More

    ನ.24ರೊಳಗೆ ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆ

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಯಲ್ಲಿರುವ ಜಾತಿ ಗಣತಿ ವರದಿಯನ್ನು ಇದೇ ತಿಂಗಳಲ್ಲೇ ಸರ್ಕಾರಕ್ಕೆ ಸಲ್ಲಿಸುವುದಾಗಿ ಹಿಂದುಳಿದ ವರ್ಗಗಳ ಆಯೋಗ ಖಚಿತ ಪಡಿಸಿದೆ. ಇನ್ನೊಂದೆಡೆ ಒಕ್ಕಲಿಗ ಸಮಾಜ ವರದಿ ಕುರಿತು ಎತ್ತಿರುವ ಆಕ್ಷೇಪಕ್ಕೆ ಸಂಸದ ಡಿ.ಕೆ ಸುರೇಶ್ ಬೆಂಬಲ ವ್ಯಕ್ತಪಡಿಸಿದ್ದಾರೆ.
    ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ನಾವು ಇದೇ ತಿಂಗಳು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದರು.
    ಇನ್ನು ಸರ್ಕಾರವೇ ಒಕ್ಕಲಿಗ ಸಮುದಾಯದ ಆರೋಪದ ಬಗ್ಗೆ ಉತ್ತರ ನೀಡಲಿದೆ. ಇದನ್ನು ನಾವು ಹೇಳೋಕೆ ಆಗುವುದಿಲ್ಲ. ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಹೇಳಿದರು.
    ವರದಿಯಲ್ಲಿರುವ ಅಂಕಿಅಂಶದ ಬಗ್ಗೆ ಆಕ್ಷೇಪ ಇದೆ ಎಂಬ ಟೀಕೆಗೂ ಪ್ರತಿಕ್ರಿಯೆ ನೀಡಿದ ಅವರು, ವರದಿಯಲ್ಲಿ ಅಂಕಿ, ಅಂಶಗಳನ್ನ ತಿದ್ದುವ ಕೆಲಸ ಮಾಡಿಲ್ಲ. ಸರ್ಕಾರ ಕೊಟ್ಟಿರುವ ಜವಾಬ್ದಾರಿ ನಿಭಾಯಿಸಿದ್ದೇವೆ. ವರದಿ ಸಲ್ಲಿಸಲು ಕೊನೆಯ ಹಂತದ ಕೆಲಸ ನಡೆಯುತ್ತಿದೆ. ಈ ತಿಂಗಳ 24ರೊಳಗೆ ವರದಿ ಸಲ್ಲಿಸಲಾಗುವುದು. ಇಲ್ಲಿ ಕಾಂತರಾಜು ವರದಿ, ಜಯಪ್ರಕಾಶ್ ಹೆಗ್ಡೆ ವರದಿ ಎಂದೇನು ಇರುವುದಿಲ್ಲ ಎಂದರು.
    ಸ್ವಾಮೀಜಿ
    ಒಕ್ಕಲಿಗರ ಸಂಘದ ಸಭೆ ನಡೆದಿದೆ. ಸಭೆಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಮಾಜದ ಅಭಿಪ್ರಾಯ ಸ್ವಾಮೀಜಿ ತಿಳಿಸಿದ್ದಾರೆ. ಅವರ ಅಭಿಪ್ರಾಯಕ್ಕೆ ನಾವೂ ಬೆಂಬಲ ಸೂಚಿಸಬೇಕಿದೆ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದರು.
    ಕಾಂತರಾಜು ವರದಿ ರಾಜಕೀಯ ವರದಿ ಅಲ್ಲ. ಎಲ್ಲರ ಹಿತ ಕಾಪಾಡಬೇಕಿದೆ. ವರದಿ ಬಂದ ನಂತರ ನನ್ನ ಅಭಿಪ್ರಾಯ ಹೇಳುವೆ, ವರದಿಯಲ್ಲಿ ಏನಿದೆ ಗೊತ್ತಿಲ್ಲ. ಅದಿನ್ನೂ ಸಂಪುಟದ ಮುಂದೆ ಬಂದಿಲ್ಲ. ವೈಜ್ಞಾನಿಕ, ಅವೈಜ್ಞಾನಿಕ ನಂತರ ಎಂದರು.
    ಒಕ್ಕಲಿಗರ ಸಮಾಜದ ಕುರಿತು ಹೊಸದೇನೂ ಇಲ್ಲ, ಬಹಳ ದಿನದಿಂದ ಇರುವುದೇ. ಸಮಾಜದ ಆಗು -ಹೋಗುಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಸಮಾಜದ ಅಭಿಪ್ರಾಯ ಸ್ವಾಮೀಜಿ ತಿಳಿಸಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts