More

    ಸುರೇಶ ಅಂಗಡಿ ಅವರು ಕರೊನಾನಿಂದ ಗುಣಮುಖರಾಗಲೆಂದು ವಿಶೇಷ ಪೂಜೆ

    ಬೆಳಗಾವಿ: ಜಿಲ್ಲೆಗೆ ಕರೊನಾ ವೈರಸ್‌ನ ಕಾಟ ತಪ್ಪುತ್ತಿಲ್ಲ. ಭಾನುವಾರ ಮತ್ತೆ 318 ಜನರಲ್ಲಿ ವೈರಸ್ ದೃಢವಾಗಿದ್ದು, ಸೋಂಕಿತರ ಸಂಖ್ಯೆ 16,382ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ 388 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೊಂಚ ಸಮಾಧಾನ ತಂದಿದೆ. ಕರೊನಾದಿಂದ ಗುಣಮುಖರಾದವರ ಒಟ್ಟಾರೆ ಸಂಖ್ಯೆ 13,073ಕ್ಕೆ ಏರಿಕೆಯಾಗಿದೆ. 3,072 ಸಕ್ರಿಯ ಪ್ರಕರಣಗಳಿವೆ.

    ಬೆಳಗಾವಿಯಲ್ಲಿ ಹೆಚ್ಚು: ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿ 166 ಜನರಿಗೆ ವೈರಸ್ ಅಂಟಿದೆ. ಉಳಿದಂತೆ ಅಥಣಿ-68, ಬೈಲಹೊಂಗಲ-39, ಹುಕ್ಕೇರಿ-20, ಚಿಕ್ಕೋಡಿ-8, ರಾಮದುರ್ಗ-5, ಗೋಕಾಕ, ಸವದತ್ತಿಯಲ್ಲಿ ತಲಾ-2, ಖಾನಾಪುರ-4 ಹಾಗೂ ಹೊರ ಜಿಲ್ಲೆಯ 4 ಜನರಿಗೆ ಕರೊನಾ ಸೋಂಕು ತಗುಲಿರುವುದು ದೃಢವಾಗಿದೆ.

    252 ಜನರ ವರದಿ ಬಾಕಿ: 252 ಶಂಕಿತರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬಾಕಿ ಇದೆ. ಕರೊನಾಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1,23,567 ಜನರ ಮೇಲೆ ನಿಗಾ ವಹಿಸಲಾಗಿದೆ. 27,182 ಜನರು 14 ದಿನ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 29,813 ಜನ 14 ದಿನ, 63,500 ಜನ 28 ದಿನಗಳ ಕ್ವಾರಂಟೈನ್ ಪೂರ್ಣ ಗೊಳಿಸಿದ್ದಾರೆ. 1,22,271 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದ್ದು, 1,04,613 ಮಾದರಿಗಳು ನೆಗೆಟಿವ್ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts