More

    ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ, ಏ.21ರದು ಪ್ರತಿಭಟನಾ ಸಭೆ

    ಶಿವಮೊಗ್ಗ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ವೈಯಕ್ತಿಕ ಹಾಗೂ ಪ್ರೇಮ ಪ್ರಕರಣವೆಂದು ತನಿಖೆಯ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಇದನ್ನು ಖಂಡಿಸಿ ಏ.21ರ ಬೆಳಗ್ಗೆ 10.30ಕ್ಕೆ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

    ಪ್ರತಿಭಟನೆಗೆ ಹಿಂದು ಕಾರ್ಯಕರ್ತರು, ವಿವಿಧ ಹಿಂದಪರ ಸಂಘಟನೆಗಳು ಬೆಂಬಲ ನೀಡಲಿವೆ ಎಂದರು. ನೇಹಾ ಹತ್ಯೆ ಮಾತ್ರವಲ್ಲ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಹಾಡು ಹೇಳಿದ್ದಕ್ಕೆ ಲಕ್ಷ್ಮೀನಾರಾಯಣ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ರಾಮನವಮಿ ದಿನದಂದು ಕಾರಿನಲ್ಲಿ ಹೋಗುತ್ತಿದ್ದವರು ಜೈಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಕೆಲ ಮುಸ್ಲಿಮರು ಬೆದರಿಕೆ ಹಾಕಿದ್ದಾರೆ. ಈ ಸರ್ಕಾರದಲ್ಲಿ ಕಿಡಿಕೇಡಿಗಳಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಬಿ.ವೈ.ರಾಘವೇಂದ್ರ ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts