More

    ದೈಹಿಕ, ಮಾನಸಿಕವಾಗಿ ಆನಂದ ನೀಡಲಿರುವ ಸೂರ್ಯ ನಮಸ್ಕಾರ

    ಸೋಮವಾರಪೇಟೆ: ಸೂರ್ಯ ನಮಸ್ಕಾರದಿಂದ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕವಾಗಿ ಆನಂದ ಅನುಭವಿಸಬಹುದು ಎಂದು ನಿರಂತರ ಯೋಗ ಕೇಂದ್ರದ ಶಿಕ್ಷಕ ಕಿಬ್ಬೆಟ್ಟ ಗಣೇಶ್ ಹೇಳಿದರು.

    ಜೂನಿಯರ್ ಕಾಲೇಜು ಸಿಂಥೆಟಿಕ್ ಟರ್ಫ್ ಹಾಕಿ ಮೈದಾನದಲ್ಲಿ ನಿರಂತರ ಯೋಗ ಕೇಂದ್ರ ಮತ್ತು ಯೋಗ ಕರ್ಮಸ್ಯ ಕೌಶಲ ಕೇಂದ್ರ ವತಿಯಿಂದ ರಥಸಪ್ತಮಿ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸೂರ್ಯನಮಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಶಿಬಿರಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಥಸಪ್ತಮಿ ದಿನದಂದು ಸೂರ್ಯಾರಾಧನೆ ಮಾಡಿದರೆ ಅನೇಕ ರೋಗಗಳಿಂದ ಗುಣಮುಕ್ತರಾಗಬಹುದು. ರಥಸಮಪ್ತಮಿಯನ್ನು ಆರೋಗ್ಯ ಸಪ್ತಮಿ ಎಂದೂ ಕರೆಯುತ್ತಾರೆ ಎಂದು ಮಾಹಿತಿ ನೀಡಿದರು.

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಕೆ.ಎಸ್.ಪದ್ಮನಾಭ ಮಾತನಾಡಿ, ಯೋಗ ಶಿಸ್ತು ಕಲಿಸುತ್ತದೆ. ಮನಸ್ಸು ಮತ್ತು ದೇಹಗಳ ಮೇಲೆ ಸಂಪೂರ್ಣ ಪ್ರಭುತ್ವ ಪಡೆಯುವುದೇ ಯೋಗ. ನಿರಂತರ ಯೋಗದಿಂದ ಎಲ್ಲರೂ ಉತ್ತಮ ಆರೋಗ್ಯ ಹೊಂದಬಹುದು ಎಂದರು.

    ಯೋಗ ಕರ್ಮಸ್ಯ ಕೌಶಲ ಕೇಂದ್ರದ ಪ್ರಶಾಂತ್, ಉಪನ್ಯಾಸಕಿ ಜ್ಯೋತಿ, ಶಿಕ್ಷಕಿಯರಾದ ಬೀನಾ ಮೋಹನ್, ಕುದುಕುಳಿ ಚಂದ್ರಕಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts