More

    ಕರ್ನಾಟಕದಲ್ಲಿ ಮೊದಲು ಒಮಿಕ್ರಾನ್ ಪತ್ತೆಯಾಗಿದ್ದೇಕೆ? ಆರೋಗ್ಯ ಸಚಿವರು ಹೇಳಿದ್ದಿದು

    ಬೆಂಗಳೂರು: ಈಗಾಗಲೇ ಹಲವು ದೇಶಗಳಲ್ಲಿ ಹಬ್ಬಿರುವ ಒಮಿಕ್ರಾನ್​ ವೇರಿಯೆಂಟ್​ ಭಾರತಕ್ಕೂ ಬರಲೇ ಬೇಕಿತ್ತು, ಬಂದಿದೆ. ಈ ಬಗ್ಗೆ ಆತಂಕ, ಊಹಾಪೋಹಗಳು ಮತ್ತು ಗೊಂದಲದ ಅಗತ್ಯ ಇಲ್ಲ. ಸದ್ಯಕ್ಕೆ ಕಂಡುಬಂದಿರುವಂತೆ ಒಮಿಕ್ರಾನ್​ನಿಂದ ಮೆದು ಲಕ್ಷಣಗಳುಂಟಾಗಿದ್ದು, ಸೋಂಕಿನ ತೀವ್ರತೆ ಕಡಿಮೆ ಇದೆ. ರಾಜ್ಯ ಸರ್ಕಾರ ಪರಿಸ್ಥಿತಿಯ ಬಗ್ಗೆ ಪೂರ್ಣ ನಿಗಾ ವಹಿಸಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್​ ಹೇಳಿದ್ದಾರೆ.

    ಭಾರತದ ಮೊದಲ ಎರಡು ಒಮಿಕ್ರಾನ್​ ಪ್ರಕರಣಗಳು ಕರ್ನಾಟಕದಲ್ಲೇ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, “ಭಾರತಕ್ಕೆ ಪ್ರತಿ ದಿನ 1 ಲಕ್ಷ ವಿದೇಶೀಯರು ವಿಮಾನಗಳಲ್ಲಿ ಬರ್ತಾ ಇರ್ತಾರೆ. ಹಾಗಾಗಿ ಒಮಿಕ್ರಾನ್​ ಬರುವುದು ನಿರೀಕ್ಷಿತವೇ ಆಗಿತ್ತು. ಕರ್ನಾಟಕದಲ್ಲಿ ಟೆಸ್ಟಿಂಗ್ ಸೌಲಭ್ಯ ಚೆನ್ನಾಗಿರೋದ್ರಿಂದ ಇಲ್ಲಿ ಬೇಗ ತಿಳಿದುಬಂದಿದೆ ಅಷ್ಟೆ. ಬೇಗ ಮಾಹಿತಿ ಸಿಕ್ಕಿರುವುದು ಒಳ್ಳೆಯ ವಿಚಾರವಾಗಿದೆ. ಇದು ಆತಂಕಕ್ಕೆ ಕಾರಣವಾಗಬಾರದು” ಎಂದರು.

    ಇದನ್ನೂ ಓದಿ: ಭಾರತಕ್ಕೆ ಒಮಿಕ್ರಾನ್​ ಪ್ರವೇಶ; ಆತಂಕ ಬೇಡ ಎನ್ನುತ್ತಲೇ ಸರ್ಕಾರ ನೀಡಿದೆ ಎಚ್ಚರಿಕೆ

    ಈಗ ಪತ್ತೆಯಾಗಿರುವ ಸೋಂಕಿತರಲ್ಲಿ ರೋಗಲಕ್ಷಣಗಳು ಮೆದು ಪ್ರಮಾಣದಲ್ಲಿವೆ. ಇನ್ನೂ ಡೆಲ್ಟಾ ವೇರಿಯೆಂಟ್ ಸೋಂಕಿ​ನಂತೆ ಉಸಿರಾಟದ ಸಮಸ್ಯೆ ಹೆಚ್ಚು ಕಂಡುಬಂದಿಲ್ಲ ಎಂದ ಸಚಿವರು, “ಈಗಾಗಲೇ 11 ದೇಶಗಳಲ್ಲಿ ಒಮಿಕ್ರಾನ್​ ರೂಪಾಂತರಿಯ ಬಗ್ಗೆ ನೋಟಿಫೈ ಮಾಡಲಾಗಿದೆ. ಅಲ್ಲೆಲ್ಲಾ ಇದರ ತೀವ್ರತೆ ಕಡಿಮೆ ಇದೆ ಅಂತಿದ್ದಾರೆ. ಆದರೆ ಅದರ ವ್ಯವಹಾರವನ್ನು ನಾವಿನ್ನೂ ಗಮನಿಸಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಅಧ್ಯಯನ ಮಾಡ್ತಾ ಇದೆ. ಈಗಲೇ ಅದರ ಬಗ್ಗೆ ಏನೂ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ” ಎಂದರು.

    ಒಮಿಕ್ರಾನ್​ ಸೋಂಕಿತರಿಬ್ಬರಲ್ಲಿ ಒಬ್ಬ ಖಾಸಗಿ ವೈದ್ಯನಿಗೆ ಎರಡೂ ಡೋಸ್​ ಲಸಿಕೆ ತೆಗೆದುಕೊಂಡಿದ್ದರೂ ಸೋಂಕು ಕಂಡುಬಂದಿದೆ. ಹೀಗಾಗಿ ಲಸಿಕೆ ತೆಗೆದುಕೊಂಡಿದ್ದೇವೆಂದು ಕೋವಿಡ್​ ಮುನ್ನೆಚ್ಚರಿಕೆ ವಹಿಸದೆ ಇರಬಾರದು. ಆದರೆ ಸೋಂಕಿನ ತೀವ್ರತೆ ಕಡಿಮೆ ಮಾಡುವ ದೃಷ್ಟಿಯಿಂದ ಎಲ್ಲರೂ ಆದಷ್ಟು ಬೇಗ ಎರಡೂ ಡೋಸ್​ ಲಸಿಕೆ ಪಡೆಯಿರಿ. ಅನಗತ್ಯವಾಗಿ ಓಡಾಡಬೇಡಿ. ಒಳಾಂಗಣದಲ್ಲಿ ಗುಂಪು ಸೇರದಂತೆ ನಿಗಾ ವಹಿಸಿ. ಈ ಬಗ್ಗೆ ನಾಳೆ ಸಿಎಂ ಸಭೆ ನಡೆಸ್ತಾ ಇದ್ದಾರೆ. ಸರ್ಕಾರ  ನಿರಂತರವಾಗಿ ಪರಿಸ್ಥಿತಿಯ ವಿಮರ್ಶೆ ಮಾಡ್ತಾ ಇದೆ ಎಂದು ಸುಧಾಕರ್​ ಹೇಳಿದರು.

    24 ಗಂಟೆಗಳಲ್ಲಿ ಪರಿಹಾರ ಹುಡುಕಿ: ಸರ್ಕಾರಕ್ಕೆ ಗಡುವು ನೀಡಿದ ಸುಪ್ರೀಂ

    VIDEO| 2024ರ ಚುನಾವಣೇಲಿ ತಮ್ಮ ಪಕ್ಷಕ್ಕೆ ಬಹುಮತ ಬರೋದಿಲ್ಲ ಎಂದ ಕೈ ನಾಯಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts