More

    ಬೀದಿ ದೀಪ ನಿರ್ವಹಣೆ ಗುತ್ತಿಗೆ ಅಕ್ರಮ ತನಿಖೆ, ಆರೋಪಿತರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ, ಲೋಕಾಯುಕ್ತರಿಗೆ ಕಾಂಗ್ರೆಸ್​ ಸದಸ್ಯರು ಮನವಿ

    ವಿಜಯವಾಣಿ ಸುದ್ದಿಜಾಲ, ಗದಗ
    ಗದಗ ನಗರದ ಬೀದಿ ದೀಪ ನಿರ್ವಹಣೆ ಗುತ್ತಿಗೆಯಲ್ಲಿ 2018 ರಿಂದ 2023ರ ವರೆಗೆ ಕೊಟ್ಯಂತರ ರೂ. ಭ್ರಷ್ಟಾಚಾರ, ನಿಯಮ ಬಾಹಿರ ಟೆಂಡರ್​ ಪ್ರಕ್ರಿಯೆ, ಬೀದಿದೀಪಗಳ ಹಾಗೂ ವಸ್ತುಗಳ ದುರ್ಬಳಕೆ ಸೇರಿ ಅಕ್ರಮಗಳ ನಡೆದಿವೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿತರಿಗೆ ತಕ್ಕ ಶಿೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್​ ನಗರಸಭೆ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ಹಾಗೂ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದರು.
    ಮನವಿ ಸಲ್ಲಿಸಿ ಮಾತನಾಡಿದ ನಗರಸಭೆ ಸದಸ್ಯ ಹಾಗೂ ಮುಖ್ಯಸಚೇತಕ ಚಂದ್ರಶೇಖರ್​ ಕರಿಸೋಮನಗೌಡರ್​ “ನಗರಸಭೆ ಪೌರಾಯುಕ್ತರು, ಅಧಿಕಾರಿಗಳು ಬಿಜೆಪಿ ಸದಸ್ಯರು ಹೇಳಿದಂತೆ ನಡೆದುಕೇಳುತ್ತ ಅಕ್ರಮ ಎಸಗುತ್ತಿದ್ದಾರೆ. ಇತ್ತೀಚೆಗೆ ಜರುಗಿದ ಟೆಂಡರ್​ ಪ್ರಕ್ರಿಯೆಯಲ್ಲಿ ಅಕ್ರಮ ಸಾಭಿತಾಗಿದೆ. ಹಲವು ಲೋಪದೋಷಗಳು ಬೆಳಕಿಗೆ ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತ ಗಂಗಪ್ಪ ಅವರಿಗೆ ನೋಟೀಸ್​ ನೀಡಿದ್ದಾರೆ. ಟೆಂಡರ್​ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಆದೇಶಿಸಿದ್ದಾರೆ. ಪೌರಾಯುಕ್ತ ಗಂಗಪ್ಪ ಅವರು ತಪ್ಪೊಪ್ಪಿಗೆ ಪತ್ರ ನೀಡುವ ಮೂಲಕ ಕಾರ್ಯಚ್ಯುತಿ ಎಸಗಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘಿಸಿ ಟೆಂಡರ್​ ನೀಡಲಾಗಿದೆ ಎಂಬುದು ದಾಖಲೆಗಳಿಂದ ಸಾಭಿತಾಗುತ್ತದೆ. ಹಾಗಾಗಿ, 2018 ರಿಂದ 2023ರ ವರೆಗೆ ಬೀದಿ ದೀಪ ನಿರ್ವಹಣೆ ಗುತ್ತಿಗೆ ಪ್ರಕ್ರಿಯೆ, ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ, ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
    ಗದಗ ತಹಸೀಲ್ದಾರ ಕಚೇರಿ ಎದುರು ಅಳವಡಿಸಿದ ಹೊಸ ಬೀದಿ ದೀಪಗಳಿಗೆ ಹಳೆಯ ಕೇಬಲ್​ ಅಳವಡಿಸಿ ಬಿಲ್​ ಪಾವತಿಸಲಾಗಿದೆ ಎಂದು ಕಾಂಗ್ರೆಸ್​ ಸದಸ್ಯರೆಲ್ಲರೂ ಆರೋಪಿಸಿದರು.
    ಈ ಸಂದರ್ಭದಲ್ಲಿ 2ನೇ ವಾರ್ಡ್​ ಸದಸ್ಯ ಸುರೇಶ ಕಟ್ಟಿಮನಿ, 22ನೇ ವಾರ್ಡ್​ ಸದಸ್ಯ ರವಿ ಕಮತರ, 8ನೇ ವಾರ್ಡ್​ ಸದಸ್ಯೆ ಪೂಣಿರ್ಮಾ ಭಾರದ್ವಾಜ, 6ನೇ ವಾರ್ಡ್​ ಸದಸ್ಯೆ ಲಕ್ಷ$್ಮವ್ವ ಭಜಂತ್ರಿ ಹಾಗೂ 21ನೇ ವಾರ್ಡ್​ ಸದಸ್ಯ ಮೆಹಬೂಬಸಾಭ್​ ಇದ್ದರು.

    ಆಗ್ರಹಗಳೇನು:

    1. ಬೀದಿ ದೀಪಗಳ ನಿರ್ವಹಣೆ ಗುತ್ತಿಗೆಯನ್ನು ವಾಷಿರ್ಕ 98 ಲಕ್ಷ ರೂ. ಗೆ ತಾಂತ್ರಿಕ ಮಂಜೂರಾತಿ ಪಡೆದು 1.37 ಕೋಟಿ ರೂ. ಮೊತ್ತಕ್ಕೆ ಕಾರ್ಯಾನುದೇಶ ನೀಡಿದ ಅಕ್ರಮ ತನಿಖೆ ಆಗಬೇಕು.
    2. 2018 ರಿಂದ 2023ರ ವರೆಗೆ ಬೀದಿ ದೀಪ ನಿರ್ವಹಣೆ ಗುತ್ತಿಗೆ ದಾಖಲೆಗಳ ಪರಿಶೀಲನೆ.
    3. ಕಳೆದ 5 ವರ್ಷಗಳಲ್ಲಿ ಬದಲಾಯಿಸಿ ಹಳೆಯ ಬೀದಿದೀಪಗಳು ಸಂಗ್ರಹ ಎಲ್ಲಿ ಮಾಡಲಾಗಿದೆ ಎಂಬುದರ ತನಿಖೆ ಆಗಬೇಕು.
    4. ಜಿಲ್ಲಾಧಿಕಾರಿಗಳು ಟೆಂಡರ್​ ರದ್ದು ಮಾಡಿದರೂ, ಹೊಸ ಗುತ್ತಿಗೆ ನೀಡಿದ್ದರ ಬಗ್ಗೆ ತನಿಖೆ ನಡೆಸಬೇಕು.
    5. ಟೆಂಡರ್​ ಇಲ್ಲದೇ ಕೇವಲ ಕಾರ್ಯಾದೇಶ ಆಧಾರದಲ್ಲಿ ಕೋಟ್ಯಂತರ ರೂ. ಸಾಮಾನ್ಯನಿಧಿ ಬಳಕೆ ಮಾಡಿದ್ದಾರೆ.

    ಕೋಟ್​:
    ಜನರು ಕಷ್ಟಪಟ್ಟು ದುಡಿತ ಹಣವನ್ನು ತೆರಿಗೆ ಮೂಲಕ ನಗರಸಭೆಗೆ ಕಟ್ಟುತ್ತಾರೆ. ಅಂತಹ ಹಣವನ್ನು ಕೆಲವು ಜನಪ್ರತಿನಿಧಿಗಳು ದುರ್ಬಳಕೆ ಮಾಡುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಕೋಟ್ಯಂತರ ರೂ. ಪೋಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಯೋಜನೆ ನಿರ್ದೇಶಕರು ಕಾನೂನು ಕ್ರಮ ಕೈಗೊಳ್ಳಬೇಕು.
    – ಚಂದ್ರಶೇಕರ ಕರಿಸೋಮನಗೌಡರ, ಕಾಂಗ್ರೆಸ್​ ಸದಸ್ಯ

    ಕೋಟ್​:
    ನಗರಸಭೆ ಸದಸ್ಯರಿಗೆ ಯಾರಿಗೂ ತಿಳಿಯದಂತೆ ಹೊಸ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ನೀಡಿದ ದಾಖಲೆಗಳನ್ನು ಕೆಲ ಸದಸ್ಯರು ಮತ್ತು ಅಧಿಕಾರಿ ವರ್ಗ ಇತರೆ ಸದಸ್ಯರಿಗೆ ನೀಡುತ್ತಿಲ್ಲ. ಜನಪ್ರತಿನಿಧಿಗಳಿಗೆ ತಿಳಿಯದಂತೆ ಅಧಿಕಾರಿ ವರ್ಗ ಈ ರೀತಿ ನಡೆದುಕೊಳ್ಳುತ್ತಿದ್ದು, ಮತ್ತಷ್ಟು ಅನುಮಾನ ಸೃಷ್ಟಿ ಆಗುತ್ತಿದೆ.
    – ಮೆಹಬೂಬ ಸಾಬ್​, ಕಾಂಗ್ರೆಸ್​ ಸದಸ್ಯ

    ಕೋಟ್​:
    ಅಲ್ಪಸಂಖ್ಯಾತ ಮತ್ತು ಬಡವರ ಕಾಲೋನಿಗಳಲ್ಲಿ ಬೀದಿ ದೀಪಗಳ ನಿರ್ವಹಣೆಯೇ ಇಲ್ಲ. ಆದರೂ, ಲಾಂತರ ರೂ. ಬಿಲ್​ ಪ್ರತಿತಿಂಗಳು ಗುತ್ತಿಗೆದಾರನಿಗೆ ಬಿಲ್​ ಪಾವತಿ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಜನರ ಹಣ ಪೋಲಾಗದಂತೆ ಕ್ರಮ ವಹಿಸಬೇಕು.
    ರವಿಕುಮಾರ ಕಮತರ, ಕಾಂಗ್ರೆಸ್​ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts