More

    ನೆಗೆಟಿವಿಟಿ ಬಂದಾಗ ಸ್ವೀಕರಿಸಬೇಕು; ರಶ್ಮಿಕಾಗೆ ಕಿಚ್ಚನ ಸಲಹೆ …

    ಬೆಂಗಳೂರು: ‘ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಖಾತೆ ಬೇಕು. ಮಿಲಿಯನ್​ಗಟ್ಟಲೆ ಹಿಂಬಾಲಕರು ಬೇಕು. ಆದರೆ, ನೆಗೆಟಿವಿಟ್ ಮಾತ್ರ ಬೇಡ ಎಂದರೆ ಹೇಗೆ? ಬೇರೆ ದಾರಿ ಇಲ್ಲ. ನೆಗೆಟಿವಿಟಿ ಬಂದಾಗ ಸ್ವೀಕರಿಸಬೇಕು ಅಷ್ಟೇ …’

    ಇದನ್ನೂ ಓದಿ: ಕ್ಯಾಮೆರಾ, ಕನಸು … ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಟ್ರೈಲರ್ ಬಿಡುಗಡೆ

    ಹಾಗಂತ ಹೇಳಿದ್ದು ಸುದೀಪ್​. ಅದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸುದೀಪ್​ ಅವರನ್ನು ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚುತ್ತಿರುವ ನೆಗೆಟಿವಿಟಿ ಬಗ್ಗೆ ಕೇಳಲಾಯಿತು. ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಸೆಲೆಬ್ರಿಟಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಬೆಳಕು ಚೆಲ್ಲಲಾಯಿತು. ಈ ಬಗ್ಗೆ ಮಾತನಾಡಿದ ಸುದೀಪ್​, ಅದನ್ನೆಲ್ಲ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ನಾವು ಜಗತ್ತನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಅದರ ಬದಲು ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಕಲಿಯಬೇಕು. ಒಮ್ಮೆ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡರೆ ಮುಗಿಯಿತು. ಬರೀ ಸನ್ಮಾನಗಳಷ್ಟೇ ಅಲ್ಲ, ಟೀಕೆಗಳು ಸಹ ಎದುರಾಗುತ್ತವೆ. ಅದನ್ನು ಯಾವ ರೀತಿ ಫೇಸ್​ ಮಾಡಬೇಕು ಎಂಬುದನ್ನು ಕಲಿಯುವುದರ ಜತೆಗೆ ಗಟ್ಟಿಯಾಗುತ್ತಾ ಹೋಗಬೇಕು. ಮುಂದೇನಾಗಬಹುದು ಎಂದು ಗೊತ್ತಾದಾಕ್ಷಣ ಅಲರ್ಟ್​ ಆಗಬೇಕು. ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎಂಬುದನ್ನು ಕಲಿಯಬೇಕು’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಹೊಸ ವರ್ಷದ ಮೊದಲ ಶುಕ್ರವಾರ ಎಂಟು ಚಿತ್ರಗಳ ಬಿಡುಗಡೆ …

    ‘ಎಲ್ಲರಿಗೂ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಖಾತೆ ತೆಗೆಯಬೇಕು ಎಂಬ ಆಸೆ ಇರುತ್ತದೆ. ಮಿಲಿಯನ್​ಗಟ್ಟಲೆ ಫಾಲೋವರ್ಸ್​ ಬೇಕು ಎಂಬ ಆಸೆ ಇರುತ್ತದೆ. ಆದರೆ, ನೆಗೆಟಿವಿಟಿ ಬೇಡ ಎಂದರೆ ಹೇಗೆ? ನೆಗೆಟಿವಿಟಿ ಬಂದಾಗ ಸ್ವೀಕರಿಸ್ಬೇಕು ಅಷ್ಟೇ. ಎಲ್ಲರಗೂ ಅವರದ್ದೇ ಆದ ಒಂದು ಅಭಿಪ್ರಾಯ ಇರುತ್ತದೆ. ಅದು ತಪ್ಪು ಎನ್ನಲಾಗುವುದಿಲ್ಲ’ ಎಂದು ಸುದೀಪ್​ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ರಶ್ಮಿಕಾಗೆ ಇನ್ನಷ್ಟು ಗಟ್ಟಿಯಾಗಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

    ‘ಪಠಾಣ್​’ ಮುಂದಕ್ಕೆ ಹೋಗಿಲ್ಲ … 10ಕ್ಕೆ ಬಿಡುಗಡೆಯಾಗಲಿದೆಯಂತೆ ಟ್ರೈಲರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts