More

    ಸಂಸದೆ ಸುಮಲತಾ ಸಂಪರ್ಕದಲ್ಲಿದ್ದವರಿಗೆ ಆತಂಕ ಶುರು: ಜಿಲ್ಲಾಡಳಿತದಿಂದ ಮಹತ್ವದ ನಿರ್ಧಾರ!​

    ಮಂಡ್ಯ: ಸಂಸದೆ ಸುಮಲತಾ ಅಂಬರೀಷ್​ ಅವರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇದೀಗ ಸುಮಲತಾ ಅವರು ಭೇಟಿ ಕೊಟ್ಟ ಸ್ಥಳಗಳಲ್ಲಿ ಆತಂಕ ಮನೆ ಮಾಡಿದೆ.

    ಅನೇಕ ಕಾರ್ಯಕ್ರಮಗಳಲ್ಲಿ ಸುಮಲತಾ ಜತೆ ಭಾಗಿಯಾಗಿದ್ದ ಅಧಿಕಾರಿಗಳು ಹಾಗೂ ಬೆಂಬಲಿಗರಲ್ಲಿ ಭೀತಿ ಆವರಿಸಿದೆ. ಕಳೆದೊಂದು ವಾರದಲ್ಲಿ ಮಂಡ್ಯ ಜಿಲ್ಲೆಯ ಹಲವೆಡೆಗೆ ಸುಮಲತಾ ಅವರು ಭೇಟಿ ಕೊಟ್ಟಿದ್ದರು. ಈ ವೇಳೆ ಅವರಿಗೆ ಅಧಿಕಾರಿಗಳು ಹಾಗೂ ಬೆಂಬಲಿಗರು ಸಾಥ್ ನೀಡಿದ್ದರು.

    ಇದನ್ನೂ ಓದಿ: PHOTOS| ಥ್ರಿಲ್​ ನೀಡಲು ಅಪ್ಸರಾ ರೆಡಿ: ಹಾಟ್​ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಆರ್​ಜಿವಿ!

    ಜೂ.30ರಂದು ನಾಗಮಂಗಲ ಬ್ರಹ್ಮದೇವರಹಳ್ಳಿಗೆ ಭೇಟಿ ನೀಡಿ, ವಿವಿಧ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮಿಗಳು ಸಹ ಭಾಗಿಯಾಗಿದ್ದರು.

    ಮಂಡ್ಯದ ರೈತ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಚೆಕ್ ವಿತರಣೆ ಮಾಡಿದ್ದರು. ಈ ವೇಳೆ ಸಚಿವರಾದ ನಾರಾಯಣಗೌಡ, ಎಸ್.ಟಿ ಸೋಮಶೇಖರ್, ಶಾಸಕ ಎಂ.ಶ್ರೀನಿವಾಸ್ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

    ಪಾಂಡವಪುರ ಸರ್ಕಾರಿ ಶಾಲೆಯ ಕಾಂಪೌಂಡ್ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದರು. ಜುಲೈ1 ರಂದು ಬೆಸಗರಹಳ್ಳಿಯಲ್ಲಿ ಬಸ್ ಸ್ಟ್ಯಾಂಡ್ ಕಾಮಗಾರಿ ವೀಕ್ಷಣೆ ಮಾಡಿ, ಗ್ರಾಮದ ಸಮುದಾಯದ ಭವನದ ಬಳಿ ಗ್ರಾಮಸ್ಥರಿಗೆ ಸಸಿ ವಿತರಣೆ ಮಾಡಿದ್ದರು. ಇದೀಗ ಆ ಜಾಗಗಳೆಲ್ಲೆಲ್ಲಾ ಆತಂಕ ಮನೆ ಮಾಡಿದೆ.

    ಇದನ್ನೂ ಓದಿ: ನೇಣಿಗೆ ಕೊರಳೊಡ್ಡಿದ ಯುವತಿಗೆ ವರವಾಗಬೇಕಿದ್ದ ಪ್ರೀತಿಯೇ ಶಾಪವಾಯ್ತು

    ಇನ್ನು ಸುಮಲತಾ ಅವರು ಸಹ ತನ್ನ ಸಂಪರ್ಕಕ್ಕೆ ಬಂದಿರುವವರು ಕೋವಿಡ್ ಟೆಸ್ಟ್‌‌ಗೆ ಒಳಪಡುವಂತೆ ಸ್ವತಃ ಮನವಿ ಮಾಡಿಕೊಂಡಿದ್ದಾರೆ. ಸಂಸದರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. (ದಿಗ್ವಿಜಯ ನ್ಯೂಸ್​)

    ರಾಜ್ಯದಲ್ಲಿ ವಾಹನಗಳು 30 ದಿನ ನಿಂತಲ್ಲೇ ನಿಲ್ಲುವಂತಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts