More

    ಶರಣರ ವಚನಗಳು ಇಂದಿನ ದಿನಮಾನಗಳಲ್ಲಿ ಅವಶ್ಯ

    ಸಂಡೂರು: ಕಾಯಕ ಮತ್ತು ದಾಸೋಹ ಸಂದೇಶಗಳ ಮೂಲಕ ಮಹಾ ಮಾನವತಾವಾದಿ ಬಸವಣ್ಣನವರು ಸಾರ್ವಕಾಲಿಕ ದಾಖಲೆ ನಿರ್ಮಿಸಿದರು ಎಂದು ಶರಣೆ ಗಿರಿಜಕ್ಕ ದೇವರೆಡ್ಡಿ ಹೇಳಿದರು.

    ಪಟ್ಟಣದ ವಿರಕ್ತಮಠದಲ್ಲಿ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ಹಾಗೂ ಬಸವ ಜಯಂತಿ ಅಂಗವಾಗಿ ಶರಣ ಸಂಸ್ಕೃತಿಯ ನಡಾವಳಿಗಳ ಉದ್ದೇಶಿಸಿ ಭಾನುವಾರ ಮಾತನಾಡಿದರು.

    ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ

    ಮೂಢನಂಬಿಕೆ, ಜನ್ಮಸೂತಕ, ಕಂದಾಚಾರಗಳನ್ನು ಬಸವಣ್ಣನವರು ವಿರೋಧಿಸಿದರು. ಮೂಲಾ ನಕ್ಷತ್ರದಲ್ಲಿ ಹುಟ್ಟಿದರೆ ದೋಷ ಎನ್ನುವವರು ಹುಟ್ಟಿನ ಘಳಿಗೆ, ದಿನಗಳನ್ನು ಬದಲಾಯಿಸಬಲ್ಲರೆ ಎಂದು ಪ್ರಶ್ನಿಸಿದರು. ಶರಣರ ವಚನಗಳು ಇಂದಿನ ದಿನಮಾನಗಳಲ್ಲಿ ಬಹಳ ಅವಶ್ಯವಾಗಿವೆ. ಕಾಯಕ ದಾಸೋಹದ ಪರಿಕಲ್ಪನೆಗಳು ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ ಎಂದರು.

    ಇದನ್ನೂ ಓದಿ:ಲಂಡನ್​ನಲ್ಲೂ ಬಸವ ಜಯಂತಿ; ಬಸವೇಶ್ವರ ಫೌಂಡೇಷನ್​ನಿಂದ ಆಚರಣೆ

    ಶ್ರೀ ಪ್ರಭುಸ್ವಾಮೀಜಿ ಮಾತನಾಡಿದರು. 100ಜನಕ್ಕೆ ಶರಣೆ ಗಿರಿಜಕ್ಕ ದೇವರೆಡ್ಡಿ ಲಿಂಗದೀಕ್ಷೆ ನೀಡಿದರು. ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ನಾಗರಾಜ್ ಗುಡೆಕೋಟೆ, ಹಗರಿ ಬಸವರಾಜಪ್ಪ, ನರಿಶಿವಾನಂದ ಅಕ್ಕನ ಬಳಗದ ಸದಸ್ಯರಿದ್ದರು. ಗುಡೇಕೋಟೆ ನಾಗರಾಜ್ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts