More

    ಟ್ರೋಲ್ ಆದ ಅಳಿಯ ರಾಹುಲ್, ಮಾವ ಸುನೀಲ್ ಶೆಟ್ಟಿಗೆ ನೋವು..!

    ನವದೆಹಲಿ: ಭಾರತವು 2023ರ ವಿಶ್ವಕಪ್  ಕಪ್​​ನ್ನು ಆಸ್ಟ್ರೇಲಿಯಾ ವಿರುದ್ಧ ಕಳೆದುಕೊಂಡು ಸ್ವಲ್ಪ ಸಮಯವಾಗಿದೆ. ಆದರೆ ಇನ್ನೂ ಕೂಡಾ ಈ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಲೆ ಇರುತ್ತದೆ. ಭಾರತ ತಂಡದ ಆಟಗಾರರಲ್ಲಿ ಒಬ್ಬರಾಗಿದ್ದ ಕೆಎಲ್ ರಾಹುಲ್ ಫೈನಲ್ ಪಂದ್ಯದ ದಿನದಂದು ಉತ್ತಮವಾಗಿ ಫೀಲ್ಡಿಂಗ್ ಮಾಡದ ಕಾರಣಕ್ಕಾಗಿ ಟ್ರೋಲ್​ಗೆ ಒಳಗಾರದು. ಅಳಿಯಾ ಕೆಎಲ್​​ ರಾಹುಲ್​​ ಟ್ರೋಲ್ ಆಗುತ್ತಿರುವ ಬಗ್ಗೆ ನಟ ಸುನೀಲ್ ಶೆಟ್ಟಿ ಮಾತನಾಡಿದ್ದಾರೆ. ಅಳಿಯಾ ಕೆಎಲ್​​ ರಾಹುಲ್​​ ಕುರಿತಾದ ಟ್ರೋಲ್​ ಎಷ್ಟು ನೋವುಂಟು ಮಾಡಿದೆ ಎಂದು ಹಂಚಿಕೊಂಡಿದ್ದಾರೆ.

    ವಿಶ್ವಕಪ್‌ನಲ್ಲಿ ಭಾರತ ಸೋತ ನಂತರ ಅಳಿಯ ಕೆಎಲ್ ರಾಹುಲ್ ಸ್ವೀಕರಿಸಿದ ಎಲ್ಲಾ ಟ್ರೋಲಿಂಗ್ ಮತ್ತು ಅದು ಅವನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸುನೀಲ್ ಶೆಟ್ಟಿ ಮಾತನಾಡಿದ್ದಾರೆ.

    ಖಾಸಗಿವಾಹಿನಿ ಜತೆ ಮಾತನಾಡಿದ ಸುನೀಲ್ ಶೆಟ್ಟಿ ಅವರು, ‘ಅಪ್ಪ, ನನ್ನ ಬ್ಯಾಟ್ ಮಾತನಾಡುತ್ತದೆ’ ಎಂದು ರಾಹುಲ್​​ ಹೇಳುವ ಮೂಲಕ ತಮಗೆ ಬಂದ ಎಲ್ಲಾ ನಕಾರಾತ್ಮಕತೆಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸುವಂತೆ ಹೇಳಿದ್ದರು. ಇದು ಜನರ ನಂಬಿಕೆ, ನಾಯಕನ ನಂಬಿಕೆ ಎಲ್ಲವನ್ನೂ ಹೇಳುತ್ತದೆ. ರಾಹುಲ್​ ಬಗ್ಗೆ ಬಂದಿರುವ ಕೆಲವು ಕಾಮೆಂಟ್ಸ್​ಗಳು ರಾಹುಲ್ ಅಥವಾ ಅಥಿಯಾ ಅವರನ್ನು ನೋಯಿಸುವುದಕ್ಕಿಂತ 100 ಪಟ್ಟು ಹೆಚ್ಚು ನನಗೆ ನೋವುಂಟುಮಾಡಿತ್ತು ಎಂದಿದ್ದಾರೆ.

     “ನನಗೆ ಮಾವನ ಪಾತ್ರ ಗೊತ್ತಿಲ್ಲ. ನಾನು ಅವರ ಅಭಿಮಾನಿಯಾಗಿದ್ದೆ. ಇಂದು ರಾಹುಲ್​ ಮತ್ತು ನನ್ನ ಮಧ್ಯೆ ಒಂದು ಅಮೂಲ್ಯವಾದ ಸಂಬಂಧವಿದೆ. ಆದರೆ ನಾನು ಬಹಳಷ್ಟು ಯುವ ಪ್ರತಿಭೆಗಳಂತೆ ರಾಹುಲ್‌ನನ್ನು ಪ್ರೀತಿಸುತ್ತಿದ್ದೆ. ನನಗೆ ಸಮಯ ಸಿಕ್ಕಾಗೆಲ್ಲ ಅವರ ಆಟ ವೀಕ್ಷಿಸಲು ಹೋಗುತ್ತಿದ್ದೆ. ರಾಹುಲ್ ಆಟ ನೋಡಿದಾಗ ನನಗೆ ತುಂಬಾ ಇಷ್ಟವಾಗುತ್ತಿತ್ತು. ಯಾವುದೋ ಸಣ್ಣ ಊರಿನಿಂದ ಬಂದು ಮಕ್ಕಳು ಏನಾದರೂ ಸಾಧಿಸಿದರೆ ನಾನು ಹೆಮ್ಮೆಪಡುತ್ತೇನೆ, ಹಾಗಾಗಿ ನಾನು ರಾಹುಲ್​​ ಅಭಿಮಾನಿಯಾಗಿದ್ದೆ. ಇಂದು ನಾನು ಅವನ ತಂದೆಯ ಸ್ಥಾನದಲ್ಲಿ ಇದ್ದೇನೆ. ಅವನು ತನ್ನನ್ನು ತಾನು ತಿಳಿದಿರುವುದಕ್ಕಿಂತಹೆಚ್ಚಾಗಿ ನಾನು ಅವನನ್ನು ತಿಳಿದಿದ್ದೇನೆ, ಅವನ ಪ್ರತಿಯೊಂದು ನಡೆಯಲ್ಲೂ ನಾನು ಜತೆ ಇದ್ದೇನೆ ಎಂದಿದ್ದಾರೆ.

    ‘ರಾಹುಲ್​ ಆಡುತ್ತಿದ್ದಾಗ ನಾನು ಆತಂಕಗೊಂಡಿದ್ದೇನು. ಏಕೆಂದರೆ ಅದು ನನ್ನ ಮಗು ಆಡುತ್ತಿದೆ. ನಾನು ಅವನಿಗೆ ಶುಭ ಹಾರೈಸುತ್ತಿದ್ದೆ, ಆದರೆ ಅವನ ಕಣ್ಣು ಮತ್ತು ಅವನನ್ನು ನೋಡಿದೆ. ಎಲ್ಲರ ಎದುರು ನಿಮ್ಮ ಮಗು ಸ್ವಲ್ಪ ಕಡಿಮೆ ಆಯ್ತು ಅಂದಾಗ ಅದು ಮಗುವನ್ನು ಅಲುಗಾಡಿಸುವುದಕ್ಕಿಂತ ಹೆಚ್ಚಾಗಿ ಅದು ನಿಮ್ಮನ್ನು ಅಲುಗಾಡಿಸುತ್ತದೆ ಎಂದಿದ್ದಾರೆ.

    ಕೇಳಿದ ವರದಕ್ಷಿಣೆ ಕೊಡಲೇಬೇಕು.. ಇಲ್ಲವಾದ್ರೆ ಮದುವೆ ಕ್ಯಾನ್ಸಲ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts