More

    ಬೇಸಿಗೆ ಶಿಬಿರ ಜ್ಞಾನ ಸಂಪಾದನೆಗೆ ಪೂರಕ

    ವಿಜಯಪುರ : ಶಿಕ್ಷಕರು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆ ಗುರುತಿಸಿ ಅವರ ಮೇಲೆ ವಿಶೇಷ ಗಮನ ಹರಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

    ಮಂಗಳವಾರ ನಗರದ ಕನಕದಾಸ ಬಡಾವಣೆಯ ಶ್ರೀ ಸಿದ್ಧೇಶ್ವರ ಕೋಚಿಂಗ್​ನಲ್ಲಿ ಬೇಸಿಗೆ ತರಬೇತಿ ವರ್ಗ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳಿಗೆ ಜ್ಞಾನ ಸಂಪಾದನೆಗೆ ಸಹಕಾರಿಯಾಗಲಿದ್ದು, ಅದರ ಪ್ರಯೋಜನ ಪಡೆದು ಭವಿಷ್ಯ ರೂಪಿಸಿಕೊಳ್ಳುವತ್ತ ಮಕ್ಕಳು ಗಮನಹರಿಸಬೇಕು ಎಂದು ಹೇಳಿದರು.

    ಶಿಬಿರ ಉದ್ಘಾಟಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಿಸುವದು ಅತ್ಯವಶ್ಯ, ಶಾಲೆಗಳ ವರ್ಗದ ಕೋಣೆಯಲ್ಲಿ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ ಎಂದರು.

    ಕೋಚಿಂಗ್​ ಸಂಸ್ಥೆ ಅಧ್ಯಕ್ಷ ಸುರೇಶ ಜತ್ತಿ ಮಾತನಾಡಿ, ಸಂಸ್ಥೆ ಆರಂಭವಾದ ಒಂದೇ ವರ್ಷದಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳ ವಿಶ್ವಾಸಕ್ಕೆ ಪಾತ್ರವಾಗಿತ್ತು, ಅತ್ಯುತ್ತಮ ಫಲಿತಾಂಶ ಹೊರಹೊಮ್ಮಿದೆ ಎಂದರು.

    ಸಾಹಿತಿ ಸುಖದೇವಿ ಅಲಬಾಳಮಠ ಮತ್ತು ಉಪನ್ಯಾಸಕ ರಾಜಶೇಖರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಅಲಿಸಾಬ ಕಡಕೆ, ಅಣ್ಣುಗೌಡ ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts