More

    ಕಬ್ಬು ಬೆಲೆ ನಿಗದಿಗೆ ಒತ್ತಾಯ

    ಸದಲಗಾ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ನಿಗದಿ ಹಾಗೂ ಬಾಕಿ ಎಸ್‌ಇಪಿ ಬಿಲ್ ಪಾವತಿಗೆ ಆಗ್ರಹಿಸಿ ಉಪ ವಿಭಾಗಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

    ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡರ ಮಾತನಾಡಿ, ಬೆಲೆ ನಿಗದಿ ಪಡಿಸದೆ ಕಬ್ಬು ನುರಿಸಲು ಕಾರ್ಖಾನೆಗಳು ಸಜ್ಜಾಗುತ್ತಿದ್ದು, ಕಬ್ಬು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಅತಿವೃಷ್ಟಿ, ಅನಾವೃಷ್ಟಿ ಕಂಡ ರೈತ ಸಮುದಾಯಕ್ಕೆ ಕೃಷ್ಣೆ ಮತ್ತು ದೂಧಗಂಗಾ ನದಿಯ ಪ್ರವಾಹದ ಬರಸಿಡಿಲು ಬಡಿದಂತಾಗಿದೆ. 2019ರಲ್ಲಿ ಕಟಾವಿಗೆ ಬಂದ ಕಬ್ಬು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಕೋಟ್ಯಂತರ ರೂ.ಹಾನಿಯಾಗಿದೆ. ಹಾಗಾಗಿ, ಕಬ್ಬಿಗೆ ಸೂಕ್ತ ದರ ನಿಗದಿಪಡಿಸಿ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

    ಬೇಡಿಕೆಗೆ ಒಪ್ಪದಿದ್ದರೆ ರೈತ ಸಂಘ ಹಾಗೂ ಹಸಿರು ಸೇನೆಯು ರಸ್ತೆ ತಡೆ ಅಥವಾ ಕಾರ್ಖಾನೆಗಳ ಮುಂದೆ ಧರಣಿ ಮೂಲಕ ಹೋರಾಟ ಮಾಡಲಾಗುತ್ತದೆ ಎಂದು ಮನವಿ ಮೂಲಕ ತಿಳಿಸಿದರು. ಜ್ಯೋತಿಬಾ ಮಗದುಮ್ಮ, ರಂಗನಾಥ ಪಾಂಡರೆ, ಬಾಳಗೌಡ ಪಾಟೀಲ, ಲಕ್ಷ್ಮಣ ದೇವಾನಗೋಳ, ಸತ್ಯಪ್ಪ ದೇವಾನಗೋಳ, ಬಸು ನಡುವಿನಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts