More

    ಬದುಕಿಗೆ ಶರಣ ಚಿಂತನೆ ಮೈಗೂಡಿಸಿಕೊಳ್ಳಿ

    ಕಂಪ್ಲಿ: ಶರಣ ಚಿಂತನೆಗಳನ್ನು ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಎದುರಿಸಲು ಸಾಧ್ಯ ಎಂದು ಇಲ್ಲಿನ ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಹೇಳಿದರು.

    ಇದನ್ನೂ ಓದಿ: ಶರಣ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

    ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಅಕ್ಕನ ದೇವಸ್ಥಾನದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿ ಆಯೋಜಿಸಿದ್ದ ಶರಣ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸುವ ಬಗೆಯನ್ನು ಅಕ್ಕಮಹಾದೇವಿ ವಚನದಲ್ಲಿ ಪ್ರಸ್ತಾಪಿಸುವಂತೆ ಜೀವನ ಜಂಜಾಟದಿಂದ ಪಾರಾಗಲು ಇಷ್ಟದೈವದೊಂದಿಗೆ ಸಮಸ್ಥಿತಿ ಮನೋಭಾವನೆ ರೂಢಿಸಿಕೊಳ್ಳಬೇಕು. ಶರಣ ಚಿಂತನೆಯಿಂದ ಯಾವತ್ತೂ ವಿಮುಖರಾಗಬಾರದು ಎಂದರು.

    ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ನೀಲಾಂಬಿಕ ಗೌಡರು ವಿಶೇಷ ಉಪನ್ಯಾಸ ನೀಡಿ, ವೈದಿಕ ಮತ್ತು ಅಜ್ಞಾನದಿಂದ ಜನರ ಬದುಕು ಬಡತನ ಮತ್ತು ಶೋಷಣೆಗೊಳಗಾಗಿದೆ. ಅಂಧಾನುಕರಣೆಯಿಂದ ಹೊರಬರುವಲ್ಲಿ ಶರಣ ತತ್ವ ವಿಚಾರಗಳು ಪ್ರಮುಖಪಾತ್ರ ನಿರ್ವಹಿಸುತ್ತವೆ ಎಂದರು.

    ಅಕ್ಕಮಹಾದೇವಿ ಮಹಿಳಾ ಮಂಡಳಿ ಉಪಾಧ್ಯಕ್ಷೆ ಸಂಧ್ಯಾ ಭತ್ತದ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್, ಸಂಡೂರಿನ ಕದಳಿ ಮಹಿಳಾ ವೇದಿಕೆ ಪದಾಧಿಕಾರಿ ಎಂ.ಎನ್.ಮಮತಾ, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಪದಾಧಿಕಾರಿಗಳಾದ ಕೆ.ಎಂ.ಸೌಮ್ಯಾ, ಬಿ.ಎಂ.ಪುಷ್ಪಾ, ವಾಲಿ ಶಕುಂತಲಾ, ಮುಕ್ಕುಂದಿ ಮಮತಾ, ತಾಂಡೂರು ಸುಜಾತ, ಡಾ.ಶಾರದಾ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts