More

    ಮೈ-ಬೆಂ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಪಾಲಿಟಿಕ್ಸ್ ವಿಚಾರ: ಜ್ಯೋತಿಷಿ ಕತೆ ಹೇಳಿ ಸುಮಲತಾ ತಿರುಗೇಟು

    ಮಂಡ್ಯ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮೈಸೂರು-ಬೆಂಗಳೂರು ರಸ್ತೆ ನಿರ್ಮಾಣ ವಿಚಾರದಲ್ಲಿ ಕ್ರೆಡಿಟ್​ ಪಾಲಿಟಿಕ್ಸ್​ ನಡೆಯುತ್ತಿದೆ. ರಸ್ತೆಯನ್ನು ನಾವು ಮಾಡಿಸಿದ್ದು ಅಂತ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್ ಹೇಳಿಕೊಳ್ಳುತ್ತಿವೆ. ಅಲ್ಲದೆ, ಈ ವಿಚಾರದಲ್ಲಿ ರಾಜಕೀಯ ನಾಯಕರ ವಾಗ್ವಾದದ ಜೊತೆಗೆ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ.

    ಇದೀಗ ಈ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಷ್​ ಪ್ರತಿಕ್ರಿಯೆ ನೀಡಿದ್ದು, ರಸ್ತೆ ನಿರ್ಮಾಣ ವಿಚಾರದಲ್ಲಿ ಕ್ರೆಡಿಟ್ ಪಡೆದುಕೊಳ್ಳಲು ಮುಂದಾದ ಕಾಂಗ್ರೆಸ್, ಜೆಡಿಎಸ್​ಗೆ ಜ್ಯೋತಿಷಿ ಕತೆ ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.

    ಇದನ್ನೂ ಓದಿ: 2ನೇ ಬಾರಿ ಚಿಕ್ಕ ಮಧುರೆ ಶನಿಮಹಾತ್ಮನ ಸನ್ನಿಧಿಗೆ ಮಾಂಸದ ಹಾರ ತಂದು ಸಿಕ್ಕಿಬಿದ್ದ ಕಿಡಿಗೇಡಿಗಳು!

    ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಜ್ಯೋತಿಷಿ ಒಬ್ಬರಿಗೆ ನಿಮಗೆ ಮಗು ಆಗುತ್ತೆ ಅಂತ ಕನಸು ಬಿತ್ತಂತೆ. ಅದೇ ರೀತಿ ತಂದೆ-ತಾಯಿಗೆ ಜ್ಯೋತಿಷಿ ಹೇಳಿದ ರೀತಿ ಮಗು ಆಯಿತಂತೆ. ಈಗ ಕ್ರೆಡಿಟ್ ಜ್ಯೋತಿಷಿಗೆ ಹೋಗಬೇಕಾ? ಅಥವಾ ಆ ತಂದೆ-ತಾಯಿಗೆ ಹೋಗಬೇಕಾ? ಎಂದು ವ್ಯಂಗ್ಯವಾಗಿ ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ಸುಮಲತಾ ಮಾತಿನ ಚಾಟಿ ಬೀಸಿದ್ದಾರೆ.

    ಮುಂದುವರಿದು ಮಾತನಾಡಿದ ಸುಮಲತಾ, ಈ ರೀತಿ ಕ್ರೆಡಿಟ್ ತೆಗೆದುಕೊಳ್ಳಲು ತುಂಬಾ ಜನ ಇರ್ತಾರೆ. ಈ ವಿಚಾರದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಜನರಿಗೆ ಚೆನ್ನಾಗಿ ಗೊತ್ತಿದೆ ಯಾರಿಗೆ ಕ್ರೆಡಿಟ್‌ ಕೊಡಬೇಕು ಅಂತ, ಸಾಕಷ್ಟು ಯೋಜನೆಗಳು ನಮಗೆ ಬಂದಿವೆ. ಏರ್ಪೋರ್ಟ್ ಉದ್ಘಾಟನೆ ಮಾಡುವುದಕ್ಕೆ 20 ವರ್ಷ ಕಳೆಯಿತು. ಇಂಥಾ ರಸ್ತೆಯನ್ನು ಕೇವಲ ನಾಲ್ಕು ವರ್ಷದಲ್ಲಿ ಮಾಡಲಾಗಿದೆ. ಈ ಕ್ರೆಡಿಟ್ ಯಾರಿಗೆ ತಲುಪಬೇಕು ಅವರಿಗೆ ತಲುಪುತ್ತದೆ. ಬೇರೆಯವರ ತರ ನಾನು ಕ್ರೆಡಿಟ್‌ಗೆ ಮಹತ್ವ ಕೊಡಲ್ಲ. ಜನರಿಗೆ ಯಾವ ರೀತಿ ಅನುಕೂಲ ಆಗುತ್ತೆ ಅನ್ನುವ ದೃಷ್ಟಿಯಿಂದ ಮಾತ್ರ ನೋಡಬೇಕು ಎಂದರು.

    ಇದನ್ನೂ ಓದಿ: ತಂದೆ CBI ಅಧಿಕಾರಿಯಾದ್ರೂ ಬಸ್​ ಚಾಲಕಿಯಾಗಿ ಪಾರ್ಟ್​ ಟೈಂ ಕೆಲ್ಸ! ಈಕೆ ಬಗ್ಗೆ ತಿಳಿದ್ರೆ ಶಹಬ್ಬಾಸ್​ ಅಂತೀರಾ….

    ಸುಮಲತಾ ಬಿಜೆಪಿ ಬೆಂಬಲ ಬಳಿಕ ಮಂಡ್ಯ ‌ರಾಜಕೀಯ ಚಿತ್ರಣ ಬದಲಾಗತ್ತಾ? ಎಂಬ ಪ್ರಶ್ನೆಗೆ ಉತ್ತರ ನೀಡಿದ ಸುಮಲತಾ, ಮುಂದೆ ಖಂಡಿತ ಮಂಡ್ಯದ ರಾಜಕೀಯ ಚಿತ್ರಣ ಬದಲಾಗುತ್ತದೆ. ಬದಲಾವಣೆಯ ಗಾಳಿ ನಿಮಗೆ ಮೇಲ್ನೋಟಕ್ಕೆ ಕಾಣದೆ ಇರಬಹುದು. ಆದರೆ ಒಳಗೊಳಗೆ ಸಾಕಷ್ಟು ಬದಲಾವಣೆ ಈಗಾಗಲೇ ಆಗಿದೆ. ಮಂಡ್ಯದಲ್ಲಿ ಬದಲಾವಣೆಗೆ ಜನರು ಸಹ ಕಾಯುತ್ತಿದ್ದಾರೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ದುಬೈನಲ್ಲಿ ನರೇಶ್​-ಪವಿತ್ರಾ ಲೋಕೇಶ್​ ಮೋಜು ಮಸ್ತಿ: ಹನಿಮೂನ್ ಮುಗಿಸಿ ಬಂದ್ರಾ ಸ್ಟಾರ್​ ಜೋಡಿ​?

    ನಿಮ್ಮ ಮದುವೆ ಬಗ್ಗೆ ಹೇಳಿ… ಸಿನಿಮಾ ವೇದಿಕೆಯಲ್ಲಿ ನಟ ನರೇಶ್​ ಕೊಟ್ಟ ಉತ್ತರ ಹೀಗಿತ್ತು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts