More

    ಸ್ವಾಮೀಜಿಗೂ ಕರೊನಾ, ಆಯುರ್ವೇದ ಚಿಕಿತ್ಸೆಗಾಗಿ ಪ್ರಧಾನಿಗೆ ಪತ್ರ

    ಶಿವಮೊಗ್ಗ: ಕರೊನಾ ಸೋಂಕಿಗೆ ಒಳಪಟ್ಟ ಸ್ವಾಮೀಜಿಯೊಬ್ಬರು ತಮಗೆ ಆಯುರ್ವೇದ ಪದ್ಧತಿ ಅನುಸರಿಸಿ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ, ಡಿಎಚ್‌ಒ, ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಪತ್ರ ಬರೆದಿದ್ದಾರೆ.

    ಕಲ್ಲಗಂಗೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಗುರುವಾರ ಕರೊನಾ ಸೋಂಕು ದೃಢಪಟ್ಟಿದ್ದು, ಸದ್ಯ ಮೆಗ್ಗಾನ್ ಆಸ್ಪತ್ರೆಯ ನಿರ್ಬಂಧಿತ ಕರೊನಾ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಅವರು ಪ್ರಧಾನಿ, ಸಿಎಂ ಸೇರಿ ಇತರರಿಗೆ ಬರೆದಿರುವ ಪತ್ರದ ಸಾರಾಂಶ ಇಲ್ಲಿದೆ.

    ಇದನ್ನೂ ಓದಿರಿ ಆಗಸ್ಟ್ ಅಂತ್ಯಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಹೇಳಿಕೆ

    ‘ವೈಜ್ಞಾನಿಕವಾಗಿ, ಆಧುನಿಕ ವೈದ್ಯ ಪದ್ಧತಿಗನುಗುಣವಾಗಿ ಉಪಚರಿಸುತ್ತಿರುವುದು ವರ್ತಮಾನದ ದಿನಗಳಲ್ಲಿ ಸರಿ ಇದ್ದರೂ ಅಲೋಪಥಿಗಿಂತ ಆಯುರ್ವೇದ ಚಿಕಿತ್ಸೆ ಬಾಲ್ಯದಿಂದಲೂ ನನ್ನ ಶರೀರಕ್ಕೆ ಒಗ್ಗಿದೆ’ ಎಂದು ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಪತ್ರದಲ್ಲಿ ತಿಳಿಸಿದ್ದಾರೆ.

    ‘ಸನಾತನ ಪರಂಪರೆಯ ಆಯುರ್ವೇದ ಔಷಧೀಯ ಪದ್ಧತಿಗಳಲ್ಲಿ ಹೆಚ್ಚು ನಂಬಿಕೆ ಹೊಂದಿದ್ದೇನೆ. ಅಲ್ಲದೆ ನನ್ನ ತಿಳಿವಳಿಕೆ ಪ್ರಕಾರ ಲಾಕ್ಷಣಿಕ ಚಿಕಿತ್ಸೆ ಹೊರತುಪಡಿಸಿ ಸೂಕ್ತ ಮತ್ತು ನಿರ್ದಿಷ್ಟವಾದ ಚಿಕಿತ್ಸೆ ಅಲೋಪಥಿ ವೈದ್ಯರಲ್ಲಿಯೂ ಲಭ್ಯವಿಲ್ಲ. ಹಾಗಾಗಿ ನನ್ನ ಸ್ವಾಸ್ಥೃ ಸಂರಕ್ಷಣೆ ವಿಷಯದಲ್ಲಿ ಆಯುರ್ವೇದ ಔಷಧ ಪದ್ಧತಿಗೆ ಮೊದಲ ಆದ್ಯತೆ ನೀಡಿರುವೆ. ಕರೊನಾಗೆ ಸೂಕ್ತ ಆಯುರ್ವೇದ ತಜ್ಞರಿಂದ ಚಿಕಿತ್ಸೆ ಕೊಡಿಸುವ ಏರ್ಪಾಡು ಮಾಡಿದಲ್ಲಿ ನಾನು ಕೃತಜ್ಞನಾಗುತ್ತೇನೆ’ ಎಂದು ಮನವಿ ಮಾಡಿದ್ದಾರೆ.

    ಇದನ್ನೂ ಓದಿರಿ ಉಡುಪಿಯಲ್ಲಿ ಲವ್​ ಜಿಹಾದ್​? ಮುಸ್ಲಿಂ ಯುವಕನ ಬಲೆಗೆ ಸಿಲುಕಿದಳೇ 18ರ ಯುವತಿ…

    ‘ಈ ಪ್ರಕ್ರಿಯೆಯಿಂದ ಎದುರಾಗಬಹುದಾದ ಸಮಸ್ಯೆ, ಸನ್ನಿವೇಶಗಳ ಅರಿವಿದ್ದು ನನ್ನ ವಿವೇಕಾಯುತ ನಿರ್ಧಾರದಲ್ಲಿ ಯಾರೊಬ್ಬರ ಹಸ್ತಕ್ಷೇಪ ಅಥವಾ ಒತ್ತಡಗಳಿಲ್ಲ. ಹಾಗಾಗಿ ನನಗೆ ಆಯುರ್ವೇದ ಚಿಕಿತ್ಸೆ ಕೊಡಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಅಲೋಪಥಿ ವೈದ್ಯ ವಿಜ್ಞಾನದ ಅನುಸಾರ ಲಾಕ್ಷಣಿಕ ಚಿಕಿತ್ಸೆಗಳನ್ನೂ ಪಡೆಯಲು ನಾನು ಬದ್ಧನಿದ್ದೇನೆ’ ಎಂದು ಎರಡು ಪುಟಗಳ ಪತ್ರದಲ್ಲಿ ಸ್ವಾಮೀಜಿ ತಿಳಿಸಿದ್ದಾರೆ.

    ಇದನ್ನೂ ಓದಿರಿ ಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts