More

    ನರೇಗಲ್ಲ: ಯಶಸ್ವಿ ನೇತ್ರ ಚಿಕಿತ್ಸಾ ಶಿಬಿರ

    ಪಟ್ಟಣದ ಕೆ.ಎಸ್.ಎಸ್. ಕಾಲೇಜು ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ರವೀಂದ್ರನಾಥ ಬಿ. ದಂಡಿನ ಅಭಿಮಾನಿ ಬಳಗದ ವತಿಯಿಂದ ನಡೆದ ನೇತ್ರ ಚಿಕಿತ್ಸಾ ಶಿಬಿರವು ಅತ್ಯಂತ ಯಶಸ್ವಿಯಾಯಿತು. ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಈ ಕಾರ್ಯಕ್ಕೆ ತಮ್ಮ ಕೈ ಜೋಡಿಸಿದ್ದವು. ಶಿಬಿರದಲ್ಲಿ 110 ಕ್ಕೂ ಅಧಿಕ ಜನರು ತಮ್ಮ ಕಣ್ಣಿನ ತಪಾಸಣೆ ಮಾಡಿಸಿಕೊಂಡರು.
    ರಾಜ್ಯ ಬಿ.ಜೆ.ಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ರವೀಂದ್ರನಾಥ ದಂಡಿನ ಮಾತನಾಡಿ, ಮನುಷ್ಯನ ಎಲ್ಲ ಅಂಗಗಳಲ್ಲಿ ಕಣ್ಣು ಬಹಳಷ್ಟು ಮಹತ್ವದ ಅಂಗ. ಕಣ್ಣಿದ್ದರೆ ಈ ಜಗತ್ತನ್ನು ನೋಡಲು ಅನುಕೂಲವಾಗುತ್ತದೆ. ಕಣ್ಣುಗಳ ಬಗ್ಗೆ ಎಂದಿಗೂ ಅಸಡ್ಡೆ ಮಾಡಬಾರದು. ತಜ್ಞ ಕಣ್ಣಿನ ವೈದ್ಯರಿಂದ ಮೇಲಿಂದ ಮೇಲೆ ಕಣ್ಣು ತಪಾಸಣೆಯನ್ನು ಮಾಡಿಸಿಕೊಳ್ಳುತ್ತಿರಬೇಕು. ವೈದ್ಯರು ಹೇಳುವ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸಿ ಕಣ್ಣಿನ ರಕ್ಷಣೆಗೆ ಮುಂದಾಗಬೇಕೆಂದರು.

    ಡಾ. ಕೆ. ಬಿ. ಧನ್ನೂರ, ಜಗದೀಶ ಸಂಕನಗೌಡ್ರ, ನಿವೃತ್ತ ಯೋಧ ರಾಮಣ್ಣ ಸಕ್ರೋಜಿ, ಪ.ಪಂ.ಸದಸ್ಯ ವೀರಪ್ಪ ಜೋಗಿನ, ಕುಮಾರಸ್ವಾಮಿ ಕೋರಧಾನ್ಯಮಠ, ಶಿಬಿರದ ಸಮನ್ವಯಾಧಿಕಾರಿ ಮಹೇಶ ಕುಲಕರ್ಣಿ, ಎಸ್.ಎಚ್.ಹೊಸಳ್ಳಿ, ರಘುನಾಥ ಕೊಂಡಿ, ನೀಲಪ್ಪ ತೊಂಡಿಹಾಳ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts