More

    ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಹಲಕುರ್ಕಿ ಗ್ರಾಪಂ ಸದಸ್ಯರ ಬೆಂಬಲ

    ಬಾದಾಮಿ : ಕೈಗಾರಿಕೆ ಪ್ರದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಶುಕ್ರವಾರ ತಾಲೂಕಿನ ಹಲಕುರ್ಕಿಯಲ್ಲಿ ರೈತರು ನಡೆಸಿದ ಧರಣಿಗೆ ಗ್ರಾಮ ಪಂಚಾಯಿತಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

    ಹಲಕುರ್ಕಿ ಗ್ರಾಮದ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳದಂತೆ ಗ್ರಾಪಂನಿಂದ ಒಮ್ಮತದ ನಿರ್ಣಯ ಅಂಗೀಕರಿಸಿ ಕೆಐಎಡಿಬಿಗೆ ಕಳಿಸುತ್ತೇವೆ. ಹಲಕುರ್ಕಿ ಗ್ರಾಮದ ಪರಿಸರದಲ್ಲಿ ಕೈಗಾರಿಕೆ ಸ್ಥಾಪಿಸಿದರೆ ವಾಯು ಮಾಲಿನ್ಯ ಉಂಟಾಗಿ ಸುತ್ತಲಿನ ಹತ್ತಾರು ಕಿ.ಮೀ. ವ್ಯಾಪ್ತಿಯಲ್ಲಿನ ಜನಜೀವನಕ್ಕೆ ತೊಂದರೆ ಆಗುತ್ತದೆ. ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ಸರ್ಕಾರ ಮಾಡಬಾರದು. ಸರ್ಕಾರಿ ಜಮೀನು, ಗೋಮಾಳ, ಮುಫತ್ ಗೈರಾನ ಸ್ವಾಧೀನ ಪಡಿಸಿಕೊಂಡರೆ ಹಲಕುರ್ಕಿ ಮತ್ತು ಸುತ್ತಲಿನ ಅನೇಕ ಗ್ರಾಮಗಳ ಜಾನುವಾರುಗಳಿಗೆ ಮೇವಿನ ಕೊರತೆಯಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಹಲಕುರ್ಕಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೈಬಿಡಲು ಕೂಡಲೇ ಕೆಐಎಡಿಬಿಗೆ ಸೂಚಿಸಬೇಕೆಂದು ಗ್ರಾಪಂ ಎಲ್ಲ ಸದಸ್ಯರು ಪಕ್ಷಬೇಧ ಮರೆತು ಒತ್ತಾಯಿಸಿದರು.

    ಗ್ರಾಪಂ ಸದಸ್ಯರಾದ ಸಿದ್ದಪ್ಪ ಬಂಡಿವಡ್ಡರ, ಶ್ರೀಕಾಂತ ಕರಡಿ, ರವಿ ಬಂಡಿವಡ್ಡರ, ಪ್ರಶಾಂತ ಕಟಗೇರಿ, ರೇಣವ್ವ ನಾಯ್ಕರ, ರತ್ನವ್ವ ಹಿರೇತಳವಾರ, ಭಾರತಿ ಗಾಣಿಗೇರ, ನೀಲವ್ವ ತಿರಕಪ್ಪನವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts