More

    ಪ್ರತಿಷ್ಠಿತ ಕರ್ನಾಟಕ ಸಂಘದ ಪ್ರಶಸ್ತಿ ಪ್ರಕಟ

    ಶಿವಮೊಗ್ಗ: ನಗರದ ಕರ್ನಾಟಕ ಸಂಘದಿಂದ 2021ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಪ್ರಕಟಿಸಲಾಗಿದೆ. ಪಿ.ಲಂಕೇಶ್ ಹೆಸರಿನಲ್ಲಿ ಮುಸ್ಲಿಂ ಲೇಖಕರಿಗೆ ನೀಡಲಾಗುವ ಪ್ರಶಸ್ತಿಗೆ ಸಾಗರದ ಸರ್ಫ್ರಾಜ್ ಚಂದ್ರಗುತ್ತಿ ಅವರ ಭಾರತೀಯ ಧರ್ಮ ಹಾಗೂ ಎಚ್.ಡಿ.ಚಂದ್ರಪ್ಪ ಗೌಡ ಹೆಸರಿನಲ್ಲಿ ವೈದ್ಯ ಸಾಹಿತ್ಯಕ್ಕೆ ನೀಡಲಾಗುವ ಪ್ರಶಸ್ತಿಗೆ ಭದ್ರಾವತಿಯ ಕೃಷ್ಣ ಎಸ್.ಭಟ್ ಅವರ ಮಧುಮೇಹದೊಂದಿಗೆ ಮಧುರ ಬಾಂಧವ್ಯ ಕೃತಿ ಆಯ್ಕೆಯಾಗಿದೆ.
    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್, ನಾಡಿನ ಹಿರಿಯ ಸಾಹಿತಿಗಳ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯು ತಲಾ 10 ಸಾವಿರ ರೂ. ನಗದು ಪುರಸ್ಕಾರ ಮತ್ತು ಸ್ಮರಣಿಕೆಯನ್ನು ಹೊಂದಿರುತ್ತದೆ ಎಂದು ತಿಳಿಸಿದರು.
    ಪ್ರತಿ ವರ್ಷ ನವೆಂಬರ್‌ನಲ್ಲಿ ಕರ್ನಾಟಕ ಸಂಘದ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ, ಪುಸ್ತಕ ವಿಜೇತರೊಂದಿಗೆ ಸಂವಾದ ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿಯಲಿದೆ ಎಂದರು.
    2021ರಲ್ಲಿ ಪ್ರಕಟವಾದ ಒಟ್ಟು 325 ಪುಸ್ತಕಗಳು ಸ್ಪರ್ಧೆಯಲ್ಲಿದ್ದವು. ಅದರಲ್ಲಿ ಕರ್ನಾಟಕ ಸಂಘದ ಗೌರವ ಸಾಹಿತ್ಯ ಪಡೆದ ಸಾಹಿತಿಗಳ ಹೆಸರಿನಲ್ಲಿ ಪ್ರಶಸ್ತಿ ನೀಡುವುದಕ್ಕಾಗಿ 12 ವಿವಿಧ ಪ್ರಕಾರಗಳನ್ನು ಆಯ್ಕೆ ಮಾಡಲಾಗಿದೆ. ಗುಣಮಟ್ಟದ ಸಾಹಿತ್ಯಕ್ಕೆ ಮಾತ್ರ ಕರ್ನಾಟಕ ಸಂಘ ಒತ್ತು ನೀಡುತ್ತದೆ. ಒಂದು ವೇಳೆ ಪ್ರಶಸ್ತಿಗೆ ಸೂಕ್ತವಾದ ಕೃತಿ ಆಯ್ಕೆಯಾಗದೇ ಇದ್ದರೆ ಆ ಪ್ರಕಾರಕ್ಕೆ ಪ್ರಶಸ್ತಿಯನ್ನೇ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
    ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ, ಖಜಾಂಚಿ ಮೋಹನ ಶಾಸ್ತ್ರಿ, ಉಪಾಧ್ಯಕ್ಷ ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿನಯ್, ಚಕ್ರಪಾಣಿ, ನಾಗಮಣಿ ಸುದ್ದಿಗೋಷ್ಠಿಯಲ್ಲಿದ್ದರು.

    ಪ್ರಶಸ್ತಿ, ವಿಜೇತರು, ಕೃತಿ, ಕಾದಂಬರಿಯ ವಿವರ
    ಕುವೆಂಪು ಪ್ರಶಸ್ತಿ-ಲೋಕೇಶ, ಅಗನಸಕಟ್ಟೆ, ಚಿತ್ರದುರ್ಗ-ವೈಷ್ಣವ ಜನತೋ ಕೃತಿ
    ಎಂ. ಕೆ. ಇಂದಿರಾ – ಸ್ನೇಹಲತಾ ದಿವಾಕರ್ ಕುಂಬ್ಳೆ, ಕಾಸರಗೋಡು-ಆಮೆ ಕೃತಿ
    ಎಸ್.ವಿ.ಪರಮೇಶ್ವರ ಭಟ್ಟ-ಡಾ.ಎ.ಮೋಹನ ಕುಂಟಾರ್, ಹಂಪಿ-ಪ್ರೇಮ ಪತ್ರ ಅನುವಾದಿತ ಸಾಹಿತ್ಯ
    ಡಾ. ಜಿ. ಎಸ್. ಶಿವರುದ್ರಪ್ಪ-ಡಾ.ಶೋಭಾ ನಾಯಕ, ಬೆಳಗಾವಿ-ಶಯ್ಯಗೃಹದ ಸುದ್ದಿಗಳು ಕವನ ಸಂಕಲನ
    ಡಾ. ಹಾ.ಮಾ. ನಾಯಕ ಪ್ರಶಸ್ತಿ- ದೀಪಾ ಪಡ್ಕೆ, ಬೆಂಗಳೂರು-ಓದಿನ ಮನೆ ಅಂಕಣ ಬರಹ
    ಡಾ. ಯು. ಆರ್. ಅನಂತಮೂರ್ತಿ-ವಸುಮತಿ ಉಡುಪ, ಮೈಸೂರು-ಬೊಗಸೆ ತುಂಬಾ ನಕ್ಷತ್ರಗಳು-ಸಣ್ಣ ಕಥಾ ಸಂಕಲನ
    ಡಾ.ಕೆ.ವಿ.ಸುಬ್ಬಣ್ಣ-ಮಹಾಂತೇಶ ನವಲಕಲ್-ಪಂಚಾವರಂ-ನಾಟಕ
    ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಶಸ್ತಿ-ಎಸ್.ಪಿ.ವಿಜಯಲಕ್ಷ್ಮೀ, ಬೆಂಗಳೂರು-ತಿರೆಯ ತೀರಗಳಲ್ಲಿ ನಾ ಕಂಡಂತೆ ಪ್ರವಾಸ ಕಥನ
    ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿ-ಗುರುರಾಜ್ ಎಸ್.ದಾವಣಗೆರೆ, ಬೆಂಗಳೂರು-ಡೇಟಾ ದೇವರು ಬಂದಾಯ್ತು ವಿಜ್ಞಾನ ಕೃತಿ
    ನಾ. ಡಿಸೋಜ ಪ್ರಶಸ್ತಿ-ಶಾಲಿನಿ ಮೂರ್ತಿ, ಬೆಂಗಳೂರು-ಕಥೆಗಳ ತೋರಣ-ಭಾಗ-2 ಮಕ್ಕಳ ಸಾಹಿತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts