಂದ ಸ್ವಾಮೀಜಿ ಮತ್ತು ಅವರ ಅನುಯಾಯಿಗಳನ್ನು ಹೊರಬರುವಂತೆ ಮನವೊಲಿಸಲು ಯತ್ನಿಸಿದರು.

    ಆದರೆ, ಹೊರಬರಲು ಸ್ವಾಮೀಜಿ ಒಪ್ಪದ ಕಾರಣ ತಾಲೂಕು ಆಡಳಿತದಿಂದ ತಿಳಿವಳಿಕೆ ನೋಟಿಸ್ ನೀಡಲು ಮುಂದಾಗಿದ್ದು, ತಮ್ಮ ಜವಾಬ್ದಾರಿ ಮೇರೆಗೆ ಅಲ್ಲಿ ಇರಲು ಇಚ್ಚಿಸಿರುವುದನ್ನು ಲಿಖಿತವಾಗಿ ಹಿಂಬರಹದ ಪತ್ರ ನೀಡುವಂತೆ ತಿಳಿಸಿದ್ದಾರೆ.

    ಕೆಆರ್‌ಎಸ್ ಜಲಾಶಯದಿಂದ ಎಷ್ಟು ಲಕ್ಷ ಕ್ಯೂಸೆಕ್ ನೀರು ಹರಿಸಿದರೂ ತಾವು ಮಠದಿಂದ ಹೊರಬರುವುದಿಲ್ಲ, ಪ್ರವಾಹದಿಂದ ಮಠಕ್ಕೆ ಈ ಹಿಂದಿನಿಂದಲೂ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ತಿಳಿಸಿದ ಸ್ವಾಮೀಜಿ, ತಮ್ಮ ಬಳಿ ಹಲವು ತಿಂಗಳಿಗೆ ದಿನಸಿ ಇದ್ದು ತೊಂದರೆ ಕೊಡದಂತೆ ಅಧಿಕಾರಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ವಿರುದ್ಧ ನಡೆದುಕೊಳ್ಳುತ್ತಿರುವ ಕಾರಣ ತಹಸೀಲ್ದಾರ್ ನೋಟಿಸ್ ನೀಡುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಒಂದು ವೇಳೆ ಸಮಸ್ಯೆ ಉಂಟಾದರೆ ತಾವೇ ಖುದ್ದು ತಾಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts