More

    ನಾಟಕ ಬಯಲಾಗುವ ಭೀತಿಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

    *ಪಿಯು ಲಿತಾಂಶ ಪ್ರಕಟವಾಗುತ್ತಿದ್ದಂತೆ ನೇಣಿಗೆ ಶರಣು


    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ಪ್ರತಿದಿನ ಕಾಲೇಜಿಗೆ ಹೋಗಿ ಬರುತ್ತಿರುವುದಾಗಿ ಪಾಲಕರಿಗೆ ನಂಬಿಸಿದ್ದ ವಿದ್ಯಾರ್ಥಿಯೊಬ್ಬ ಪಿಯುಸಿ ಲಿತಾಂಶದಂದು ಸತ್ಯಾಂಶ ಬಯಲಾಗುವುದು ಎಂಬ ಆತಂಕಕ್ಕೊಳಲಾಗಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಯರಮಾಚನಹಳ್ಳಿ ತಡವಾಗಿ ಬೆಳಕಿಗೆ ಬಂದಿದೆ.
    ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಯರಮಾಚನಹಳ್ಳಿ ನಿವಾಸಿ ಶರತ್(18) ಮೃತ ದುರ್ದೈವಿ.
    ಪಾಲಕರನ್ನು ನಂಬಿಸಿದ್ದ ವಿದ್ಯಾರ್ಥಿ:
    ಶರತ್ ದ್ವಿತೀಯ ಪಿಯುನಲ್ಲಿ ಅನುತ್ತೀರ್ಣನಾಗಿದ್ದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡುಬಂದಿತ್ತು. ಆದರೆ ಶರತ್ ಮೊದಲ ವರ್ಷದ ವಾರ್ಷಿಕ ಪರೀಕ್ಷೆಯಲ್ಲೇ ಅನುತ್ತೀರ್ಣನಾಗಿದ್ದ, ಆದರೆ ತೇರ್ಗಡೆಯಾಗಿರುವುದಾಗಿ ಪಾಲಕರಿಗೆ ನಂಬಿಸಿ ದ್ವಿತೀಯ ಪಿಯುಸಿ ತರಗತಿಗಳಿಗೆ ಹೋಗಿ ಬರುತ್ತಿರುವುದಾಗಿ ನಾಟಕ ಮಾಡುತ್ತಿದ್ದ ಎಂಬ ಸತ್ಯಾಂಶ ಹೊರಬಿದ್ದಿದೆ.
    ನಕಲಿ ಐಡಿ ಕಾರ್ಡ್: ದ್ವಿತೀಯ ಪಿಯು ತರಗತಿಗೆ ಹಾಜರಾಗುತ್ತಿರುವುದಾಗಿ ನಂಬಿಸಲು ಕಾಲೇಜಿನ ನಕಲಿ ಐಡಿ ಕಾರ್ಡ್ ಮಾಡಿಸಿಕೊಂಡಿದ್ದ. ಪ್ರತಿದಿನ ಮನೆ ಬಿಟ್ಟು ಕಾಲೇಜು ಮುಗಿಯುವ ಅವಧಿಗೆ ಮನೆಗೆ ಹಿಂತಿರುಗುತ್ತಿದ್ದ ಇದರಿಂದ ಪಾಲಕರಿಗೆ ಯಾವುದೇ ಅನುಮಾನ ಬಂದಿರಲಿಲ್ಲ. ವರ್ಷವಿಡೀ ಕಾಲೇಜಿಗೂ ಹೋಗದೆ ಪರೀಕ್ಷೆಯನ್ನು ಬರೆದಿರಲಿಲ್ಲ. ಏತನ್ಮಧ್ಯೆ ದ್ವಿತೀಯ ಪಿಯು ಲಿತಾಂಶ ಪ್ರಕಟವಾಗುತ್ತಿದ್ದಂತೆ ಹೆದರಿದ ವಿದ್ಯಾರ್ಥಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಏ.10ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ಸ್ನೇಹಿತನೊಬ್ಬ ಗುರುವಾರ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts