More

    ಆತ್ಮಹತ್ಯಾ ದಾಳಿಗೆ ಸ್ಫೋಟಕಗಳಿದ್ದ ಬೆಲ್ಟ್​, ಜಾಕೆಟ್​ ಸಿದ್ಧಪಡಿಸಿದ್ದ ಐಸಿಸ್​ ಉಗ್ರ; ಪೊಲೀಸರಿಂದ ಬಾಂಬ್​ ನಿಷ್ಕ್ರಿಯ

    ನವದೆಹಲಿ: ವಿದ್ವಂಸಕ ಕೃತ್ಯ ನಡೆಸಲು ಶೇಖರಿಸಲಾಗಿದ್ದ ಹಲವು ಸ್ಫೋಟಕ ಸಾಧನಗಳು, ಸ್ಫೋಟಕಗಳಿರುವ ನಡುಪಟ್ಟಿ, ಜಾಕೆಟ್​ಅನ್ನು ಉತ್ತರಪ್ರದೇಶ ಬಲರಾಮ್​ಪುರದ ಉಗ್ರ ಮಹಮ್ಮದ್​ ಮುಷ್ತಕೀಮ್​ ಮನೆಯಿಂದ ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಎರಡು ದಿನಗಳ ಹಿಂದಷ್ಟೇ ದೆಹಲಿಯ ಕರೊಲ್​ ಬಾಗ್​ ಪ್ರದೇಶದದಲ್ಲಿ ಗುಂಡಿನ ಚಕಮಕಿ ನಡೆಸಿ ಈತನನ್ನು ಪೊಲೀಸರು ಬಂಧಿಸಿದ್ದರು. ಮನೆಯಲ್ಲಿ ಐಸಿಸ್​ ಧ್ವಜಗಳು, ಉಗ್ರ ಸಂಘಟನೆಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

    ಇದಲ್ಲದೇ, ಸ್ಫೋಟಕವಾಗಿ ಬಳಸಲು ಇಟ್ಟಿದ್ದ ಎರಡು ಪ್ರೆಷರ್​ ಕುಕರ್​, 15 ಕೆಜಿಗಳಷ್ಟು ಸ್ಫೋಟಕ, ಪಿಸ್ತೂಲ್​, ನಾಲ್ಕು ಗುಂಡುಗಳನ್ನು ಈತನಿಂದ ದೆಹಲಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇದಾಗುತ್ತಿದ್ದಂತೆ, ಪೊಲೀಸರು ಈತನ ಬಲರಾಮ್​ಪುರದಲ್ಲಿದ್ದ ಮನೆಗೆ ಧಾವಿಸಿದ್ದರು. ಗ್ರಾಮಕ್ಕೆಲ್ಲ ದಿಗ್ಬಂಧನ ವಿಧಿಸಿ ಸಂಪೂರ್ಣ ತಪಾಸಣೆ ನಡೆಸಿದ್ದರು.

    ಇದನ್ನೂ ಓದಿ; ದಾವೂದ್​ ತನ್ನ ನೆಲದಲ್ಲಿಯೇ ಇದ್ದಾನೆಂದು ಒಪ್ಪಿಕೊಂಡ ಪಾಕ್​; ಆರ್ಥಿಕ ದಿಗ್ಬಂಧನದಿಂದ ಪಾರಾಗಲು ತಂತ್ರ…? 

    ಆತ್ಮಹತ್ಯಾ ದಾಳಿಗೆ ಸ್ಫೋಟಕಗಳಿದ್ದ ಬೆಲ್ಟ್​, ಜಾಕೆಟ್​ ಸಿದ್ಧಪಡಿಸಿದ್ದ ಐಸಿಸ್​ ಉಗ್ರ; ಪೊಲೀಸರಿಂದ ಬಾಂಬ್​ ನಿಷ್ಕ್ರಿಯ

    ಆತ್ಮಹತ್ಯಾ ದಾಳಿಗೆ ಬಳಸಲಾಗುವ ಸ್ಫೋಟಕವಿರಿಸುವ ಏಳು ಪಾಕೆಟ್​ಗಳಿರುವ ಎರಡು ಜಾಕೆಟ್​ಗಳು, ಮೂರು ಕೆಜಿ ಸ್ಫೋಟಕ ತುಂಬಿದ್ದ ನಡುಪಟ್ಟಿಗಳು ಪತ್ತೆಯಾಗಿದ್ದವು. ತಜ್ಞರು ಇದರಲ್ಲಿದ್ದ ಬಾಂಬ್​ಗಳನ್ನು ಸುರಕ್ಷಿತವಾಗಿ ಹೊರ ತೆಗೆದು ನಿಷ್ಕ್ರಿಯಗೊಳಿಸಲಾಗಿದೆ. ಒಟ್ಟಾರೆ 9 ಕೆಜಿ ಸ್ಫೋಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಎಲೆಕ್ಟ್ರಿಕ್​ ವೈರ್​ಗಳು, ಅಂಟುಪಟ್ಟಿಗಳು, ಸಿಲಿಂಡರ್​ ಆಕಾರಾದ ವಸ್ತುಗಳು. ಲಿಥಿಯಂ ಬ್ಯಾಟರಿಗಳು, ಬಾಲ್​ ಬೇರಿಂಗ್​ ಸೇರಿ ಬಾಂಬ್​ ತಯಾರಿಸಲು ಬೇಕಿದ್ದ ವಸ್ತುಗಳನ್ನೆಲ್ಲ ಮುಷ್ತಕೀಮ್​ ಇಲ್ಲಿಟ್ಟಿದ್ದ.

    ಇದನ್ನೂ ಓದಿ; ಆ.15ರಂದು ಸ್ಫೋಟಕ್ಕೆ ಸಂಚು ರೂಪಿಸಿದ್ದವನ ಬಂಧನ; ಸ್ಫೋಟಕ ವಶ; ಈತನಿಗಿತ್ತು ಐಸಿಸ್​ನೊಂದಿಗೆ ನೇರ ಸಂಪರ್ಕ 

    ಒಂದು ವೇಳೆ ಆಗಸ್ಟ್​ 15ರಂದು ವಿಧ್ವಂಸಕ ಕೃತ್ಯ ಎಸಗುವ ಈತನ ಉದ್ದೇಶ ಈಡೇರಿದ್ದೇ ಆದಲ್ಲಿ ಭಾರಿ ಪ್ರಮಾಣದ ಸಾವು-ನೋವು ಸಂಭವಿಸುತ್ತಿತ್ತು. ಏಕೆಂದರೆ ಈತ ಬಳಿ ಸಿಕ್ಕ ಕುಕರ್​ ಬಾಂಬ್​ಗಳು ಸಂಫೂರ್ಣ ಸಜ್ಜಾಗಿದ್ದು, ಅವನ್ನು ಆ್ಯಕ್ಟಿವೇಟ್​ ಮಾಡುವುದಷ್ಟೇ ಬಾಕಿಯಿತ್ತು. ಹೀಗಾಗಿ ಈತನ ಬಂಧನವಾಗುತ್ತಿದ್ದಂತೆ ದೆಹಲಿ ಪ್ರಮುಖ ಸ್ಥಳಗಳಲ್ಲಿ ಭಾರಿ ತಪಾಸಣೆ ನಡೆಸಲಾಗಿತ್ತು. ಒಂಟಿಯಾಗಿ ವಿಧ್ವಂಸಕ ಕೃತ್ಯ ನಡೆಸಲು ದೆಹಲಿಯ ಹಲವು ಪ್ರದೇಶಗಳಿಗೆ ಮುಷ್ತಕೀನ್​ ಭೇಟಿ ನೀಡಿದ್ದ. ಗ್ರಾಮದ ಸ್ಮಶಾನದಲ್ಲಿ ಸುಧಾರಿತ ಸ್ಫೋಟಕ ಬಳಸಿ ಸ್ಫೋಟ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts