More

    ಮುಷ್ಕರಕ್ಕೆ ಗ್ರಾಮಿಣ ಶಿಕ್ಷಕರ ಸಂಘದಿಂದ ಬೆಂಬಲ

    ಕಡಬಿ: ಬೆಂಗಳೂರಿನ ಸ್ವತಂತ್ರೃ ಉದ್ಯಾನದಲ್ಲಿ (ಫ್ರೀಡಂ ಪಾರ್ಕ್) ಜ. 28ರಂದು ನಡೆಸುತ್ತಿರುವ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದಿಂದ ಹಮ್ಮಿಕೊಳ್ಳಲು ನಿರ್ಧರಿಸಿರುವ ಮುಷ್ಕರಕ್ಕೆ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳ ಸಂಘವು ಬೆಂಬಲ ನೀಡಲಿದೆ ಎಂದು ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯರ್ಶಿ ಸಂಗಮೇಶ ಖನ್ನಿನಾಯ್ಕರ ಹೇಳಿದ್ದಾರೆ.

    ಕಡಬಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಹೊಸ ವೃಂದ ಮತ್ತು ನೇಮಕಾತಿಗಳಿಂದ ಈಗಾಗಲೇ ಇಪ್ಪತ್ತು ಮೂವತ್ತು ವರ್ಷಗಳ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಹಿಂಬಡ್ತಿ ನೀಡಲಾಗುತ್ತದೆ.

    ಇದು ಸರಿಯಾದ ಕ್ರಮ ಅಲ್ಲ, ಬೇರೆ ಇಲಾಖೆಗಳಲ್ಲಿ ನೌಕರರ ಜೇಷ್ಠತೆ ಮತ್ತು ವಿದ್ಯಾರ್ಹತೆ ಆಧಾರದ ಮೇಲೆ ಮುಂಬಡ್ತಿ ನೀಡುತ್ತಿದ್ದಾರೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಈ ಕ್ರಮ ಅನುಸರಿಸುತ್ತಿಲ್ಲ. ರಾಜ್ಯದ 80 ಸಾವಿರ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು 6-8ನೇ ವರ್ಗಗಳಿಗೆ ಅವರ ಸೇವಾ ಜೇಷ್ಠತೆ ಮತ್ತು ಪದವಿ ಆಧಾರದ ಮೇಲೆ ವಿಲೀನಗೊಳಿಸಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.

    ತಾಲೂಕು ಅಧ್ಯಕ್ಷ ಎಸ್.ಜಿ. ಗೊಳಪ್ಪನವರ, ಕಾರ್ಯದರ್ಶಿ ಮಹಾಂತೇಶ ಮುಂಡರಗಿ, ಗೌರವಾಧ್ಯಕ್ಷ ಎಂ.ಜಿ. ಚರಂತಿಮಠ, ಪದಾಧಿಕಾರಿಗಳಾದ ಟಿ.ಬಿ. ಈರನಗೌಡರ, ಮಹಾಂತೇಶ ಮಬನೂರ, ಪ್ರಕಾಶ ಹೇಮರಡ್ಡಿ, ಮಹಾಂತೇಶ ಚಿಕ್ಕೂಪ್ಪ, ನಿಂಗಪ್ಪ ಪಟ್ಟೆದ, ಆನಂದ ಹಂಚಿನಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts