More

    ಪೆಗಾಸಸ್​ ಫೋನ್​ ಟ್ಯಾಪ್​ ಆರೋಪದ ತನಿಖೆ ನಡೆಸಲಿದೆ, ಸುಪ್ರೀಂ ಕೋರ್ಟ್​ ತಜ್ಞರ ಸಮಿತಿ

    ನವದೆಹಲಿ: ಪೆಗಾಸಸ್​ ಬೇಹುಗಾರಿಕೆ ಸಾಫ್ಟ್​ವೇರ್​ ಬಳಸಿ ಪತ್ರಕರ್ತರು ಮತ್ತು ವಿಪಕ್ಷ ನಾಯಕರ ಫೋನ್​ ನಂಬರ್​ಗಳನ್ನು ಟ್ಯಾಪ್​​ ಮಾಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು, ಸುಪ್ರೀಂ ಕೋರ್ಟ್​, ತಾಂತ್ರಿಕ ತಜ್ಞರ ಸಮಿತಿಯೊಂದನ್ನು ರಚಿಸುತ್ತಿದೆ. ಈ ಕುರಿತಾದ ಅಧಿಕೃತ ಆದೇಶವು ಮುಂದಿನ ವಾರ ಹೊರಬೀಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಹೇಳಿದ್ದಾರೆ.

    ಇಂದು ಬೆಳಿಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ಕೇಸ್​​ ಒಂದರ ವಿಚಾರಣೆ ವೇಳೆ ಪೆಗಾಸಸ್​ ವಿವಾದದ ಬಗ್ಗೆ ಸಿಬಿಐ ತನಿಖೆ ಕೋರಿರುವ ಅರ್ಜಿದಾರರನ್ನೂ ಪ್ರತಿನಿಧಿಸುತ್ತಿರುವ ವಕೀಲರಿಗೆ ಮುಖ್ಯ ನ್ಯಾಯಮೂರ್ತಿಗಳು ಈ ವಿಚಾರ ತಿಳಿಸಿದರು. ಸಮಿತಿಯನ್ನು ರಚಿಸಲಾಗುತ್ತಿದ್ದು, ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲು ಕೆಲವರು ವೈಯಕ್ತಿಕ ಕಾರಣಗಳಿಂದ ನಿರಾಕರಿಸಿದ್ದಾರೆ. ಆದ್ದರಿಂದ ಸಮಿತಿ ರಚನೆಯಲ್ಲಿ ವಿಳಂಬವಾಗುತ್ತಿದೆ ಎಂದರು.

    ಇದನ್ನೂ ಓದಿ: ರೈತರ ವಿರುದ್ಧವೇ ರೈತರು ಬೀದಿಗಳಿದು ಪ್ರತಿಭಟನೆ! ಎಲ್ಲೆಡೆ ಪೊಲೀಸ್​ ಬಂದೋಬಸ್ತ್​

    ಪೆಗಾಸಸ್​ ಕುರಿತ ಪ್ರಕರಣಗಳ ಕಳೆದ ಬಾರಿಯ ವಿಚಾರಣೆಯಲ್ಲಿ, ಕೇಂದ್ರ ಸರ್ಕಾರವು ವಿವರವಾದ ಹೇಳಿಕೆ ಸಲ್ಲಿಸಲು ನಿರಾಕರಿಸಿತ್ತು. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸರ್ಕಾರಿ ಸಂಸ್ಥೆಗಳು ಬಳಸಬಹುದಾದ ಸಾಫ್ಟ್​ವೇರ್​ಗಳ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಕೂಡದು. ಆದ್ದರಿಂದ ತಮ್ಮ ಫೋನುಗಳನ್ನು ಕದ್ದಾಲಿಸಲಾಗುತ್ತಿದೆ ಎನ್ನುತ್ತಿರುವ ಅರ್ಜಿದಾರರ ಆರೋಪಗಳನ್ನು ಸಮಿತಿಯೊಂದನ್ನು ರಚಿಸಿ ಪರಿಶೀಲಿಸಲು ಮಾತ್ರ ಸಿದ್ಧ ಎಂದು ಸರ್ಕಾರ ನಿಲುವು ತಾಳಿತ್ತು. ತದನಂತರ ಕೋರ್ಟ್​ ತನ್ನ ಆದೇಶವನ್ನು ಕಾಯ್ದಿರಿಸಿತ್ತು. (ಏಜೆನ್ಸೀಸ್)

    ಬಿಜೆಪಿ ನಾಯಕರ ಕಛೇರಿಯಲ್ಲಿ ಕಾರ್ಯಕರ್ತೆ ಮೇಲೆ ಲೈಂಗಿಕ ಶೋಷಣೆ ಆರೋಪ

    ಅಗ್ನಿ ಅನಾಹುತದಿಂದ ಎಚ್ಚೆತ್ತ ಪಾಲಿಕೆ… ಅಪಾರ್ಟ್​ಮೆಂಟ್​ ಬಾಲ್ಕನಿಗಳ ಮೇಲೆ ಬಿಬಿಎಂಪಿ ಕಣ್ಣು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts