More

    ಫೇಕ್‌ನ್ಯೂಸ್ ಹರಡುವುದಕ್ಕೆ ಶೀಘ್ರವೇ ಬೀಳಲಿದೆ ಕಡಿವಾಣ!

    ಧಾರವಾಡ: ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್‌ಗಳಂಥ ಸೋಷಿಯಲ್ ಮೀಡಿಯಾ ಹಾವಳಿ ಮಿತಿ ಮೀರಿ ನೈಜತೆ ಮರೆಮಾಚುತ್ತಿದ್ದು, ಫೇಕ್ ನ್ಯೂಸ್ (ಸುಳ್ಳು ಸುದ್ದಿ), ಫೇಕ್‌ಪೋಸ್ಟ್‌ಗಳಿಂದ ಬಳಕೆದಾರರು ಸಂಕಷ್ಟಕ್ಕೆ ಸಿಲುಕಿದ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಫೇಕ್ ನ್ಯೂಸ್ ಯಾವುದು ಎಂಬುದನ್ನು ಪತ್ತೆ ಹಚ್ಚಲು ಧಾರವಾಡ ಐಐಟಿ ವಿದ್ಯಾರ್ಥಿಗಳ ತಂಡ ಮೊಬೈಲ್ ಆ್ಯಪ್‌ವೊಂದನ್ನು ಸಿದ್ಧಪಡಿಸುತ್ತಿದೆ.

    ‘‘ಜಾಲತಾಣದಲ್ಲಿ ಹರಡುವ ಸುದ್ದಿ ಅಥವಾ ಪೋಸ್ಟ್‌ಗಳ ನೈಜತೆ ಪತ್ತೆ ಹಚ್ಚುವ ಆ್ಯಪ್ ಸಿದ್ಧಪಡಿಸುತ್ತಿದ್ದೇವೆ. ಮೊಬೈಲ್ ಅಪ್ಲಿಕೇಶನ್ ಶೀಘ್ರವೇ ಲಾಂಚ್ ಆಗಲಿದೆ’’ ಎಂದು ಅನ್ವೇಷಣಾ ತಂಡದ ವಿದ್ಯಾರ್ಥಿ ಅಮನ್ ಸಿಂಘಲ್ ತಿಳಿಸಿದ್ದಾರೆ. ಧಾರವಾಡ ಐಐಟಿ ವಿದ್ಯಾರ್ಥಿಗಳ ತಂಡಕ್ಕೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ರಮೇಶ ಪೋಕ್ರಿಯಾಲ್ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. ಫೇಕ್ ನ್ಯೂಸ್ ಅಲರ್ಟ್ ಮೊಬೈಲ್ ಅಪ್ಲಿಕೇಶನ್ ಇನ್ನೆರಡು ತಿಂಗಳಲ್ಲಿ ಲಾಂಚ್ ಆಗಲಿದೆ. ಇದರಿಂದ ಸುಳ್ಳುಸುದ್ದಿ ಹರಡುವಿಕೆಗೆ ಕಡಿವಾಣ ಬೀಳಲಿದೆ. ಇದೊಂದು ಅತ್ಯುತ್ತಮ ಅನ್ವೇಷಣೆ ಎಂದು ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts