More

    ಶರಣ ಸಂಸ್ಕೃತಿ ಉತ್ಸವಕ್ಕೆ ತೆರೆ

    ಅಥಣಿ: ಪಟ್ಟಣದ ಗಚ್ಚಿನಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಮಿಕೊಂಡಿದ್ದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭ ಭಾನುವಾರ ಸಂಜೆ ಜರುಗಿತು.

    ವಿದ್ಯಾಪೀಠ ಶಾಲಾ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವೈಚಾರಿಕ ಚಿಂತೆನಗಳು, ಆಧುನಿಕ ಬದುಕಿನಲ್ಲಿ ಅಧ್ಯಾತ್ಮದ ಮಹತ್ವ, ಧ್ಯಾನ, ಇಷ್ಟಲಿಂಗ ಪೂಜೆ ಸಂಬಂಧ ಜನರಿಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಅದರಂತೆ ಎಲ್ಲ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗಿದವು.

    ಮೈಸೂರಿನ ಪ್ರೊ. ಕೃಷ್ಣೇಗೌಡರು ತಮ್ಮ ಹಾಸ್ಯ ಮಾತುಗಳ ಮೂಲಕ ಶರಣ ಸಂಸ್ಕೃತಿ ಉತ್ಸವದ ಉದ್ದೇಶವನ್ನು ಪ್ರಚುರಪಡಿಸಿದರು. ಬಸವಣ್ಣನವರಂತೆ ಅಥಣಿ ಗಚ್ಚಿನಮಠದ ಮುರುೇಂದ್ರ ಶಿವಯೋಗಿಗಳು ತಮ್ಮ ಬದುಕನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಅವರ ಸಮಾಜಸೇವೆ ಸ್ಮರಣೀಯ. ಶರಣ ಸಂಸ್ಕೃತಿಯಂತಹ ಕಾರ್ಯಕ್ರಮಗಳು ಮನುಷ್ಯನ ಮನಸ್ಸನ್ನು ಪರಿವರ್ತನೆ ಮಾಡುತ್ತವೆ ಎಂದರು. ಶಿರಸಿ ಮಲ್ಲಿಕಾರ್ಜುನ ದೇವರು, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ತೆಲಸಂಗ ವೀರೇಶ್ವರ ದೇವರು, ಗಣ್ಯರಾದ ಚಿದಾನಂದ ಸವದಿ, ಸಂತೋಷ ಸಾವಡಕರ, ರಾಜು ಬಿಳ್ಳೂರ, ಅಶೋಕ ಹೊಸೂರ, ಸುರೇಶ ಬಳೊಳ್ಳಿ, ಡಾ. ರಮೆಶ ಗುಳ್ಳ, ಡಾ. ರವಿ ಚೌಗಲಾ, ಅಮರ ದುರ್ಗಣವರ, ಕೆ.ಎ.ವನಜೋಳ, ಲಕ್ಷ್ಮಣ ಬಣಜವಾಡ, ಸುರೇಶ ಚಿಕ್ಕಟ್ಟಿ ಮತ್ತಿತರರು ಇದ್ದರು.

    ಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

    ಅಥಣಿ ಗಚ್ಚಿನ ಮಠದಲ್ಲಿ ಜರುಗಿದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಕುಡ್ಲಕ್ವಿನ್ ತಂಡದವರು ವಿಶೇಷ ಸಾಹಸ ಮತ್ತು ದೇಶಭಕ್ತಿಗಳಿಗೆ ನೃತ್ಯರೂಪಕ ಪ್ರಸುತ್ತ ಪಡಿಸಿ ಗಮನಸೆಳೆದರು. ಚಿಕ್ಕಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿದವು.

    ಐತಿಹಾಸಿಕ ಅಥಣಿ ಗಚ್ಚಿನಮಠದ ಶರಣ ಸಂಸ್ಕೃತಿ ಉತ್ಸವ ಕೇವಲ ಜಾತ್ರೆಯಲ್ಲ. ಅದೊಂದು ವೈಚಾರಿಕ ಚಿಂತನೆಯ ವೇದಿಕೆ. ಈ ವೇದಿಕೆ ಯುವಪ್ರತಿಭೆಗಳು, ಸಾಧಕರಿಗೆ ಪ್ರೇರಣೆ ನೀಡುವ ಸ್ಥಳವಾಗಿದೆ.
    | ಗಚ್ಚಿನಮಠದ ಶಿವಬಸವ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts