More

    ದುಬೈನಲ್ಲಿ ನರೇಶ್​-ಪವಿತ್ರಾ ಲೋಕೇಶ್​ ಮೋಜು ಮಸ್ತಿ: ಹನಿಮೂನ್ ಮುಗಿಸಿ ಬಂದ್ರಾ ಸ್ಟಾರ್​ ಜೋಡಿ​?

    ಹೈದರಾಬಾದ್​: ಮದುವೆ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಅವರು ದುಬೈ ಭೇಟಿ ನೀಡಿ ಬಂದಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ.

    ನಿನ್ನೆಯಷ್ಟೇ ನರೇಶ್​ ಅವರು ತಮ್ಮ ಟ್ವಿಟರ್​ನಲ್ಲಿ ಮದುವೆಯ ವಿಡಿಯೋವನ್ನು ಬಿಡುಗಡೆ ಮಾಡಿದರು. ಪವಿತ್ರಾ ಲೋಕೇಶ್​ ಮತ್ತು ನರೇಶ್​ ಕೆಲವೇ ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ, ಸಪ್ತಪದಿ ತುಳಿದು ಮದುವೆ ಆಗಿರುವ ದೃಶ್ಯ ವಿಡಿಯೋದಲ್ಲಿತ್ತು. ಈ ವಿಡಿಯೋ ವೈರಲ್​ ಆಗಿ ಸಾಕಷ್ಟು ಚರ್ಚೆ ಸಹ ಹುಟ್ಟು ಹಾಕಿದೆ. ಇಬ್ಬರು ನಿಜವಾಗಿಯೂ ಮದುವೆ ಆಗಿದ್ದಾರಾ ಅಥವಾ ಇದೊಂದು ಸಿನಿಮಾ ಗಿಮಿಕ್​ ಇರಬಹುದಾದ ಎಂಬ ಮಾತುಗಳು ಕೇಳಿಬರುತ್ತಿವೆ.

    ಇದನ್ನೂ ಓದಿ: ಮುಟ್ಟಿನ ರಕ್ತ ಸಂಗ್ರಹಿಸಿ 50 ಸಾವಿರ ರೂ.ಗೆ ಮಾರಾಟ! ಗಂಡನ ಮನೆಯ ಕರಾಳತೆ ಬಿಚ್ಚಿಟ್ಟ ವಿವಾಹಿತೆ

    ಇದರ ನಡುವೆ ನಿನ್ನೆ ನರೇಶ್​ ಅವರು ಇಂತಿಂತಿ ರಾಮಾಯಣಂ ಸಿನಿಮಾ ಪ್ರಮೋಷನಲ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮದುವೆ ಬಗ್ಗೆ ಅವರನ್ನು ಕೇಳಲಾಯಿತು. ಆದರೆ, ಅದರ ಬಗ್ಗೆ ಮಾತನಾಡಲು ನರೇಶ್​ ಇಷ್ಟಪಡಲಿಲ್ಲ. ಬದಲಾಗಿ ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದರು. ನನ್ನ ವೈಯಕ್ತಿಕ ಜೀವನದ ಸಂಗತಿಗಳನ್ನು ಸಿನಿಮಾ ವೇದಿಕೆ ಮೇಲೆ ಮಾತನಾಡಲು ಬಯಸುವುದಿಲ್ಲ. ಶೀಘ್ರದಲ್ಲೇ ಪತ್ರಿಕಾಗೋಷ್ಠಿಯಲ್ಲಿ ನಾನು ಖಂಡಿತವಾಗಿಯೂ ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತೇನೆ. ನಾನು ಯಾವಾಗಲೂ ಮಾಧ್ಯಮ ಸ್ನೇಹಿ ಕಲಾವಿದ. ಪ್ರತಿಯೊಬ್ಬರಿಗೂ ರೀಲ್ ಲೈಫ್ ಮತ್ತು ರಿಯಲ್ ಲೈಫ್ ಇರುತ್ತದೆ ಎಂದು ನಾನು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ಈ ಸಿನಿಮಾ ಈವೆಂಟ್​ ಅನ್ನು ಬೇರೆ ವಿಷಯಗಳಿಗೆ ತಿರುಗಿಸಲು ನಾನು ಬಯಸುವುದಿಲ್ಲ ಎಂದು ನರೇಶ್ ತಿಳಿಸಿದರು.

    ಇದೀಗ ನರೇಶ್​ ಮತ್ತು ಪವಿತ್ರಾ ಅವರು ದುಬೈನಲ್ಲಿ ಸುತ್ತಾಡಿ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಬ್ಬರು ಹನಿಮೂನ್​ ಮುಗಿಸಿ ಬಂದಿದ್ದಾರೆ ಎಂದು ಚರ್ಚೆಯಾಗುತ್ತಿದೆ. ದುಬೈನ ವಿವಿಧ ಪ್ರದೇಶಗಳಲ್ಲಿ ಇಬ್ಬರು ಕೈ ಕೂ ಹಿಡಿದು ಓಡಾಡಿರುವ ದೃಶ್ಯ ವಿಡಿಯೋಗಳಲ್ಲಿದೆ. ಮರುಭೂಮಿಯಲ್ಲೂ ಇಬ್ಬರು ಓಡಾಡಿದ್ದಾರೆ.

    ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ ಮೂಲಕ ನರೇಶ್​ ಮತ್ತು ಪವಿತ್ರಾ ಲೋಕೇಶ್​ ದಂಪತಿಯ ಕಾಲೆಳೆಯುತ್ತಿದ್ದಾರೆ. ಇಬ್ಬರಿಗೂ ವಯಸ್ಸಾಗಿದೆ. ಮೊಮ್ಮಕ್ಕಳನ್ನು ಆಡಿಸುವ ಕಾಲದಲ್ಲಿ ಇದೆಲ್ಲ ಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ. ಮರುಭೂಮಿಯಲ್ಲಿ ಓಡಾಡುತ್ತಿರುವ ವಿಡಿಯೋಗೆ ಈ ವಯಸ್ಸಲ್ಲಿ ಈ ತೊಂದರೆ ಬೇಕಾಗಿರಲಿಲ್ಲ ಎಂದಿದ್ದಾರೆ. ಇನ್ನು ಕೆಲವರು ಅದು ಅವರ ವೈಯಕ್ತಿಕ ಜೀವನ ಎಂದು ಬೆಂಬಲ ಸೂಚಿಸಿದ್ದಾರೆ.

    ಇದನ್ನೂ ಓದಿ: ಚುಡಾಯಿಸಿದ್ದನ್ನು ಪ್ರಶ್ನಿಸಿದ ವಿಧವೆಯನ್ನು ಕಂಬಕ್ಕೆ ಕಟ್ಟಿದ ದುಷ್ಕರ್ಮಿಗಳು​: ಸಹಾಯಕ್ಕೆ ಬಾರದ ಸ್ಥಳೀಯರು

    ಅಂದಹಾಗೆ ನರೇಶ್​ ಅವರು ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ಇನ್ನೂ ಡಿವೋರ್ಸ್​ ನೀಡಬೇಕಿದೆ. ಇಬ್ಬರ ಡಿವೋರ್ಸ್​ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ. ಪವಿತ್ರಾ ಲೋಕೇಶ್​ ಅವರನ್ನು ಮದುವೆ ಆಗಲು ನನಗೆ ಡಿವೋರ್ಸ್​ ನೀಡುತ್ತಿದ್ದಾರೆ ಎಂದು ರಮ್ಯಾ ಆರೋಪ ಮಾಡಿದ್ದಾರೆ. ನರೇಶ್ ಕೂಡ ರಮ್ಯಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ರಮ್ಯಾ ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅದಕ್ಕಾಗಿಯೇ ಅವರು ವಿಚ್ಛೇದನವನ್ನು ಬಯಸುತ್ತಿರುವುದಾಗಿ ತಿಳಿಸಿದ್ದರು. ಮತ್ತೊಂದೆಡೆ, ಪವಿತ್ರಾ ಜೊತೆಗಿನ ಸಂಬಂಧವನ್ನು ಈಗಾಗಲೇ ಅಂತಿಮಗೊಳಿಸಿರುವ ನರೇಶ್, ನಿನ್ನೆ ಮದುವೆಯ ವಿಡಿಯೋ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಆದರೆ, ಈ ಮದುವೆ ನಿಜವಾಗಿ ನಡೆದಿದೆಯೋ? ಅಥವಾ ಸಿನಿಮಾದ ದೃಶ್ಯವೋ ತಿಳಿಯಬೇಕಿದೆ. (ಏಜೆನ್ಸೀಸ್​)

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್-ಪವಿತ್ರಾ! ರಮ್ಯಾ ಸಂಬಂಧಕ್ಕೆ ಫುಲ್​ಸ್ಟಾಪ್ ಇಟ್ಟು ಹೊಸ ಜೀವನ ಆರಂಭ

    ನಿಮ್ಮ ಮದುವೆ ಬಗ್ಗೆ ಹೇಳಿ… ಸಿನಿಮಾ ವೇದಿಕೆಯಲ್ಲಿ ನಟ ನರೇಶ್​ ಕೊಟ್ಟ ಉತ್ತರ ಹೀಗಿತ್ತು….

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts