More

    ದೇಶದಿಂದ ಭಯೋತ್ಪಾದನೆ ತೊಲಗಲು ಶ್ರಮಿಸಿ, ಪದವಿಪೂರ್ವ ಶಿಕ್ಷಣ ಇಲಾಖೆ ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕಿ ಉಷಾದೇವಿ ಕರೆ

    ನೆಲಮಂಗಲ: ವಿಶ್ವಮಾನವತೆಯ ಸಂದೇಶವಿರುವ ಭಾರತೀಯ ಧರ್ಮ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕಿ ಉಷಾದೇವಿ ಅಭಿಪ್ರಾಯಪಟ್ಟರು.

    ನಗರದ ಮುರಳಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಯುವಶಕ್ತಿ ಹಾಗೂ ಮರಳಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿಶ್ವದ ಮುಂದುವರಿದ ರಾಷ್ಟ್ರಗಳು ಭಾರತೀಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಸನ್ನವೇಶದಲ್ಲಿ ಸರ್ವಧರ್ಮಗಳ ಶಾಂತಿ ತೋಟವಾಗಿರುವ ಭಾರತದತ್ತ ಮುಖಮಾಡುವಂತೆ ಮಾಡಿದರು. ದೇಶವನ್ನು ಕಾಡುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕಿ ಸುಭದ್ರ ರಾಷ್ಟ್ರ ನಿರ್ಮಾಣ ಮಾಡುವ ಹೊಣೆಗಾರಿಕೆಯನ್ನು ಯವಜನತೆ ಮರೆಯಬಾರದು ಎಂದರು.

    ಮುರಳಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಿ.ಎಚ್.ಪ್ರಕಾಶ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವ ಯುವಜನತೆ ಕೇವಲ ಉದ್ಯೋಗ ಗಿಟ್ಟಿಸಿಕೊಂಡರೆ ಸಾಲದು. ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಂಡು ದೇಶವನ್ನು ಮುನ್ನಡೆಸುವ ಜವಬ್ದಾರಿಯನ್ನು ಹೊರಬೇಕು ಎಂದರು.

    ಮುಖ್ಯಶಿಕ್ಷಕ ರಾಜಣ್ಣ, ಉಪನ್ಯಾಸಕರಾದ ಬಿ.ಪುಷ್ಪಾ, ಎಂ.ಟಿ.ಮಾರುತಿ, ಬಿ.ಅಂಜನಮೂರ್ತಿ, ರಾಮಯ್ಯ, ಯುವಶಕ್ತಿ ಸಂಘಟನೆ ಸಂಯೋಜಕರಾದ ಡಿ.ಆರ್.ಅನಂತ್‌ಕುಮಾರ್, ಭಾಸ್ಕರ್‌ಸಿಂಹ, ವಿನಯ್ ಆರ್., ಆರ್.ಪವಿತ್ರಾ, ಸಮಿತಿ ಸದಸ್ಯರಾದ ಎಸ್.ರಂಜಿತಾ, ಬಿ.ಮದನ್‌ಕುಮಾರ್, ಜೆ.ಚೇತನ್, ಹೇಮಾಕನ್ನಡತಿ, ತ್ರಿವೇಣಿ, ಎಸ್.ನಂದೀಶ್, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts