More

    ಸೂಪರ್ 30 ಕಾಲೇಜು: ಉತ್ಕೃಷ್ಟ ರೀತಿ ಅಭಿವೃದ್ಧಿ, ತಾಂತ್ರಿಕ ಕಾಲೇಜುಗಳಿನ್ನು ಎಕ್ಸಲೆನ್ಸ್ ಸೆಂಟರ್

    ಬೆಂಗಳೂರು: ರಾಜ್ಯದ 14 ಸರ್ಕಾರಿ, 16 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳನ್ನು ಮುಂದಿನ 5 ವರ್ಷಗಳಲ್ಲಿ ಅತ್ಯುನ್ನತ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ರೀತಿ (ರೀಜನಲ್ ಎಕೋಸಿಸ್ಟಂ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್) ಯೋಜನೆಗೆ ಆಯ್ಕೆ ಮಾಡಲಾಗಿದೆ. ವಿಟಿಯು ಕುಲಪತಿ ಪೊ›. ಕರಿಸಿದ್ದಪ್ಪ ನೇತೃತ್ವದ ಉನ್ನತಮಟ್ಟದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಈ ಮಾಹಿತಿ ನೀಡಿದ್ದಾರೆ. ಜಿಲ್ಲೆಗೆ ತಲಾ ಒಂದರಂತೆ 30 ಕಾಲೇಜುಗಳನ್ನು ‘ಪ್ರಾದೇಶಿಕ ಉತ್ಕೃಷ್ಟ ತಾಂತ್ರಿಕ ಶಿಕ್ಷಣ ವ್ಯವಸ್ಥೆ (ರೀತಿ) ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇವುಗಳನ್ನು ಇನ್ಕು್ಯಬೇಷನ್, ಆಕ್ಸಲೇಟರ್ ಮತ್ತು ಸೂಪರ್-30 ಎನ್ನುವ ಮೂರು ವಿಭಾಗಗಳಡಿ ಪರಿಗಣಿಸಲಾಗಿದೆ.

    ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಮಾತ್ರ ಖಾಸಗಿ ಸಂಸ್ಥೆಗಳನ್ನು ಆರಿಸಿಕೊಳ್ಳಲಾಗಿದೆ. ಈ ಯೋಜನೆಯಿಂದ ಎಲ್ಲ ಜಿಲ್ಲೆಗಳಲ್ಲೂ ಗುಣಮಟ್ಟದ ಇಂಜಿನಿಯರಿಂಗ್ ಶಿಕ್ಷಣ ನೀಡಲು ಅನುಕೂಲ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ತಮ್ಮ ಜಿಲ್ಲೆಗಳಲ್ಲೇ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಗುರಿ. ಸರ್ಕಾರಿ ಕಾಲೇಜುಗಳಿಲ್ಲದ ಕಡೆ ಸೂಕ್ತ ಖಾಸಗಿ/ಅನುದಾನರಹಿತ ಕಾಲೇಜುಗಳನ್ನು ಆಯ್ಕೆ ಮಾಡಲು ಸರ್ಕಾರದ ನವೋದ್ಯಮ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಉಪಸಮಿತಿ ರಚಿಸಲಾಗಿತ್ತು. ಕಾಲೇಜು ಆಡಳಿತ ಮಂಡಳಿ, ಉದ್ಯಮರಂಗ, ವಿಟಿಯು ಸೇರಿಕೊಂಡು ‘ರೀತಿ’ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಮೂರು ಸಂಸ್ಥೆಗಳು ತಲಾ ಶೇ.33ರಷ್ಟು ವೆಚ್ಚ ಭರಿಸಲಿವೆ. ಇದು ಐತಿಹಾಸಿಕ ಕ್ರಮವಾಗಿದ್ದು, ಇದಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಸೂಕ್ತ ಅವಕಾಶ ಒದಗಿಸಿದೆ ಎಂದರು.

    ಬಹುಶಿಸ್ತೀಯ ಶಿಕ್ಷಣ: ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಈ ಕಾಲೇಜುಗಳಲ್ಲಿ ವಿದ್ಯಾರ್ಥಿಕೇಂದ್ರಿತ ಕೌಶಲ ಮತ್ತು ಸಂಶೋಧನಾ ಬಹುಶಿಸ್ತೀಯ ಶಿಕ್ಷಣ ಒದಗಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಿ, ಅವರಲ್ಲಿ ಉದ್ಯಮಶೀಲತೆಯನ್ನೂ ಬೆಳೆಸಲಾಗುವುದು. ಜತೆಗೆ, ಈ 30 ಕಾಲೇಜುಗಳಲ್ಲಿ ಸ್ವಯಂ ಮೌಲ್ಯಮಾಪನ ಮತ್ತು ಮೆಂಟರ್-ಆಡಿಟ್ ಮಾದರಿ ಮೂಲಕ ಉತ್ತರದಾಯಿತ್ವವನ್ನು ತರಲಾಗುವುದು ಎಂದು ಸಚಿವರು ಹೇಳಿದರು.

    ಸಮಿತಿ ಸದಸ್ಯರು: ಪೊ›. ಕರಿಸಿದ್ದಪ್ಪ ನೇತೃತ್ವದ ಸಮಿತಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಉದ್ಯಮಿ ನಾರಾಯಣನ್ ರಾಮಸ್ವಾಮಿ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಲಹೆಗಾರ ಕಾರ್ತಿಕ್ ಕಿಟ್ಟು ಮತ್ತು ವಿಟಿಯು ಕುಲಸಚಿವ ಆನಂದ್ ದೇಶಪಾಂಡೆ ಇದ್ದರು.

    ಖಾಸಗಿ ಕಾಲೇಜುಗಳು

    • ಅಂಗಡಿ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್, ಬೆಳಗಾವಿ
    • ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜು, ಗುಬ್ಬಿ
    • ಶ್ರೀಮಧ್ವ ವಾದಿರಾಜ ಇಂಜಿನಿಯರಿಂಗ್, ಮ್ಯಾನೇಜ್​ಮೆಂಟ್​ ಕಾಲೇಜು, ಉಡುಪಿ
    • ಜಿಎಸ್​ಎಸ್​ಎಸ್ ಮಹಿಳಾ ಇಂಜಿನಿಯರಿಂಗ್ ಟೆಕ್ನಾಲಜಿ ಸಂಸ್ಥೆ, ಮೈಸೂರು.
    • ಡಾ.ಟಿ ತಿಮ್ಮಯ್ಯ ತಾಂತ್ರಿಕ ಶಿಕ್ಷಣ ಕಾಲೇಜು, ಕೆಜಿಎಫ್
    • ಬಿಳುಗೂರು ಗುರುಬಸವ ಮಹಾಸ್ವಾಮೀಜಿ ಇನ್​ಸ್ಟಿಟ್ಯೂಟ್, ಮುಧೋಳ
    • ಪಿ.ಜಿ.ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿಜಯಪುರ
    • ಆದಿಚುಂಚನಗಿರಿ ತಾಂತ್ರಿಕ ಕಾಲೇಜು, ಚಿಕ್ಕಮಗಳೂರು
    • ಎಸ್​ಜೆಸಿ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಚಿಕ್ಕಬಳ್ಳಾಪುರ
    • ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಬಳ್ಳಾರಿ
    • ಪಿಇಎಸ್ ತಾಂತ್ರಿಕ, ಮ್ಯಾನೇಜ್​ವೆುಂಟ್ ಸಂಸ್ಥೆ, ಶಿವಮೊಗ್ಗ
    • ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜು, ಭಾಲ್ಕಿ
    • ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜು, ಗದಗ
    • ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ಪುತ್ತೂರು
    • ಜೈನ್ ಇಂಜಿನಿಯರಿಂಗ್ ಕಾಲೇಜು, ಹುಬ್ಬಳ್ಳಿ
    • ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜು, ಶೋರಾಪುರ (ಯಾದಗಿರಿ ಜಿಲ್ಲೆ)

    ಸರ್ಕಾರಿ ತಾಂತ್ರಿಕ ಕಾಲೇಜುಗಳ ಪಟ್ಟಿ: ಚಾಮರಾಜನಗರ, ಚಳ್ಳಕೆರೆ, ಹಾಸನ, ಹಾವೇರಿ, ಕುಶಾಲನಗರ, ತಲಕಾಡು, ಕೃಷ್ಣರಾಜಪೇಟೆ, ರಾಯಚೂರು, ರಾಮನಗರ, ಕಾರವಾರ, ಹೂವಿನ ಹಡಗಲಿಗಳಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು. ಬೆಂಗಳೂರಿನ ಎಸ್​ಕೆಎಸ್​ಜೆಟಿಐ, ದಾವಣಗೆರೆಯಲ್ಲಿರುವ ಯೂನಿ ವರ್ಸಿಟಿ ಬಿಡಿಟಿ ಕಾಲೇಜು ಮತ್ತು ಕಲಬುರಗಿಯಲ್ಲಿರುವ ವಿಟಿಯು ಪಿಜಿ ಸೆಂಟರ್ ಆಯ್ಕೆಯಾಗಿವೆ.

    ನಿಮ್ಮೂರಿಗಿನ್ನು ಇವರೇ ಇನ್​ಸ್ಪೆಕ್ಟರ್; ಇಲ್ಲಿದೆ ಪೂರ್ತಿ ಮಾಹಿತಿ: 12 ಡಿವೈಎಸ್‌ಪಿ, 92 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts